janadhvani

Kannada Online News Paper

ಹಿಜಾಬ್ ರಹಿತ ಶಾಲೆಗೆ ಕಳಿಸುವುದು ಪೋಷಕರಿಗೆ ಬಿಟ್ಟ ವಿಚಾರ- ಎಸ್ಡಿಪಿಐ ಜಿಲ್ಲಾಧ್ಯಕ್ಷ

ಉಡುಪಿ: ನಿನ್ನೆ ಹಿಜಾಬ್ ವಿವಾದದ ಬಗ್ಗೆ ಜರುಗಿದ ಶಾಂತಿಸಭೆಯ ಬಳಿಕ ಎಸ್ಬಿಪಿಐ ಉಡುಪಿ ಜಿಲ್ಲಾಧ್ಯಕ್ಷ ನಝೀರ್ ಅಹ್ಮದ್ ಅವರು ನೀಡಿರುವ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಶಾಂತಿಸಭೆಯಲ್ಲಿ ರಘುಪತಿ ಭಟ್ ಸಹಿತ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ಹಿಜಾಬ್ ವಿವಾದಕ್ಕೆ ಸಂಬಂಧಪಟ್ಟಂತೆ ಹೈಕೋರ್ಟ್, ಅಂತಿಮ ತೀರ್ಪು ಬರುವವರೆಗೆ ಎಲ್ಲಾ ಕಾಲೇಜುಗಳಲ್ಲಿ ಯಾವುದೇ ಧಾರ್ಮಿಕ ವಸ್ತ್ರ ಧರಿಸದಂತೆ ಮಧ್ಯಂತರ ಆದೇಶ ಹೊರಡಿಸಿತ್ತು. ನ್ಯಾಯಾಲಯದ ಆದೇಶದಂತೆ ಫೆ.14 ರಂದು ಕಾಲೇಜು ಪುನರಾರಂಭಗೊಂಡಿತ್ತು. ಅದರ ಪೂರ್ವಭಾವಿಯಾಗಿ ಸರ್ವಪಕ್ಷ ಸಭೆ ಆಯೋಜಿಸಲಾಗಿತ್ತು.

ಸದ್ರಿ ಸಭೆಯಲ್ಲಿ ಎಸ್ಬಿಪಿಐ ಉಡುಪಿ ಜಿಲ್ಲಾಧ್ಯಕ್ಷರಾದ ನಝೀರ್ ಅಹ್ಮದ್ ಅವರು ನೀಡಿರುವ ಹೇಳಿಕೆಯು ಎಲ್ಲರಿಗೂ ಆಶ್ಚರ್ಯ ಮತ್ತು ಚಿಂತಾ ಚಕಿತಗೊಳಿಸಿದೆ. ನಝೀರ್ ಅಹಮದ್ ಮಾತನಾಡಿ, ಬುದ್ಧಿವಂತರ ಜಿಲ್ಲೆಯಲ್ಲಿ ನಡೆಯಬಾರದ ಘಟನೆ ನಡೆದಿದೆ. ಹಿಜಾಬ್ ವಿವಾದ ಸೌಹಾರ್ದಯುತವಾಗಿ ಬಗೆಹರಿದು ಜಿಲ್ಲೆಯಲ್ಲಿ ಶಾಂತಿ ಸೌಹಾರ್ದ ನೆಲೆಸಬೇಕು’ ಎಂದು ಅಭಿಪ್ರಾಯಪಟ್ಟರು.

ಹಿಜಾಬ್ ವಿಚಾರದಲ್ಲಿ ಕೆಲವು ವಿದ್ಯಾರ್ಥಿನಿಯರು ಸಾಂವಿಧಾನಿಕ ಹಕ್ಕುಗಳಿಗೆ ಒತ್ತಾಯಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಹಿಜಾಬ್ ಧರಿಸುವುದು, ಬಿಡುವುದು ವಿದ್ಯಾರ್ಥಿನಿಯರ ವೈಯಕ್ತಿಕ ಸ್ವಾತಂತ್ರ್ಯವಾಗಿದ್ದು ಎಸ್‌ಡಿಪಿಐ ಮಧ್ಯೆ ಪ್ರವೇಶಿಸುವುದಿಲ್ಲ ಎಂದರು.

ಇಷ್ಟರವರೆಗೆ ಸಿಎಫ್‌ಐ ಮತ್ತು ಪಿಎಫ್‌ಐ ನಡೆಸಿದ ಪ್ರತಿಭಟನೆಗೆ ವಿರುದ್ಧ ನಿಲುವು ಪ್ರಕಟಿಸಿದ ಬಗ್ಗೆ ನಝೀರ್ ಅವರು ಸ್ವಪಕ್ಷೀಯರಿಂದಲೇ ಟೀಕೆಗೊಳಗಾಗಿದ್ದಾರೆ.

“ಹಿಜಾಬ್ ರಹಿತವಾಗಿ ಶಾಲೆಗೆ ಕಳುಹಿಸುವುದು ಪೋಷಕರಿಗೆ ಬಿಟ್ಟ ತೀರ್ಮಾನ” ಎಂದಿದ್ದಕ್ಕೆ ಪ್ರತಿಕ್ರಿಯಿಸಿದ ಒಬ್ಬರು, ಶಾಂತಿಯುತವಾಗಿ ಬಗೆಹರಿಸಲು ಇಷ್ಟು ದಿವಸ ಪ್ರತಿಭಟನೆ ಮಾಡಿ ಈಗ ನೆನಪಾಯಿತೆ ? ಎಂದು ಪ್ರಶ್ನಿಸಿದ್ದರು.

ಮತ್ತೊಬ್ಬರು ಸಿಎಫ್‌ಐ ಕಾರ್ಯಕರ್ತ, ನಝೀರ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು, ಹಿಜಾಬ್ ರಹಿತವಾಗಿ ಕಾಲೇಜಿಗೆ ಕಳುಹಿಸುವುದಾದರೆ ಇಷ್ಟು ದಿವಸ ಹೋರಾಟ ಮಾಡಿದ್ದು ಯಾವ ಪುರುಷಾರ್ಥಕ್ಕೆ ಅಂತ ಕ್ರೋಧ ವ್ಯಕ್ತಪಡಿಸಿದ್ದಾರೆ.

ಮತ್ತೊಬ್ಬ ಎಸ್ಟಿಪಿಐ ಕಾರ್ಯಕರ್ತ, ಅವತ್ತು ಶಾಸಕ ಯುಟಿಕೆ ಹೇಳಿದ ಸಣ್ಣ ವಿಚಾರದ ಬಗ್ಗೆ ತೀವ್ರ ಅಕ್ರೋಶ ವ್ಯಕ್ತಪಡಿಸಿದ್ದೆ. ಇವತ್ತು ನಮ್ಮವರೇ ಹಿಜಾಬ್ ರಹಿತ ಹೇಳಿಕೆ ಕೊಟ್ಟು ನಮ್ಮನ್ನು ತೀವ್ರ ಮುಜುಗರಕ್ಕೀಡುಮಾಡಿದ್ದಾರೆ ಎಂದು ನೋವು ವ್ಯಕ್ತಪಡಿಸಿದ್ದಾರೆ.

error: Content is protected !! Not allowed copy content from janadhvani.com