janadhvani

Kannada Online News Paper

ಸೌದಿಯಲ್ಲಿ ವಿದೇಶಿಗಳ ಉದ್ಯೋಗಾವಕಾಶಗಳು ಅಧಿಕವಾಗಲಿದೆ-ಪ್ರಿನ್ಸ್ ಮುಹಮ್ಮದ್ ಬಿನ್ ಸಲ್ಮಾನ್‌

ರಿಯಾದ್: ಸೌದಿ ಅರೇಬಿಯಾಲ್ಲಿ ವಿದೇಶಿಗಳ ಉದ್ಯೋಗಾವಕಾಶಗಳು ಅಧಿಕವಾಗಲಿದೆ ಎಂದು ರಾಜಕುಮಾರ ಮುಹಮ್ಮದ್ ಬಿನ್ ಸಲ್ಮಾನ್ ಹೇಳಿದರು, ದೇಶವು ಪ್ರಗತಿಯ ಹಾದಿಯಲ್ಲಿದೆ ಆ ಕಾರಣಕ್ಕಾಗಿ ದೇಶೀಯರಂತೆ ವಿದೇಶಿಗಳಿಗೂ ಹಲವಾರು ಉದ್ಯೋಗಾವಕಾಶಗಳು ಕಾಯುತ್ತಿದೆ ಎಂದು ರಾಜಕುಮಾರ ತಿಳಿಸಿದ್ದಾರೆ.

ಅಮೆರಿಕಾ ಪರ್ಯಟನೆಯ ವೇಳೆ ಪ್ರಮುಖ ಪ್ರಾದೇಶಿಕ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ, ಸಲ್ಮಾನ್ ರಾಜಕುಮಾರ ಸೌದಿ ಅರೇಬಿಯಾದಲ್ಲಿ ವಿದೇಶೀಯರಿಗೆ ಉದ್ಯೋಗ ಅವಕಾಶಗಳ ಹೆಚ್ಚಳದ ಬಗ್ಗೆ ವ್ಯಕ್ತಪಡಿಸಿದ್ದರು. ಆದ್ದರಿಂದ ವಿದೇಶೀಯರ ಸಂಖ್ಯೆಯು ಗಣನೀಯವಾಗಿ ಏರಲಿದೆ.

ದೇಶೀಯ ಮತ್ತು ವಿದೇಶಿ ಕೆಲಸಗಾರರಿಗೆ ಸಾಕಷ್ಟು ಉದ್ಯೋಗ ಅವಕಾಶಗಳಿವೆ. ಕಳೆದ ಮೂರು ವರ್ಷಗಳಲ್ಲಿ, ದೇಶದ ಬದಲಾವಣೆಯು ಕಳೆದ 30 ವರ್ಷಗಳಲ್ಲಿ ಉಂಟಾದ ಬದಲಾವಣೆಗಳಿಗಿತಲೂ ಮಿಗಿಲಾಗಿದೆ. ಹತ್ತು ಮಿಲಿಯನ್ ವಲಸಿಗರು ಈಗ ಸೌದಿಯಲ್ಲಿದ್ದಾರೆ,ಅದು ಕಡಿಮೆಯಾಗಲಾರದು ಯಾಕೆಂದರೆ ದೇಶವು ಪ್ರಗತಿಯ ಹಾದಿಯಲ್ಲಿದೆ.

ಆದ್ದರಿಂದ,ಬಹಳಷ್ಟು ಮಾನವ ಸಂಪನ್ಮೂಲಗಳ ಅಗತ್ಯವಿದೆ ಎಂದು ಸಲ್ಮಾನ್ ರಾಜಕುಮಾರ ಹೇಳಿದರು. ದೇಶವು ಆರ್ಥಿಕವಾಗಿ ಪ್ರಗತಿಪರವಾಗಿದೆ. ದೇಶದಲ್ಲಿ ಸಾರ್ವಜನಿಕ ಠೇವಣಿ ನಿಧಿಯು 160 ಬಿಲಿಯನ್ ನಿಂದ 300 ಬಿಲಿಯನ್ ಡಾಲರ್ ವರೆಗೆ ಬೆಳೆಯಿತು. 2020 ರಲ್ಲಿ ಇದು 600 ರಿಂದ 700 ಬಿಲಿಯನ್ ಗಳಿಗೆ ಏರಿಕೆಯಾಗಲಿದೆ ಎಂದು ಪ್ರಿನ್ಸ್ ಮುಹಮ್ಮದ್ ಬಿನ್ ಸಲ್ಮಾನ್‌ ರಾಜಕುಮಾರ ಹೇಳಿದರು.

error: Content is protected !! Not allowed copy content from janadhvani.com