janadhvani

Kannada Online News Paper

ಇಖಾಮಾ, ಡ್ರೈವಿಂಗ್ ಲೈಸೆನ್ಸ್ ಸಂಖ್ಯೆಯಲ್ಲಿ ಎಷ್ಟು ರಿಯಾಲ್ ಉಳಿದಿದೆ ಎಂದು ತಿಳಿಯಲು ಸುಲಭ ವಿಧಾನ

ರಿಯಾದ್: ಸೌದಿ ಅರೇಬಿಯಾದಲ್ಲಿನ ವಲಸಿಗರ ಇಖಾಮಾ ಕಾರ್ಡ್ನಲ್ಲಿ ವಿವಿಧ ಉದ್ದೇಶಗಳಿಗಾಗಿ ಎಷ್ಟು ರಿಯಾಲ್ ಅನ್ನು ಠೇವಣಿ ಮಾಡಲಾಗಿದೆ ಎಂಬುದನ್ನು ಕಂಡುಹಿಡಿಯಲು ಒಂದು ಸುಲಭ ಮಾರ್ಗವಿದೆ.

ಸೌದಿ ಗೃಹ ವ್ಯವಹಾರ ಸಚಿವಾಲಯದ ವೆಬ್ ಸೈಟ್ ಆದ www.moi.gov.sa ಮೂಲಕ ಇದನ್ನು ತಿಳಿಯ ಬಹುದಾಗಿದೆ.ಇಖಾಮಾ ನವೀಕರಣೆ ಮತ್ತು ರೀ ಎಂಟ್ರಿ ವಿಸಾ, ಪ್ರಾಯೋಜಕರ ಬದಲಾವಣೆ ಮುಂತಾದ ಕಾರ್ಯಗಳಿಗೆ ಇಖಾಮಾ ನಂಬರ್ ನಲ್ಲಿ  ಬ್ಯಾಂಕ್ ಮೂಲಕ ಹಣ ಪಾವತಿಸಬೇಕು. ಅನೇಕರು ಈ ಹಿಂದೆ ಪಾವತಿಸಿದ ಹಣ ಎಷ್ಟಿದೆಯೆಂದು ಮನವರಿಕೆ ಮಾಡದೆಯೇ ಮತ್ತೆ ಮತ್ತೆ ಹಣ ಹೂಡಿಕೆ ಮಾಡುತ್ತಾರೆ,ಅದೂ ಅಲ್ಲದೇ ಸಣ್ಣ ಮೊತ್ತವನ್ನು ಬಳಕೆ ಮಾಡದೆ ಇಡಲಾಗುತ್ತದೆ.

ಈ ಸಮಸ್ಯೆಗೆ ಪರಿಹಾರವೆಂದರೆ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ, ಗೃಹ ವ್ಯವಹಾರಗಳ ಸಚಿವಾಲಯದ ವೆಬ್ಸೈಟ್ ಅನ್ನು ತೆರೆದು ನೀವು ಹಣವನ್ನು ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳುವುದು.

www.moi.gov.sa ವೆಬ್ಸೈಟ್ ಅನ್ನು ತೆರೆದು ಎಡಭಾಗದಲ್ಲಿ ಕಾಣುವ ಇಂಗ್ಲೀಷ್ ಅನ್ನು ಆಯ್ಕೆಮಾಡಿ. ನಂತರ ” electronic inquiries ” ಭಾಗವನ್ನು ಕ್ಲಿಕ್ ಮಾಡಿದಾಗ,moi diwan ಎಂದು ಎಂದು ಬರೆದಿರುವುದನ್ನು ನೋಡಬಹುದು. ಅದರ ಅಡಿಯಲ್ಲಿ  public query available funds ಎಂಬ ಬರಹ ಕಾಣುವಿರಿ. ಅದರ ಮೇಲೆ ಕ್ಲಿಕ್ ಮಾಡಿದ್ದಲ್ಲಿ ಹೊಸ ಪುಟವೊಂದು ತೆರೆಯುವುದು.ಅಲ್ಲಿ ನಿಮ್ಮ ಇಖಾಮಾ ಸಂಖ್ಯೆ ಮತ್ತು ಇಮೇಜ್ ಕೋಡ್ ನಮೂದಿಸಿದಾಗ ನಿಮ್ಮ ಇಖಾಮಾ ಮತ್ತು ಡ್ರೈವಿಂಗ್ ಲೈಸೆನ್ಸ್ ಸಂಖ್ಯೆಯಲ್ಲಿ ಲೇಬರ್ ಆಫೀಸಿಗೆ , ಉದ್ಯೋಗ ಬದಲಾವಣೆ, ಕಫಾಲ ಬದಲಾವಣೆ ಮುಂತಾದವುಗಳಿಗೆ ತಾವು ಪಾವತಿಸಿದ ನಗದು ಮತ್ತು ವಾಹನ ಸಂಚಾರ ಕಚೇರಿಗೆ ಪಾವತಿಸಿದ ಹಣ ಮತ್ತು ಆಶ್ರಿತರಿಗಾಗಿ ಪಾವತಿಸಿದ ಮೊತ್ತದ ಮಾಹಿತಿಯನ್ನು ಕಾಣಬಹುದು .

ಇಖಾಮ ನವೀಕರಣ, ರೀ ಎಂಟ್ರಿ, ಇತ್ಯಾದಿ ಇಲಾಖೆಗೆ ಪಾವತಿಸಿದ ಹಣವು ಪಾಸ್ಪೋರ್ಟ್ಸ್ ಎಂಬ ವಿಭಾಗಕ್ಕೆ ಹಣ ತಲುಪುತ್ತದೆ.ಆದ್ದರಿಂದ ಬ್ಯಾಂಕ್ ಮೂಲಕ ಹಣ ಪಾವತಿಸುವಾಗ ಖಾತೆ ಯಾವುದು ಎಂಬುದನ್ನು ಖಚಿತವಾಗಿ ತಿಳಿದು ಪಾವತಿಸ ಬೇಕಾಗಿದೆ. ಅಥವಾ ನೀವು ಹಣವನ್ನು ಅನಗತ್ಯ ಇಲಾಖೆಗೆ ಪಾವತಿಸಿದರೆ ಅದನ್ನು ಬಳಸಲಾಗುವುದಿಲ್ಲ.

error: Content is protected !! Not allowed copy content from janadhvani.com