janadhvani

Kannada Online News Paper

‘ಜೆರುಸಲೇಮ್ ಎಂದೆದೂ ಫಲಸ್ತೀನ್ ರಾಜಧಾನಿ’ ಜೆರುಸಲೇಮ್ ಅಂತಾರಾಷ್ಟ್ರ ಸಮ್ಮೇಳನಕ್ಕೆ ಎ.ಪಿ ಉಸ್ತಾದ್

ಅಬುಧಾಬಿ: ‘ಜೆರುಸಲೇಮ್ ಎಂದೆದೂ ಫಲಸ್ತೀನ್ ರಾಜಧಾನಿ’ ಎಂಬ  ಘೋಷವಾಕ್ಯದೊಂದಿಗೆ ಈ ತಿಂಗಳ 11,12 ದಿನಾಂಕಗಳಲ್ಲಿ ಜೆರುಸಲೇಮ್ ನಲ್ಲಿ ನಡೆಯುವ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಲು ಹೊರಟಿರುವ ಅಖಿಲ ಭಾರತ ಸುನ್ನೀ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್ ಅವರನ್ನು ಯುಎಇ ಫಲಸ್ತೀನ್ ದೂತವಾಸ ಕೇಂದ್ರದಲ್ಲಿ  ಬೀಳ್ಕೊಡಲಾಯ್ತು.

ಫಲಸ್ತೀನ್ ಪ್ರಾಧಿಕಾರದ ಅಧೀನದಲ್ಲಿ ನಡೆಯುವ ಸಮ್ಮೇಳನದಲ್ಲಿ,ಫಲಸ್ತೀನ್ ಅಧ್ಯಕ್ಷ ಮಹ್ಮೂದ್ ಅಬ್ಬಾಸ್ ರ ಪ್ರತ್ಯೇಕ ಆಮಂತ್ರಣ ಪ್ರಕಾರ ಕಾಂತಪುರಂ ಎ.ಪಿ ಅಬೂಬಕರ್ ಮುಸ್ಲಿಯಾರ್  ಸಮ್ಮೇಳನದಲ್ಲಿ ಭಾಗವಹಿಸುತ್ತಿದ್ದಾರೆ.

ಅಬುಧಾಬಿಯ ಫಲಸ್ತೀನ್ ದೂತವಾಸ ಕೇಂದ್ರದಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಯುಎಇ ಫಲಸ್ತೀನ್ ರಾಯಭಾರಿ ಉಸಾಮ್ ಮಸಾಲಿಹ್, ನಿರ್ವಾಹಕ ಲುಅಯ್ಯ್ ಮೂಸಾ, ಇಂಡೋ ಅರಬ್ ಸಾಂಸ್ಕೃತಿಕ ನಿಯೋಗದ ಕಾರ್ಯದರ್ಶಿ ಡಾ.ಅಮೀನ್ ಮುಹಮ್ಮದ್ ಹಸನ್ ಸಖಾಫಿ, ಮರ್ಕಝ್ ಅಬುಧಾಬಿ ಅಧ್ಯಕ್ಷ ಉಸ್ಮಾನ್ ಸಖಾಫಿ ತಿರುವತ್ರ, ಮರ್ಕಝ್ ಮೀಡಿಯಾ ಮೇನೇಜರ್ ಮುನೀರ್ ಪಾಂಡ್ಯಾಲ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

error: Content is protected !! Not allowed copy content from janadhvani.com