ಕುಶಾಲನಗರ : ಇಲ್ಲಿನ ಪಾಲಿಟೆಕ್ನಿಕ್ ಕಾಲೇಜಿನ ಹಾಸ್ಟೆಲಿನಲ್ಲಿ ಗೂಂಡಾಗಳಿಂದ ಹಲ್ಲೆಗೊಳಗಾದ ಎಸ್ಸೆಸ್ಸೆಫ್ ಕಾರ್ಯಕರ್ತ ರಾಝಿಕ್ ನನ್ನು ಎಸ್ಸೆಸ್ಸೆಫ್ ಕೊಡಗು ಜಿಲ್ಲಾ ಸಮಿತಿ ನಾಯಕರು ಭೇಟಿ ಮಾಡಿ, ಘಟನೆಯ ಸಮಗ್ರ ವಿವರನ್ನು ಪಡೆದು ಆರೋಗ್ಯವನ್ನು ವಿಚಾರಿಸಿದರು.
ಕುಶಾಲನಗರ ವೃತ್ತ ನಿರೀಕ್ಷಕರನ್ನು ಭೇಟಿ ಮಾಡಿ ಪುಕಾರಿನ ಸಂಪೂರ್ಣ ವಿವರನ್ನು ಪಡೆದ ನಂತರ ತಪ್ಪಿತಸ್ಥರ ವಿರುದ್ಧ ಕಠಿಣವಾದ ಕ್ರಮವನ್ನು ಕೈಗೊಳ್ಳಲು ಆಗ್ರಹಿಸಿದರು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾದ ಕ್ಷಮಾ ಮಿಶ್ರಾ ಅವರ ಕಛೇರಿಗೆ ಭೇಟಿ ಮಾಡಿ ಇದರಲ್ಲಿ ಶಾಮೀಲಾಗಿರುವ ಪ್ರತಿಯೊಬ್ಬರನ್ನು ಸೂಕ್ತ ತನಿಖೆಗೆ ಒಳಪಡಿಸುವಂತೆ, ಅದೇ ರೀತಿ ಅಮಾಯಕನಾದ ರಾಝಿಕ್ ನ ಮೇಲೆ ಹಲ್ಲೆ ಮಾಡಿದಂತಹ ಪೋಲಿಸರ ಬಗ್ಗೆಯೂ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷರಾದ ಶಾಫಿ ಸಅದಿ, ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಜುನೈದ್ ಅಮ್ಮತಿ, ಯೂಸುಫ್ ಝೈನಿ ಇದ್ದರು.