janadhvani

Kannada Online News Paper

ಸೌದಿ ಅರೇಬಿಯಾಕ್ಕೆ ನೇರ ಪ್ರಯಾಣ- ಉಮ್ರಾ ಬುಕಿಂಗ್ ಪುನರಾರಂಭ

ಮಂಗಳೂರು,ನ.26: ಕೊರೋನಾ ಸಾಂಕ್ರಾಮಿಕ ರೋಗ ಹರಡುವ ಭೀತಿಯಿಂದಾಗಿ ಕಳೆದ ಎರಡು ವರ್ಷಗಳಿಂದ ಸೌದಿ ಅರೇಬಿಯಾ ಭಾರತದಿಂದ ನೇರ ಪ್ರವೇಶವನ್ನು ನಿರ್ಬಂಧಿಸಿತ್ತು. ಈ ನಿಟ್ಟಿನಲ್ಲಿ ಭಾರತೀಯ ಹಜ್ ಮತ್ತು ಉಮ್ರಾ ಗ್ರೂಪ್ ಗಳ ಸೇವೆಯು ಸ್ಥಗಿತಗೊಂಡಿದ್ದವು.

ಇದೀಗ ಡಿಸೆಂಬರ್ ಒಂದರಿಂದ ಭಾರತ ಸಹಿತ ಆರು ದೇಶಗಳ ಪ್ರಯಾಣಿಕರಿಗೆ ನೇರ ಪ್ರವೇಶವನ್ನು ಸೌದಿ ಅರೇಬಿಯಾ ಅನುಮತಿಸಿದ್ದು, ಹಜ್ ಮತ್ತು ಉಮ್ರಾ ಗ್ರೂಪ್ ಗಳು ತಮ್ಮ ಸೇವೆಗಳನ್ನು ಪುನರಾರಂಭಿಸುವುದಾಗಿ ಪ್ರಕಟಿಸಿದೆ.

ಭಾರತದಿಂದ ಎರಡು ಡೋಸ್ ಕೋವಿಡ್ ಲಸಿಕೆ ಪಡೆದವರು ಸೌದಿಗೆ ಪ್ರವೇಶಿಸಿದ ನಂತರ 5 ದಿನಗಳ ಸಾಂಸ್ಥಿಕ ಸಂಪರ್ಕತಡೆಯನ್ನು ಪೂರ್ಣಗೊಳಿಸಬೇಕಿದೆ. ಆದರೆ ಸೌದಿಯಿಂದ ಎರಡು ಲಸಿಕೆ ಪಡೆದವರಿಗೆ ಇದರಿಂದ ವಿನಾಯಿತಿ ನೀಡಲಾಗಿದೆ.

ಭಾರತ ಸಹಿತ ಇಂಡೋನೇಷ್ಯಾ, ಪಾಕಿಸ್ತಾನ, ಬ್ರೆಜಿಲ್, ವಿಯೆಟ್ನಾಂ, ಈಜಿಪ್ಟ್ ನ ಪ್ರಯಾಣಿಕರಿಗೂ ಸೌದಿ ಅರೇಬಿಯಾಕೆ ನೇರ ಪ್ರವೇಶವನ್ನು ಅನುಮತಿಸಲಾಗಿದೆ.

ಈ ಬಗ್ಗೆ ಸೌದಿ ಅರೇಬಿಯಾದ ಆಂತರಿಕ ವ್ಯವಹಾರಗಳ ಸಚಿವಾಲಯವು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಸ್ಪಷ್ಟಪಡಿಸಿದೆ.ಈ ಮಹತ್ವದ ನಿರ್ಧಾರದಿಂದ ಲಕ್ಷಾಂತರ ಅನಿವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ.

error: Content is protected !! Not allowed copy content from janadhvani.com