ಕಾಸರಗೋಡು: ಸುನ್ನಿ ಸಮೂಹ ಅತ್ಯಧಿಕ ಸಂಕಷ್ಟ ಹೊಂದಿದ ದಿನಗಳಲ್ಲಿ ಧೈರ್ಯ ತುಂಬಿದ್ದು ತ್ವಾಹಿರುಲ್ ಅಹ್ದಲ್ ತಂಙಳ್ ರವರ ಧೀರವಾದ ನೇತೃತ್ವ ಆಗಿತ್ತು ಎಂದು ಸಮಸ್ತ ಕೇಂದ್ರ ಮುಶಾವರ ಸದಸ್ಯರಾ ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಲ್ ಹೇಳಿದರು.ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ಹದಿನಾರನೇ ಉರೂಸ್ ಮುಬಾರಕ್ ಉದ್ಘಾಟಿಸುತ್ತಾ ಅವರು ಮಾತನಾಡಿದರು.
ಝೈನುಲ್ ಮುಹಖ್ಖಿಕೀನ್ ಸಯ್ಯಿದ್ ತ್ವಾಹಿರುಲ್ ಅಹ್ದಲ್ ತಂಙಳ್ ರವರು ಉತ್ತರ ಕೇರಳದ ಆಧ್ಯಾತ್ಮಿಕ ವಿದ್ಯಾಭ್ಯಾಸ ಕ್ಷೇತ್ರದಲ್ಲಿ ಕ್ರಾಂತಿ ಸೃಷ್ಟಿಸಿದ ನಾಯಕರಾಗಿದ್ದಾರೆ.
ಕಲಿಯುತ್ತಿರುವ ಕಾಲದಲ್ಲಿಯೇ ನಿಷ್ಕಳಂಕವಾದ ನಡವಳಿಕೆಯಿಂದ ಜೀವನ ನಡೆಸಿದ ತ್ವಾಹಿರುಲ್ ಅಹ್ದಲ್ ತಂಙಳ್ ರವರು ಗುರುವರ್ಯರ ನಿರ್ದೇಶನದಂತೆ ದೀನೀ ದಅವಾ ಕ್ಷೇತ್ರದಲ್ಲಿ ತೊಡಗಿಸಿಕೊಂಡರು.
ಉತ್ತರ ಕೇರಳದಲ್ಲಿ ಆಧ್ಯಾತ್ಮಿಕ ವೈಜ್ಞಾನಿಕ ಕಾರುಣ್ಯ ಕಾರ್ಯಗಳಿಗಾಗಿ ತಮ್ಮ ಜೀವನವನ್ನು ಸಮರ್ಪಿಸಿದರು.ಜೀವನದ ಎಲ್ಲಾ ಹಂತಗಳಲ್ಲೂ ನಿಷ್ಠೆಯಿಂದ ಕಾರ್ಯಾಚರಣೆ ಮಾಡಿದುದರ ವಿಜಯವನ್ನಾಗಿದೆ ನಾವು ಇಂದು ಕಾಣುತ್ತಿರುವ ಸಂಸ್ಥೆಗಳ ಅಭಿವೃದ್ಧಿಗೆ ಕಾರಣ ಎಂದು ಕುಂಬೋಲ್ ತಂಙಳ್ ಹೇಳಿದರು.
ಪಳ್ಳಂಗೋಡು ಅಬ್ದುಲ್ ಖಾದರ್ ಮದನಿ ಅಧ್ಯಕ್ಷತೆ ವಹಿಸಿದರು.