ರಿಯಾದ್: ಹಜ್ ಮತ್ತು ಉಮ್ರಾ ಸಚಿವಾಲಯವು ಮಕ್ಕಾ ಮತ್ತು ಮದೀನಾ ಹರಮ್ಗಳಿಗೆ ಪ್ರವೇಶಿಸುವ ಯಾತ್ರಾರ್ಥಿಗಳಿಗೆ ರೋಗನಿರೋಧಕ ಸ್ಥಿತಿ ಪರಿಶೀಲನೆಯನ್ನು ತೆಗೆದುಹಾಕಿದೆ ಎಂದು ಘೋಷಿಸಿದೆ. ಎರಡು ಹರಮ್ಗಳಲ್ಲಿ ಅಸ್ತಿತ್ವದಲ್ಲಿರುವ ಎಲ್ಲಾ ಆರೋಗ್ಯ ಮುನ್ನೆಚ್ಚರಿಕೆಗಳನ್ನು ಹಿಂತೆಗೆದುಕೊಳ್ಳುವ ಕುರಿತು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ ಸುತ್ತೋಲೆಯಲ್ಲಿ ಇದನ್ನು ಹೇಳಲಾಗಿದೆ.
ಉಮ್ರಾ ಪರವಾನಿಗೆಯನ್ನು ಪಡೆಯಲು ವಿದೇಶಿಯರಿಗೆ ರೋಗನಿರೋಧಕ ಸ್ಥಿತಿಯ ಅಗತ್ಯವಿಲ್ಲ. ಹಜ್ ಮತ್ತು ಉಮ್ರಾ ಸಚಿವಾಲಯವು ಸಾಂಸ್ಥಿಕ ಕ್ವಾರಂಟೈನ್, ಹೋಮ್ ಕ್ವಾರಂಟೈನ್ ಮತ್ತು ಪಿಸಿಆರ್ ಋಣಾತ್ಮಕ ಪ್ರಮಾಣಪತ್ರದ ಅವಶ್ಯಕತೆಗಳನ್ನು ಸಹ ಮನ್ನಾ ಮಾಡಿದೆ.
ಕಳೆದ ವಾರ, ಗೃಹ ಸಚಿವಾಲಯವು ದೇಶದಲ್ಲಿ ಕೋವಿಡ್ನ ಮುನ್ನೆಚ್ಚರಿಕೆ ಕ್ರಮಗಳಲ್ಲಿ ಬಹುತೇಕ ನಿರ್ಬಂಧಗಳನ್ನು ಮನ್ನಾ ಮಾಡಿತ್ತು. ಇದರನ್ವಯ, ಎರಡು ಹರಂ ಪ್ರವೇಶಕ್ಕೆ, ಉಮ್ರಾ ನಿರ್ವಹಿಸಲು ಮತ್ತು ಹರಂಗಳಲ್ಲಿ ಪ್ರಾರ್ಥನೆ ನಿರ್ವಹಿಸಲು ಪರವಾನಗಿ ಲಭಿಸಲು ವಿಧಿಸಲಾದ ಆರೋಗ್ಯ ಮುನ್ನೆಚ್ಚರಿಕೆಗಳು ಮತ್ತು ಷರತ್ತುಗಳನ್ನು ಹಜ್ ಮತ್ತು ಉಮ್ರಾ ಸಚಿವಾಲಯ ಮತ್ತು ಎರಡು ಹರಂ ಕಚೇರಿಯು ಸಡಿಲಿಸಿತ್ತು.
ಹರಮ್ಗಳಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಮತ್ತು ಮಸ್ಜಿದ್ ಅಲ್-ಹರಾಮ್ನಲ್ಲಿ ಪ್ರಾರ್ಥನೆಗಾಗಿ ಮತ್ತು ಮಸ್ಜಿದ್ ಅಲ್-ನಬವಿಗೆ ಭೇಟಿ ನೀಡಲು ಪರವಾನಗಿಗಳನ್ನು ಪಡೆಯಬೇಕು ಎಂಬ ಷರತ್ತುಗಳನ್ನು ಮನ್ನಾ ಮಾಡಲಾಗಿದೆ.
















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
SჄS ಬೆಳ್ತಂಗಡಿ ಝೋನ್: ಸಾಂತ್ವನ ಫಂಡ್ ಹಸ್ತಾಂತರ
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಳಿಗೆ ಮರು ಅರ್ಜಿ ಕಡ್ಡಾಯ- ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು