janadhvani

Kannada Online News Paper

ಹೊನ್ನಾಳದಲ್ಲಿ ಕಣ್ಣಿನ ಆರೋಗ್ಯ ತಪಾಸಣಾ ಶಿಬಿರ

ಬ್ರಹ್ಮಾವರ: ಕಣ್ಣಿನ ಆರೋಗ್ಯ ತಪಾಸಣಾ ಶಿಬಿರ, ಆಯ್ಯುಷ್ಮಾನ್ ಕಾರ್ಡ್ ಈಶ್ರಮ್ ಕಾರ್ಡ್ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ಕರ್ನಾಟಕ ಮುಸ್ಲಿಂ ಜಮಾಅತ್ ಹಾರಾಡಿ ಗ್ರಾಮ ಸಮಿತಿಯ ವತಿಯಿಂದ ಪ್ರಸಾದ್ ನೇತ್ರಾಲಯ ಉಡುಪಿ, ರೋಟರಿ ರೋಯಲ್ ಬ್ರಹ್ಮಾವರ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಫಿ, ಜಾಮಿಯಾ ಮಸೀದಿ, ಎಸ್ಸೆಸ್ಸೆಫ್ ಹೊನ್ನಾಳ ಇವರ ಸಹಕಾರದೊಂದಿಗೆ ನಡೆಯಿತು.

ಶಾದಿ ಮಹಲ್ ನಲ್ಲಿ ನಡೆದ ಕಾರ್ಯಕ್ರಮಕ್ಕೆ ಹೊನ್ನಾಳ ಮಸೀದಿ ಪೇಶಿ ಇಮಾಮ್ ಮೌಲಾನಾ ಫಕ್ರುದ್ದೀನ್ ರಝ್ವಿ ಕುರ್ ಆನ್ ಪಾರಾಯಣ ದೊಂದಿಗೆ ಚಾಲನೆ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾರಾಡಿ ಗ್ರಾಮ ಮುಸ್ಲಿಂ ಜಮಾಅತ್ ಸಮಿತಿ ಅಧ್ಯಕ್ಷ ಇಮ್ರಾನ್ ಹೆನ್ನಾಬೈಲ್ ರವರು ವಹಿಸಿದ್ದರು ಈ ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ಜಿಲ್ಲಾ ಮುಸ್ಲಿಂ ಜಮಾಅತ್ ಕಾರ್ಯದರ್ಶಿ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ನಿರ್ವಹಿಸಿದರು.

ಬ್ರಹ್ಮಾವರ ತಾಲೂಕು ಮುಸ್ಲಿಂ ಜಮಾಅತ್ ಅಧ್ಯಕ್ಷ ಜೆ ಮುಷ್ತಾಕ್ ಅಹ್ಮದ್ ,ಡಾ ಸೀಯೋಮ,ರೋಟೆರಿಯನ್ ರಾಜರಾಮ ಶೆಟ್ಟಿ, ನಾಗರಾಜ ಶೆಟ್ಟಿ ಹೊನ್ನಾಳ, ಇಮಾಮ್ ಸಾಹೇಬ್ ಟಂಕಸಾಲಿ, ಹಾಗೂ ಮೋಹನ್ ದಾಸ್ ಪ್ರಸಾದ್ ನೇತ್ರಾಲಯ ಉಡುಪಿ ಇವರುಗಳು ಸಾಂದರ್ಭಿಕವಾಗಿ ಮಾತನಾಡಿದರು
ಆಪತ್ಭಾಂದವ ರಫೀಕ್ ದೊಡ್ಡಣ್ಣಗುಡ್ಡೆ ಯವರಿಗೆ ಈ ವೇದಿಕೆಯಲ್ಲಿ ಸನ್ಮಾನಿಸಲಾಯಿತು
ಜಿಲ್ಲಾ ಮುಸ್ಲಿಂ ಜಮಾಅತ್ ಕಾರ್ಯಾಧ್ಯಕ್ಷ ಸುಬ್ಹಾನ್ ಅಹ್ಮದ್ ಹೊನ್ನಾಳ ಸ್ವಾಗತಿಸಿದರು, ಇಮ್ತಿಯಾಝ್ ಹೊನ್ನಾಳ ಕಾರ್ಯಕ್ರಮ ನಿರೂಪಿಸಿದರು.