ಪಾಲಿಬೆಟ್ಟ:- ಧಾರ್ಮಿಕ ಹಾಗೂ ಸಾಮಾಜಿಕ ವಿಚಾರಗಳಲ್ಲಿ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಸಮಾಜದ ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಎಸ್ ಎಸ್ ಎಫ್ ರಾಜ್ಯ ಸಮಿತಿಯು ವಿವಿಧ ಘಟಕಗಳಲ್ಲಿ ಎರಡು ವರ್ಷಕ್ಕೊಮ್ಮೆ ಆಯೋಜಿಸುವ ಪ್ರತಿಬೋತ್ಸವದ ಕೊಡಗು ಜಿಲ್ಲಾ ಮಟ್ಟದ ಕಾರ್ಯಕ್ರಮವು 21-11-2021ರ ಭಾನುವಾರ ಹುಂಡಿಯ ಮರ್ಕಝ್ ಪಬ್ಲಿಕ್ ಸ್ಕೂಲ್ ವಠಾರದಲ್ಲಿ ಸಮಾಪ್ತಿಗೊಂಡಿತು.
20ರ ಶನಿವಾರದಂದು ಧ್ವಜಾರೋಹಣ ಮೂಲಕ ಚಾಲನೆಗೊಂಡ ಪ್ರಸ್ತುತ ಕಾರ್ಯಕ್ರಮದಲ್ಲಿ ಹುಂಡಿ ಜಮಾತ್ ಅಧ್ಯಕ್ಷರಾದ ಸಿ.ಮುಹಮ್ಮದ್ ಹಾಜಿರವರು ಧ್ವಜಾರೋಹಣ ನೆರವೇರಿಸಿದರು.ಮರ್ಕಝ್ ಪಬ್ಲಿಕ್ ಸ್ಕೂಲ್ ವ್ಯವಸ್ಥಾಪಕರಾದ ಹಂಝ ಅನ್ವರಿರವರು ಉದ್ಘಾಟನೆ ಮಾಡುವ ಮೂಲಕ ಜಿಲ್ಲಾ ಪ್ರತಿಬೋತ್ಸವಕ್ಕೆ ಅಧಿಕೃತ ಚಾಲನೆ ನೀಡಿದರು.ಅಂದು ರಾತ್ರಿ ರಾಶಿದ್ ಬುಖಾರಿ ಹಾಗೂ ಇಲ್ಯಾಸ್ ಅಲ್ ಹೈದ್ರೂಸಿ ತಂಙ್ಞಳ್ ಎಮ್ಮೆಮಾಡು ರವರ ನೇತೃತ್ವದಲ್ಲಿ ಧಾರ್ಮಿಕ ಪ್ರವಚನ ಕಾರ್ಯಕ್ರಮ ನಡೆಯಿತು,ಅಶ್ಕರ್ ಸಖಾಫಿ ಕೊಟ್ಟಮುಡಿ ಸ್ವಾಗತ ಕೋರಿದರು.
ಶಾಖೆ, ಸೆಕ್ಟರ್,ಡಿವಿಷನ್ ಮಟ್ಟಗಳಲ್ಲಿ ಆಯ್ಕೆಯಾದ ಸುಮಾರು 250 ಪ್ರತಿಭೆಗಳಿಗೆ 60ರಷ್ಟು ಸ್ಪರ್ಧಾ ಕಾರ್ಯಕ್ರಮಗಳು ನಡೆಯಿತು.ಭಾನುವಾರ ಸಂಜೆ 4:30 ಕ್ಕೆ ಸಮಾರೋಪ ಸಮಾರಂಭ ಆಯೋಜಿಸಲಾಗಿತ್ತು. ಎಸ್ಎಸ್ ಜಿಲ್ಲಾಧ್ಯಕ್ಷರಾದ ಶಾಫಿ ಸಅದಿ ಸೋಮವಾರಪೇಟೆರವರ ಅಧ್ಯಕ್ಷತೆಯಲ್ಲಿ ನಡೆದ ಪ್ರಸ್ತುತ ಕಾರ್ಯಕ್ರಮದಲ್ಲಿ ಜಂಇಯ್ಯತ್ತುಲ್ ಉಲಮಾ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಸೈಯ್ಯದ್ ಶಿಹಾಬುದ್ದೀನ್ ಅಲ್ ಹೈದ್ರೂಸಿ ತಂಙ್ಞಳ್ ಎಮ್ಮೆಮಾಡು ಪ್ರಾರ್ಥನೆ ನಿರ್ವಹಿಸಿದರು,ಕೊಡಗು ಜಿಲ್ಲಾ ನಾಇಬ್ ಖಾಝಿ ಉದ್ಘಾಟನೆ ನಿರ್ವಹಿಸಿದರು.
ಸಾಮಾಜಿಕ ಮುಖಂಡರಾದ ವಿ.ಪಿ ಶಶಿಧರ್,ಯುವ ಸಾಹಿತಿ ನೌಷಾದ್ ಜನ್ನತ್, ಮಾಧ್ಯಮ ವರದಿಗಾರ ರಂಜಿತ್ ಕವಲಪ್ಪಾರವರು ವಿಶೇಷ ಅತಿಥಿಗಳಾಗಿ ಆಗಮಿಸಿ ಮಾತನಾಡಿದರು.ವೇದಿಕೆಯಲ್ಲಿ ಅಶ್ರಫ್ ಅಹ್ಸನಿ ಉಸ್ತಾದ್ ಹಫೀಳ್ ಸಅದಿ ಕೊಳಕೇರಿ, ಇಸ್ಮಾಯಿಲ್ ಸಖಾಫಿ ಕೊಂಡಂಗೇರಿ, KCFನಜಲೀಲ್ ನಿಝಾಮಿ,KMJಯಮುಹಮ್ಮದ್ ಹಾಜಿ ಕುಂಜಿಲ, ಲತೀಫ್ ಸುಂಟಿಕೊಪ್ಪ, ಅಡ್ವೊಕೇಟ್ ಕುಂಞಿ ಅಬ್ದುಲ್ಲಾ ,ಹಮೀದ್ ಕಬಡಕೇರಿ, ನೌಷಾದ್ ಝುಹ್ರಿ,ಮಾಲ್ದಾರೆ ಗ್ರಾ.ಪಂ ಅಧ್ಯಕ್ಷರಾದ ಶಮೀರ್,KSWA ಮುಖಂಡರಾದ ಬಶೀರ್, ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಪ್ರತಿಭೋತ್ಸವದ ಚಾಂಪಿಯನ್ ಟ್ರೋಫಿಯನ್ನು ಮಡಿಕೇರಿ ಡಿವಿಷನ್ ತನ್ನದಾಗಿಸಿಕೊಂಡಿತು. ವಿರಾಜಪೇಟೆ ಹಾಗೂ ಸೋಮವಾರಪೇಟೆ ಕ್ರಮವಾಗಿ ದ್ವಿತೀಯ ತೃತೀಯ ಸ್ಥಾನ ಗಳಿಸಿದರು.
ರಾಜ್ಯ ಮಟ್ಟದ ಪ್ರತಿಭೋತ್ಸವ ಕಾರ್ಯಕ್ರಮವು ಇದೇ ಬರುವ 26,27,28ರಂದು ದ.ಕ ಜಿಲ್ಲೆಯ ಕೃಷ್ಣಾಪುರದಲ್ಲಿ ನಡೆಯಲಿದೆ ಎಂದು ಜಿಲ್ಲಾ ಕಾರ್ಯದರ್ಶಿ ಮುಜೀಬ್ ಕೊಂಡಂಗೇರಿ ವರದಿಯಲ್ಲಿ ತಿಳಿಸಿದ್ದಾರೆ.