ಅಬುಧಾಬಿ: 20 ಅರಬ್ ರಾಷ್ಟ್ರಗಳ ಸಹಿತ 50 ದೇಶಗಳಲ್ಲಿ ಯುಎಇ ಲೈಸೆನ್ಸ್ ಉಪಯೋಗಿಸಿ ಇನ್ನು ಮುಂದೆ ವಾಹನ ಚಲಾಯಿಸಬಹುದಾಗಿದೆ. 2017 ರ ತನಕ ಒಂಬತ್ತು ರಾಷ್ಟ್ರಗಳಲ್ಲಿ ಮಾತ್ರ ಯುಎಇ ಡ್ರೈವಿಂಗ್ ಲೈಸೆನ್ಸ್ ಅನ್ನು ಬಳಸಿ ವಾಹನ ಚಾಲನೆ ಮಾಡಲು ಅನುಮತಿಯನ್ನು ನೀಡಲಾಗಿತ್ತು.
ಹೊಸ ರಾಷ್ಟ್ರಗಳ ಪಟ್ಟಿಯನ್ನು ಯುಎಇ ವಿದೇಶಾಂಗ ಅಂತರರಾಷ್ಟ್ರೀಯ ಸಹಕಾರಿ ಸಚಿವಾಲಯ ಬಿಡುಗಡೆ ಮಾಡಿದೆ.
ಸೌದಿ ಅರೇಬಿಯಾ, ಬಹ್ರೈನ್, ಕುವೈತ್, ಒಮಾನ್, ಆಲ್ಜೀರಿಯಾ, ಜೋರ್ಡಾನ್, ಮೊರಾಕೊ, ಸಿರಿಯಾ, ಲೆಬನಾನ್, ಯಮನ್, ಸೊಮಾಲಿಯಾ, ಸುಡಾನ್, ಮಾರಿಟಾನಿಯ, ದ್ಜಿಬೌಟಿ, ಕೊಮೊರೋಸ್, ಟುನೀಶಿಯ, ಇರಾಕ್, ಪ್ಯಾಲೆಸ್ತೀನ್, ಸ್ಪೇನ್, ಫ್ರಾನ್ಸ್, ಅಮೇರಿಕಾ, ಯುಕೆ, ಇಟಲಿ, ಜರ್ಮನಿ , ಡೆನ್ಮಾರ್ಕ್, ಸ್ವಿಜರ್ಲ್ಯಾಂಡ್, ನೆದರ್ ಲ್ಯಾಂಡ್, ಸ್ಲೋವಾಕಿಯಾ, ಐರ್ಲೆಂಡ್, ಆಸ್ಟ್ರಿಯಾ, ಗ್ರೀಸ್, ಸ್ವೀಡನ್, ಚೀನಾ, ಪೋಲೆಂಡ್, ಕೆನಡಾ, ಟರ್ಕಿ, ನಾರ್ವೆ, ಲಾಟ್ವಿಯಾ, ನ್ಯೂಝಿಲೆಂಡ್, ಸರ್ಬಿಯಾ, ದಕ್ಷಿಣ ಆಫ್ರಿಕಾ, ಫಿನ್ಲೆಂಡ್, ಹಂಗೇರಿ, ಲಕ್ಸಂಬರ್ಗ್, ಲಿಥುವೇನಿಯಾ, ಸಿಂಗಪುರ, ಮುಂತಾದ ದೇಶಗಳು ದುಬೈ ಡ್ರೈವಿಂಗ್ ಲೈಸೆನ್ಸ್ ಅನ್ನು ಬಳಸಲು ಅಂಗೀಕಾರವನ್ನು ನೀಡಿದೆ.