ಕುವೈಟ್ ಸಿಟಿ: ವಿದೇಶಿಯರಿಗೆ ಡ್ರೈವಿಂಗ್ ಲೈಸೆನ್ಸ್ ನೀಡುವುದನ್ನು ಕುವೈತ್ ಸ್ಥಗಿತಗೊಳಿಸಿದೆ. ಮುಂದಿನ ಸೂಚನೆ ನೀಡುವವರೆಗೆ ಪರವಾನಗಿಯನ್ನು ನೀಡಲಾಗುವುದಿಲ್ಲ ಎಂದು ಆಂತರಿಕ ಸಚಿವಾಲಯದ ಅಧೀನ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ ಫೈಸಲ್ ಅಲ್ ನವಾಫ್ ಅಸ್ವಬಾಹ್ ಅವರು ಹೇಳಿದ್ದಾರೆ.ಅಸ್ತಿತ್ವದಲ್ಲಿರುವ ಪರವಾನಗಿಗಳ ಪರಿಶೀಲನೆ ಪ್ರಕ್ರಿಯೆಯ ಭಾಗವಾಗಿ ಪರವಾನಗಿ ನೀಡುವಿಕೆಯನ್ನು ನಿಲ್ಲಿಸಲಾಗಿದೆ.
ಗೃಹ ಸಚಿವಾಲಯವು 2.5 ಲಕ್ಷ ವಿದೇಶಿಗರ ಚಾಲನಾ ಪರವಾನಗಿಯನ್ನು ರದ್ದುಗೊಳಿಸಲು ಸಿದ್ಧತೆ ನಡೆಸುತ್ತಿದೆ ಎಂಬ ವರದಿಗಳ ನಡುವೆ ಹೊಸ ಆದೇಶ ಹೊರಬಿದ್ದಿದೆ. ಪ್ರಸ್ತುತ, ಏಳು ಲಕ್ಷಕ್ಕೂ ಹೆಚ್ಚು ವಿದೇಶಿಗರು ಕುವೈತ್ ಡ್ರೈವಿಂಗ್ ಲೈಸೆನ್ಸ್ ಹೊಂದಿದ್ದಾರೆ. ಅವರಲ್ಲಿ ಸುಮಾರು 2.5 ಲಕ್ಷ ಮಂದಿ ಪರವಾನಗಿ ಪಡೆಯಲು ಅಗತ್ಯವಿರುವ ಅರ್ಹತಾ ಮಾನದಂಡಗಳನ್ನು ಪೂರೈಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರ ಆಧಾರದ ಮೇಲೆ ಕೂಲಂಕುಷವಾಗಿ ಪರಿಶೀಲನೆ ನಡೆಸುವ ಉದ್ದೇಶದಿಂದ ಲೈಸೆನ್ಸ್ ನೀಡುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗಿದೆ. ಈ ತಿಂಗಳಲ್ಲಿ ತಪಾಸಣೆ ಆರಂಭವಾಗುವ ನಿರೀಕ್ಷೆ ಇದೆ. ಎಲ್ಲಾ ಲೈಸೆನ್ಸ್‌ಗಳನ್ನು ಪರಿಶೀಲಿಸಿ ಅರ್ಹವಾದವುಗಳನ್ನು ಮಾತ್ರ ಇರಿಸುವುದು ಇದರ ಉದ್ದೇಶವಾಗಿದೆ. ತಪಾಸಣೆ ಪ್ರಕ್ರಿಯೆಯು ಮಾರ್ಚ್ 31, 2022 ರೊಳಗೆ ಪೂರ್ಣಗೊಳ್ಳಲಿದೆ.
ಉದ್ಯೋಗ ಬದಲಾವಣೆ ಸೇರಿದಂತೆ ದೇಶದಿಂದ ಹಿಂದಿರುಗಿದವರು ,ಇಖಾಮ ಅವಧಿ ಮುಗಿದವರು ಮುಂತಾದ ಕಾರಣಗಳಿಂದ ಪರವಾನಗಿ ಪಡೆಯಲು ಅರ್ಹತೆ ಇಲ್ಲದಿರುವವರು, ತಮ್ಮ ಪರವಾನಗಿಯನ್ನು ಕಳೆದುಕೊಳ್ಳುತ್ತಾರೆ. ವಿದೇಶಿಯರಿಗೆ ಡ್ರೈವಿಂಗ್ ಲೈಸೆನ್ಸ್ ಪಡೆಯುವ ಮುಖ್ಯ ಮಾನದಂಡವೆಂದರೆ ಕನಿಷ್ಠ ವೇತನ 600 ದಿನಾರ್, ವಿಶ್ವವಿದ್ಯಾನಿಲಯ ಪದವಿ ಮತ್ತು ಕನಿಷ್ಠ ಎರಡು ವರ್ಷಗಳ ಕಾಲ ಕುವೈತ್‌ನಲ್ಲಿ ಶಾಶ್ವತ ನಿವಾಸ. ಚಾಲಕ ಪಿಆರ್‌ಒ ಹುದ್ದೆಯಲ್ಲಿರುವವರಿಗೆ ಈ ಕ್ರಮಗಳಲ್ಲಿ ರಿಯಾಯಿತಿಗಳಿವೆ. ಆದರೆ ಹುದ್ದೆ ಬದಲಾದರೆ ಅವರೂ ಪರವಾನಿಗೆಯನ್ನು ಹಿಂದಿರುಗಿಸಬೇಕು ಎಂಬ ಷರತ್ತು ವಿಧಿಸಲಾಗಿದೆ.
















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ