ಮಂಜೇಶ್ವರ: ನಾಲ್ಕು ದಿನಗಳ ಕಾಲ ನಡೆದ ಮಂಜೇಶ್ವರ ಮಳ್’ಹರ್ ವಿದ್ಯಾರ್ಥಿ ಫೆಸ್ಟ್’ಗೆ ಪರಿಸಮಾಪ್ತಿ. ನಾಲ್ಕು ಗ್ರೂಪ್’ಗಳ ಸುಮಾರು ಮುನ್ನೂರರಷ್ಟು ಪ್ರತಿಭೆಗಳ ಸ್ಪರ್ಧೆಗಳಿಗೆ ಪ್ರೌಢ ಸಮಾಪ್ತಿ ಕೋರಲಾಯಿತು. ಟೀಂ ನೂರೇ ದಹ್ಲವಿ ಚಾಂಪಿಯನ್ ಪಟ್ಟ ಅಲಂಕರಿಸಿದರು. ಜೈಶೇ ಸಂಜರಿ ಮತ್ತು ಅಹ್ಲೇ ಖಾಹಿರಿ ಕ್ರಮ ಪ್ರಕಾರ ದ್ವಿತೀಯ ಸ್ಥಾನ ಮತ್ತು ಸ್ಥಾನವನ್ನು ಮುಡಿಗೇರಿಸಿಕೊಂಡರು.
ಸಮಾರೋಪ ಸಮಾರಂಭವನ್ನು ಮಳ್’ಹರ್ ದಅವಾ ಅಡ್ಮಿನಿಸ್ಟ್ರೇಟರ್ ಹಸನ್ ಸಅದಿ ಅಲ್-ಅಫ್ಳಲಿ ಉಸ್ತಾದರ ಅಧ್ಯಕ್ಷತೆಯಲ್ಲಿ ಮಳ್’ಹರ್ ಜನರಲ್ ಸೆಕ್ರೆಟರಿ ಸಯ್ಯಿದ್ ಜಲಾಲುದ್ದೀನ್ ಸಅದಿ ಅಲ್-ಬುಖಾರಿ ಉದ್ಘಾಟಿಸಿದರು. ಸಯ್ಯಿದ್ ಮುಸ್ತಫಾ ಸಿದ್ದೀಖಿ ಅಲ್-ಬುಖಾರಿ ಮಂಬುರಂ, ಉಮರುಲ್ ಫಾರೂಖ್ ಮದನಿ ಮಚ್ಚಂಪಾಡಿ, ಝುಬೈರ್ ಸಖಾಫಿ ವಟ್ಟೋಳಿ, ಸಿದ್ದೀಕ್ ಸಅದಿ ತೌಡುಗೋಳಿ, ಕುಞಾಲಿ ಸಖಾಫಿ ಕೋಟೂರು, ಅನಸ್ ಸಿದ್ದೀಕಿ ಚೆರ್ಕಳ,ರಊಫ್ ಮಿಸ್ಬಾಹಿ ಅಲ್-ಅಫ್’ಳಲಿ, ತ್ವಯ್ಯಿಬ್ ಸಅದಿ ಮಲಪ್ಪುರಂ, ಜಾಬಿರ್ ಸಖಾಫಿ ಕೋಡಂಬುಝ, ಅನ್ಸಾರ್ ಸಖಾಫಿ ಮಂಜನಾಡಿ, ನೌಫಲ್ ಸಖಾಫಿ ಪಾಣೆಮಂಗಳೂರು, ಅಡ್ವಕೇಟ್ ಮುಈನುದ್ದೀನ್ ತಂಙಳ್ ಮಂಜೇಶ್ವರ, ಹಸನ್ ಕುಂಞಿ, ಝಿಯಾದ್ ಮಾಸ್ಟರ್ ಮುಟ್ಟಂ, ನಂಶಾದ್ ಸರ್, ಮುಸ್ತಫಾ ಕಡಂಬಾರ್ ಕಾರ್ಯಕ್ರಮಕ್ಕೆ ಶುಭಹಾರೈಸಿದರು.