ಅಬುಧಾಬಿ: ಕಾರ್ಮಿಕ ಕಾನೂನು ಉಲ್ಲಂಘನೆದಾರರ ವಿರುದ್ದ ಉಗ್ರ ಕ್ರಮ ಕೈಗೊಳ್ಳುವುದಾಗಿ ಅಬುಧಾಬಿ ಪೊಲೀಸರು ತಿಳಿಸಿದ್ದಾರೆ. ಉದ್ಯೋಗಿಗಳಿಗೆ ನಿಯಮಿತವಾಗಿ ಸಂಬಳ ಪಾವತಿಸದ ಸಂಸ್ಥೆಗಳಿಗೆ 50 ಲಕ್ಷ ದಿರ್ಹಂ ವರೆಗೆ ದಂಡ ವಿಧಿಸಲಾಗಿದೆ.ಕಳೆದ 15 ತಿಂಗಳಲ್ಲಿ 20 ಕ್ಕಿಂತಲೂ ಹೆಚ್ಚು ಕಂಪೆನಿಗಳಿಗೆ ದಂಡ ವಿಧಿಸಲಾಗಿದೆ ಎಂದು ಅಬುಧಾಬಿಯ ನ್ಯಾಯಾಂಗ ಕಾನೂನು ಇಲಾಖೆಯ ನಿರ್ದೇಶಕ ಹಸನ್ ಮುಹಮ್ಮದ್ ಅಲ್ ಹಮ್ಮಾದಿ ಹೇಳಿದರು.
ಕಾರ್ಮಿಕ-ಸಂಬಂಧಿತ ಸಮಸ್ಯೆಗಳ ತೊಂಬತ್ತರಷ್ಟು ಪ್ರಕರಣಗಳು 2016 ರಲ್ಲಿ ಮಾತ್ರ ವರದಿಯಾಗಿದೆ.2017 ರಲ್ಲಿ ಇದು 48 ಕ್ಕೆ ಇಳಿಯಿತು. ಕಾರ್ಮಿಕ ಕಾನೂನು ಉಲ್ಲಂಘನೆಗಾರರಿಗೆ ಯುಎಇಯಲ್ಲಿ ಭಾರೀ ಮೊತ್ತದ ದಂಡ ಮತ್ತು ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ಅವರು ಹೇಳಿದರು. ಏಕದಿನ ನ್ಯಾಯಾಲಯ ವ್ಯವಸ್ಥೆಯಲ್ಲಿ, ಅನೇಕ ಸಮಸ್ಯೆಗಳನ್ನು ಬಗೆಹರಿಸಲಾಗುತ್ತದೆ. 20,000 ದಿರ್ಹಂಗೆ ಕೆಳಗಿನ ಕಾರ್ಮಿಕ ವಿವಾದಗಳನ್ನು ಏಕದಿನ ನ್ಯಾಯಾಲಯದ ಮೂಲಕ ಪರಿಹರಿಸಬಹುದು.
ಮುಸಫ್ಫಾ ಮತ್ತು ಮುಫ್‌ರಕ್ ನಲ್ಲಿರುವ ಸೇವಾ ಕೇಂದ್ರಗಳ ಮೂಲಕವೂ ಕಾರ್ಮಿಕರ ಸಮಸ್ಯೆಗಳನ್ನು ನ್ಯಾಯಾಲಯಕ್ಕೆ ತರಬಹುದು.ಸಂಬಳದೊಂದಿಗೆ 30 ದಿನಗಳ ರಜೆ, ವಾರದಲ್ಲೊಂದು ರಜೆ ಪಾಸ್ಪೋರ್ಟ್ ಮತ್ತು ಪ್ರಮಾಣಪತ್ರಗಳನ್ನು ಉಳಿಸಿಕೊಳ್ಳುವ ಹಕ್ಕು, ಯುಎಇ ಅಧ್ಯಕ್ಷ ಶೈಖ್ ಖಲೀಫಾ ಬಿನ್ ಝಾಯಿದ್ ಆಲ್ ನಹ್ಯಾನ್ ಹೊರಡಿಸಿದ ಕಾರ್ಮಿಕ ಕಾನೂನಿನಲ್ಲಿ ಭರವಸೆ ನೀಡಿದ್ದಾರೆ. ಪಾಸ್ಪೋರ್ಟ್ ಮತ್ತು ಎಮಿರೇಟ್ ಐಡಿಗಳನ್ನು ಉದ್ಯೋಗದಾತರು ತೆಗೆದಿಡುವುದು ಯುಎಇಯಲ್ಲಿ ಕಾರ್ಮಿಕ ಕಾನೂನು ಉಲ್ಲಂಘನೆಯಾಗಿದೆ ಎಂದು ಹಮ್ಮಾದಿ ಹೇಳಿದರು.
ದೂರು ಸಲ್ಲಿಸುವುದು ಸುಲಭವಾಗಿದೆ: ಮಾಲೀಕರೊಂದಿಗೆ ಯಾವುದೇ ವಿವಾದ ಉಂಟಾದರೆ, ನೀವು ಮಾನವ ಸಂಪನ್ಮೂಲ ಸಚಿವಾಲಯ, ಕಾರ್ಮಿಕ ಸಚಿವಾಲಯ, ಕಾರ್ಮಿಕ ಮತ್ತು ನ್ಯಾಯಾಂಗ ಇಲಾಖೆಯ ಸಚಿವಾಲಯವನ್ನು ಸಂಪರ್ಕಿಸ ಬೇಕೆಂದು ಹಮ್ಮಾದಿ ಹೇಳಿದರು.
ಕಾರ್ಮಿಕರ ಸಂಬಳ ಪಾವತಿಗಳನ್ನು ಬ್ಯಾಂಕುಗಳು ಮತ್ತು ವಿನಿಮಯಗಳ ಮೂಲಕ ಸರಿಯಾಗಿ ಒದಗಿಸಲು ಯುಎಇನಲ್ಲಿ 2009 ರಿಂದಲೂ ವೇತನ ಸಂರಕ್ಷಣಾ ವ್ಯವಸ್ಥೆ ಅಸ್ಥಿತ್ವದಲ್ಲಿದೆ. ಯಾವುದೇ ರೀತಿಯ ಉದ್ಯೋಗ ವಿವಾದಗಳು ಇದ್ದಲ್ಲಿ ಕೆಲಸಗಾರರು ನೇರವಾಗಿ ನ್ಯಾಯಾಂಗ ಇಲಾಖೆಯನ್ನು ಸಂಪರ್ಕಿಸಬಹುದು. ಅದಕ್ಕೆ ವಿಶೇಷ ಶುಲ್ಕ ವಿಧಿಸುವುದಿಲ್ಲ ಎಂದು ಅವರು ಹೇಳಿದರು.