ಮಂಗಳೂರು: ಕರ್ನಾಟಕ ಅಮೀರ್ ಎ ಶರೀಯತ್ ಮುಖ್ಯಸ್ಥರಾದ ಮೌಲಾನ ಸಗೀರ್ ಅಹಮ್ಮದ್ ರವರು ಹಿಜಾಬ್ ಕುರಿತ ಹೈಕೋರ್ಟ್ ತೀರ್ಪಿಗೆ ವಿಷಾದ ವ್ಯಕ್ತಪಡಿಸಿ ನಾಳೆ ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಬೆಂಬಲ ಸೂಚಿಸಿದೆ.
ಇತ್ತೀಚೆಗಿನ ಕರ್ನಾಟಕ ಉಚ್ಛ ನ್ಯಾಯಾಲಯದ ಹಿಜಾಬ್ ಕುರಿತ ತೀರ್ಪುವಿನಲ್ಲಿ ಇಸ್ಲಾಮಿನಲ್ಲಿ ಮುಸ್ಲಿಮ್ ಮಹಿಳೆಯರಿಗೆ ಹಿಜಾಬ್ ಮಹತ್ವವಲ್ಲ ,ಮತ್ತು ಹಿಜಾಬ್ ಇಸ್ಲಾಮಿನಲ್ಲಿ ಅವಿಭಾಜ್ಯ ಅಂಗ ವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುವಿಕೆಯನ್ನು ವಿಮರ್ಶಿಸಿ ಕರ್ನಾಟಕಾದ್ಯಂತ ಮಾರ್ಚ್ 17 ರಂದು ಸ್ವಯಂ ಪ್ರೇರಿತ ವ್ಯವಹಾರ ಸ್ಥಗಿತಕ್ಕೆ ಕರೆ ನೀಡಲಾಗಿದೆ. ಈ ಕರೆಗೆ ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಬೆಂಬಲ ಸೂಚಿಸಿದೆ.
ತೀರ್ಪು ಸಾಂವಿಧಾನಿಕ ಹಕ್ಕು, ಧಾರ್ಮಿಕ ಸ್ವಾತಂತ್ರ್ಯ ಮತ್ತು ಶಿಕ್ಷಣ ಹಕ್ಕುಗಳನ್ನು ಕಸಿದು ಕೊಳ್ಳುವ ಸ್ಥಿತಿಯನ್ನು ನಿರ್ಮಾಣ ಮಾಡಿದೆ.
ಈ ನಿಟ್ಟಿನಲ್ಲಿ ದ.ಕ.ಜಿಲ್ಲೆಯಲ್ಲಿ ಸ್ವಯಂ ಪ್ರೇರಿತ ಶಾಂತಿಯುತ ವ್ಯವಹಾರ ಸ್ಥಗಿತ ಮಾಡಬೇಕಾಗಿ ವಿನಂತಿ ಮತ್ತು ಈ ಸ್ಥಗಿತ ಶಾಂತಿಯುತ ವಾಗಿರುತ್ತದೆ. ಕಾನೂನು ,ಶಾಂತಿ ಸುವ್ಯವಸ್ಥೆ ಪಾಲನೆಗೆ ಪೂರಕ ವಾಗಿರಲಿ ಎಂದು ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ ಅಧ್ಯಕ್ಷರಾದ ಕೆ.ಅಶ್ರಫ್ ಹೇಳಿದ್ದಾರೆ.


