ರಿಯಾದ್: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಮಿನಿ ಸೂಪರ್ ಮಾರ್ಕೆಟ್ ಒಳಗೆ ನುಗ್ಗಿದ ಘಟನೆ ಸೌದಿ ಅರೇಬಿಯಾದ ಅಲ್ ಖಸೀಂನಲ್ಲಿ ಜ.10 ರಂದು ನಡೆದಿದೆ. ಘಟನೆ ವೇಳೆ ಅಂಗಡಿಯಲ್ಲಿ ಸಾಮಾನು ಖರೀದಿಸಲು ಬಂದಿದ್ದ ಸ್ಥಳೀಯ ಮಹಿಳೆ, ಅಂಗಡಿ ಸಿಬ್ಬಂದಿ ಹಾಗೂ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಾಮಾನುಗಳನ್ನು ಖರೀದಿಸಿದ ಮಹಿಳೆ, ಹಣ ಪಾವತಿಸಲು ಕೌಂಟರ್ ಮುಂದೆ ಕಾಯುತ್ತಿರುವ ವೇಳೆ ಭಾರೀ ಶಬ್ದದೊಂದಿಗೆ ಕಾರು ಅನಿರೀಕ್ಷಿತವಾಗಿ ಅಂಗಡಿಗೆ ನುಗ್ಗಿದೆ.ಅಪಘಾತದ ಶಬ್ದ ಕೇಳಿ ಮಹಿಳೆ ಹೊರಗೆ ಓಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಅಂಗಡಿಯ ಮುಂಭಾಗದ ಗಾಜುಗಳನ್ನು ಒಡೆದುಹಾಕಿ ಒಳನುಗ್ಗಿದ ಕಾರು, ಅಂಗಡಿಗೆ ಅಪಾರ ನಾಶ, ನಷ್ಟವನ್ನುಂಟುಮಾಡಿದೆ.ಸೌದಿ ಪ್ರಜೆ ಚಲಾಯಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಅಪಘಾತದ ದೃಶ್ಯಗಳು ಮಿನಿಮಾರ್ಕೆಟ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
🛑شاهد.. سيارة مسرعة تقتحم محل تموينات في #القصيم ونجاة امرأة من الموت بأعجوبة
وقع الحادث بتاريخ 10 يناير أي قبل 3 أيام، حيث أظهر امرأة تحضر بعض الأغراض من المحل وبينما ذهبت لتحاسب الكاشير، فوجئت باقتحام المركبة للمحل.
الحمدلله لا اصابات.#السعودية #مصر #القاهرة #الرياض pic.twitter.com/tG9H0uY6xf
— م. صالح الخراشي (@saleh1u1) January 13, 2022