janadhvani

Kannada Online News Paper

ಸೌದಿ ಅರೇಬಿಯಾದ ಜುವೆಲ್ಲರಿಗಳ ದೇಶೀಕರಣ:ವ್ಯಾಪಾರ ವಹಿವಾಟಿನಲ್ಲಿ ಹಿನ್ನಡೆ

ರಿಯಾದ್: ಸೌದಿ ಅರೇಬಿಯಾದ ಜುವೆಲ್ಲರಿಗಳಲ್ಲಿ ದೇಶೀಕರಣವನ್ನು ಜಾರಿಗೊಳಿಸಲು ಮಾಲೀಕರು ಹಲವಾರು ಸವಾಲುಗಳನ್ನು ಎದುರಿಸುತ್ತಿರುವುದಾಗಿ ವರದಿಯಾಗಿದೆ.

ಒಂದು ಕಾರಣವೆಂದರೆ ಸೌದಿಗಳು ಸಣ್ಣ ಸಂಬಳದಲ್ಲಿ ದೀರ್ಘಕಾಲ ಕೆಲಸ ಮಾಡಲು ಸಿದ್ಧವಾಗಿಲ್ಲ. ಇನ್ನೊಂದು ಕಾರಣವೇನಂದರೆ ಈ ವಲಯದಲ್ಲಿನ ಸಾಕಷ್ಟು ತರಬೇತಿಯ ಕೊರತೆ. ವಲಯದಲ್ಲಿನ ಬೆನಾಮಿ ಉಪಸ್ಥಿತಿಯು ಮತ್ತೊಂದು ಪ್ರಮುಖ ಅಂಶವಾಗಿದೆ.

ತಯಾರಿಕಾ ವೆಚ್ಚಗಳ ಅಧಿಕ ಕೂಡ ಆಭರಣ ಅಂಗಡಿಗಳ ಅವನತಿಗೆ ಕಾರಣವಾಗಿದೆ. ಕೆಲವು ಅಂಗಡಿಗಳಲ್ಲಿ ಹೆಚ್ಚಿನ ಸಾಮರ್ಥ್ಯ ಹೊಂದಿರುವ ಸೌದಿಗಳನ್ನು ಲಭಿಸಿದರೆ, ಇನ್ನೂ ಕೆಲವುಕಡೆ ತರಬೇತಿ ಇಲ್ಲದಿರುವವರನ್ನು ಕೆಲಸಕ್ಕೆ ನೇಮಿಸಲಾಗಿದೆ.

error: Content is protected !! Not allowed copy content from janadhvani.com