ಹೊಸ ದಿಲ್ಲಿ: ದೇಶದಲ್ಲಿ ಭಾನುವಾರ ಒಂದೇ ದಿನ ಕೊರೊನಾದ ಹೊಸ ರೂಪಾಂತರಿ ವೈರಾಣು ಓಮಿಕ್ರಾನ್ ನ 17 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 21ಕ್ಕೆ ಏರಿದೆ. ‘ಓಮಿಕ್ರಾನ್ ಸ್ಫೋಟ ತಡೆಯಲು ಕೇಂದ್ರ ಸರಕಾರವು ತಕ್ಷಣ ಎಲ್ಲ ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನು ನಿರ್ಬಂಧಿಸಬೇಕು’ ಎಂದು ದಿಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಆಗ್ರಹಿಸಿದ್ದಾರೆ.
‘ಓಮಿಕ್ರಾನ್ ಬಾಧಿತನಾಗಿರುವ ವ್ಯಕ್ತಿಯಲ್ಲಿ 3 – 4 ದಿನಗಳವರೆಗೆ ಯಾವುದೇ ರೋಗ ಲಕ್ಷಣ ಕಾಣಿಸದೇ ಇರಬಹುದು. ಅಂತಹ ಸಂದರ್ಭದಲ್ಲಿ ತಪಾಸಣೆ ನಡೆಸಿದರೆ ಕೊರೊನಾ ಸೋಂಕು ಪತ್ತೆಯಾಗುವ ಸಾಧ್ಯತೆಯೂ ಕಡಿಮೆ. ಹಾಗಾಗಿ ಸೋಂಕಿತ ಪಾರಾಗಿ, ತನ್ನ ಕುಟುಂಬಸ್ಥರಿಗೆ ಓಮಿಕ್ರಾನ್ ಅಂಟಿಸುವ ಅಪಾಯವಿದೆ. ಅಲ್ಲದೇ, ಸದ್ಯದ ಪ್ರಸರಣ ಸ್ಥಿತಿ ಗಮನಿಸಿದರೆ ಜನವರಿ, ಫೆಬ್ರುವರಿ ಅಂತ್ಯದಲ್ಲಿ ಕೊರೊನಾ ಸೋಂಕಿನ ಮೂರನೇ ಅಲೆ ಕಾಣಿಸಿಕೊಳ್ಳಬಹುದು ಎನ್ನಲಾಗುತ್ತಿದೆ. ಹೀಗಾಗಿ ಕೇಂದ್ರ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು’ ಎಂದು ಅವರು ಆಗ್ರಹಿಸಿದ್ದಾರೆ.
ಇದುವರೆಗೆ ದಿಲ್ಲಿಗೆ ವಿದೇಶಗಳಿಂದ ಆಗಮಿಸಿದ ಪ್ರಯಾಣಿಕರ ಪೈಕಿ 12 ಮಂದಿಗೆ ಕೊರೊನಾ ಸೋಂಕಿನ ಲಕ್ಷಣ ಕಾಣಿಸಿಕೊಂಡಿದ್ದು ಅವರು ರಕ್ತ ಹಾಗೂ ಗಂಟಲು ದ್ರವದ ಮಾದರಿಗಳನ್ನು ಜಿನೋಮ್ ಸೀಕ್ವೆನ್ಸಿಂಗ್ಗೆ ಕಳುಹಿಸಲಾಗಿತ್ತು. ಆ ಪೈಕಿ ಒಬ್ಬರಿಗೆ ಓಮಿಕ್ರಾನ್ ತಗುಲಿರುವುದು ದೃಢಪಟ್ಟಿದೆ. ಗುಜರಾತ್ನ ಜಾಮ್ನಗರ, ಕರ್ನಾಟಕದ ಬೆಂಗಳೂರಿನಲ್ಲಿ ಇಬ್ಬರಿಗೆ ಓಮಿಕ್ರಾನ್ ತಗುಲಿದೆ.
ಯಾವ ರಾಜ್ಯದಲ್ಲಿಎಷ್ಟು ಸೋಂಕು?: ಕರ್ನಾಟಕ 02, ಮಹಾರಾಷ್ಟ್ರ 08, ರಾಜಸ್ಥಾನ 09, ಗುಜರಾತ್ 01, ದಿಲ್ಲಿ 01
ತಜ್ಞರು ಸೂಚಿಸಿದ ಮುನ್ನೆಚ್ಚರಿಕೆಗಳು
- ಮನೆಯಿಂದ ಹೊರ ಹೋಗುವಾಗ ಮಾಸ್ಕ್ ಧಾರಣೆ ಮರೆಯಬಾರದು
- ನಿಯಮಿತವಾಗಿ ಸಾಬೂನಿನಿಂದ ಕೈ ತೊಳೆದುಕೊಳ್ಳಬೇಕು ಅಥವಾ ಸ್ಯಾನಿಟೈಸರ್ನಿಂದ ಕೈಗಳನ್ನು ಸ್ವಚ್ಛಗೊಳಿಸಿಕೊಳ್ಳಬೇಕು
- ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಪ್ರಯಾಣವನ್ನು ಆದಷ್ಟು ಕಡಿಮೆ ಮಾಡಬೇಕು.
- ಹವಾಮಾನ ವೈಪರೀತ್ಯದಿಂದ ಜ್ವರ ಬಂದಿದೆ ಎಂದ ನಿರ್ಲಕ್ಷ್ಯ ಮಾಡದೇ ತಕ್ಷಣ ವೈದ್ಯರಲ್ಲಿ ತೆರಳಬೇಕು
- ಜ್ವರ ಬಂದಾಗ ರುಚಿ, ವಾಸನೆ ಗ್ರಹಣ ಶಕ್ತಿ ಚೆನ್ನಾಗಿದ್ದರೂ ಕಡೆಗಣಿಸದೇ ಚಿಕಿತ್ಸೆ ಪಡೆಯಬೇಕು
ಗಂಟಲು ಕೆರೆತ, ಮೈಕೈ ನೋವು
ಕೊರೊನಾ ಸೋಂಕಿಗೆ ತುತ್ತಾದವರಲ್ಲಿ ಇದುವರೆಗೂ ಕಂಡು ಬಂದಿರುವುದಕ್ಕಿಂತ ಪೂರ್ಣ ವಿಭಿನ್ನ ರೀತಿಯ ರೋಗ ಲಕ್ಷಣಗಳು ಓಮಿಕ್ರಾನ್ ಸೋಂಕಿತರಲ್ಲಿ ಕಾಣಿಸುತ್ತಿದೆ. ಭಾರತದಲ್ಲಿ ಪತ್ತೆಯಾಗಿರುವ ಒಟ್ಟು ಐದು ಮಂದಿ ಓಮಿಕ್ರಾನ್ ಬಾಧಿತರಲ್ಲಿ ಒಂದೇ ರೀತಿಯ ಸೋಂಕಿನ ಲಕ್ಷಣಗಳು ಕಂಡು ಬಂದಿವೆ. ಜ್ವರ, ಶೀತದ ಬದಲು ಈ ಬಾರಿ ಸೋಂಕಿತರಲ್ಲಿ ನಿಶ್ಯಕ್ತಿ, ಗಂಟಲು ಕೆರೆತ ಮತ್ತು ಮೈಕೈ ನೋವು ಹೆಚ್ಚಾಗಿ ಕಂಡುಬರುತ್ತಿದೆ.
ಓಮಿಕ್ರಾನ್ ಸೋಂಕಿನ ಸಂಭಾವ್ಯ ಲಕ್ಷಣಗಳು
- ಸಣ್ಣ ಜ್ವರ, ಬಳಿಕ ಏಕಾಏಕಿ ಗಂಟಲು ನೋವು, ಗಂಟಲಿನಲ್ಲಿ ಸೋಂಕು ಹೆಚ್ಚಳ
- ದೇಹದಲ್ಲಿ ನಿಶ್ಯಕ್ತಿ, ವಿಪರೀತ ಸುಸ್ತು, ದೈನಂದಿನ ಕೆಲಸ ಮಾಡಲು ಆಗದ ಸ್ಥಿತಿ
- ಕೆಲ ದಿನಗಳಿಂದ ಮೈ-ಕೈ ನೋವು
ಡೆಲ್ಟಾ ಸೋಂಕಿತರಲ್ಲಿ ಕಂಡುಬಂದ ಲಕ್ಷಣಗಳು
- ಜ್ವರ, ತಲೆನೋವು, ಗಂಟಲು ನೋವು
- ಶೀತ, ಮೂಗಿನಲ್ಲಿ ದ್ರವ ಅಥವಾ ಸಿಂಬಳ ಸೋರುವಿಕೆ
















ಇನ್ನಷ್ಟು ಸುದ್ದಿಗಳು
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ
ಅನಿವಾಸಿ ಮಿತ್ರರಿಗಾಗಿ ವಿಶೇಷ ಪ್ರಾರ್ಥನೆಗೆ ಎಸ್ಸೆಸ್ಸೆಫ್ ಕರೆ
ಅಸ್ಸುಫ್ಫಾ ‘ನಾಟ್ಟು ದರ್ಸ್’ ಭೌತಿಕವಾಗಿ ಮಾತ್ರ ನಡೆಸಬೇಕು: ಶತಮಾನೋತ್ಸವ ಸಮಿತಿ ಸ್ಪಷ್ಟನೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
“ನಾವು ಭಾರತೀಯರೆಂದು ಹೇಳಿರಲಿಲ್ಲವೇ?”- ಬಾಂಗ್ಲಾದೇಶಕ್ಕೆ ಗಡೀಪಾರು ಮಾಡಲಾಗಿದ್ದ ಕುಟುಂಬಗಳು ವಾಪಸ್
ಮದ್ರಸಾ ಅಧ್ಯಾಪಕರ ಮೇಲಿನ ಹಲ್ಲೆ ಅತ್ಯಂತ ಖಂಡನೀಯ- ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ SJM ಕಿನ್ನಿಗೋಳಿ ರೇಂಜ್ ಆಗ್ರಹ
ಮದ್ರಸ ಮುಅಲ್ಲಿಮರ ಮೇಲೆ ಹಲ್ಲೆ ಪ್ರಕರಣ: ಎಸ್ಜೆಎಂ ದ.ಕ. ಸೌತ್ ಜಿಲ್ಲಾ ಸಮಿತಿ ತೀವ್ರ ಖಂಡನೆ
ಮದ್ರಸಾ ಅಧ್ಯಾಪಕರ ಮೇಲೆ ಹಲ್ಲೆ- ಎಸ್.ವೈ.ಎಸ್ ದ.ಕ ಜಿಲ್ಲೆ ವೆಸ್ಟ್ ಖಂಡನೆ
ಇರಾಕ್ನಲ್ಲೂ ಖಾಮ್ನಈ ಅಂತ್ಯಕ್ರಿಯೆ ವಿಧಿವಿಧಾನಗಳು; ನಜಫ್ನತ್ತ ಹರಿದುಬಂದ ಜನಸಾಗರ