ಜಿದ್ದಾ| ಸೌದಿ ಅರೇಬಿಯಾ ಅನುಮತಿ ನೀಡಿದ್ದರೂ, ಭಾರತದಿಂದ ಸೌದಿ ಅರೇಬಿಯಾಗೆ ನೇರ ವಿಮಾನವನ್ನು ಅನುಮತಿಸದ ಕೇಂದ್ರದ ಮೋದಿ ಸರ್ಕಾರದ ನಿಲುವು ಖಂಡನೀಯವಾಗಿದೆ ಎಂದು ICF ಸೌದಿ ರಾಷ್ಟ್ರೀಯ ಸಮಿತಿ ಹೇಳಿದೆ.
ಕೋವಿಡ್ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸ್ಥಗಿತಗೊಂಡಿದ್ದ ವಿಮಾನ ಸೇವೆಗಳನ್ನು ಡಿಸೆಂಬರ್ 1 ರಿಂದ ಪುನರಾರಂಭಿಸಲು ಸೌದಿ ಸರಕಾರ ನಿರ್ಧರಿಸಿದೆ. ವರ್ಷಗಳಿಂದ ಕಂಗಾಲಾಗಿದ್ದ ಸೌದಿ ವಲಸಿಗರು ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ.
ಆದರೆ GCC ಯಲ್ಲಿ ಸೌದಿ ಅರೇಬಿಯಾವನ್ನು ಹೊರತುಪಡಿಸಿ ಎಲ್ಲಾ ದೇಶಗಳು ಸಹಿತ 99 ದೇಶಗಳ ಜನರಿಗೆ ಕ್ವಾರಂಟೈನ್ ಕಾರ್ಯವಿಧಾನಗಳ ಮೇಲೆ ರಿಯಾಯಿತಿಗಳನ್ನು ನೀಡಿರುವ ಮೋದಿ ಸರ್ಕಾರವು, ಸೌದಿಯಿಂದ ಆಗಮಿಸುವವರಿಗೆ ಕ್ವಾರಂಟೈನ್‌ಗೆ ಬದ್ಧವಾಗಿರುವಂತೆ ಕೇಳುತ್ತಿದೆ. ಇದು ಯಾವುದೋ ಹಿಡನ್ ಅಜೆಂಡಾಗಳ ಭಾಗವಾಗಿದೆ ಎಂಬ ಅನುಮಾನವಿದೆ ಎಂದು ICF ಸೌದಿ ರಾಷ್ಟ್ರೀಯ ಸಮಿತಿ ಆಕ್ರೋಶ ವ್ಯಕ್ತಪಡಿಸಿದೆ.
ವಲಸಿಗ ಸಮುದಾಯ ಪದೇ ಪದೇ ವಿನಂತಿಸಿದರೂ, ಸೌದಿ ಅರೇಬಿಯಾದೊಂದಿಗೆ ಏರ್ ಬಬಲ್ ಒಪ್ಪಂದಕ್ಕೆ ಪ್ರವೇಶಿಸಲು ಮೋದಿ ಸರ್ಕಾರಕ್ಕೆ ಇಷ್ಟವಿರಲಿಲ್ಲ.
ತನ್ನ ದೇಶದಲ್ಲಿನ ಸ್ವಂತ ನಾಗರಿಕರಿಗೆ ಆಹಾರ ಮತ್ತು ಉದ್ಯೋಗವನ್ನು ನೀಡಲು ಈ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲವೆಂದು ಮಾತ್ರವಲ್ಲ, ವಿದೇಶದಲ್ಲಿ ಕೆಲಸ ಮಾಡುವವರೊಂದಿಗೆ ಮಾನವೀಯತೆಯನ್ನೂ ತೋರಿಸುತ್ತಿಲ್ಲ ಎಂದು ICF, ಮೋದಿ ಸರ್ಕಾರವನ್ನು ದೂಷಿಸಿದೆ.
ಸಯ್ಯಿದ್ ಹಬೀಬ್ ಅಲ್ ಬುಖಾರಿ ಅಧ್ಯಕ್ಷತೆ ವಹಿಸಿದ್ದರು. ಬಶೀರ್ ಎರ್ನಾಕುಳಂ, ನಿಝಾರ್ ಕಾಟ್ಟಿಲ್, ಬಶೀರ್ ಉಳ್ಳನಂ, ಸಲೀಂ ಪಾಲಚ್ಚಿರ, ಝುಬೈರ್ ಸಖಾಫಿ, ಉಮರ್ ಸಖಾಫಿ ಮೂರ್ಕನಾಡ್, ಹುಸನಲಿ ಕಡಲುಂಡಿ ಮುಂತಾದವರು ಭಾಗವಹಿಸಿದ್ದರು. ಸಿರಾಜ್ ಕುಟ್ಯಾಡಿ ಸ್ವಾಗತಿಸಿ, ಮುಹಮ್ಮದಲಿ ವೇಂಗರ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ