ಮಂಗಳೂರು, ನ.9: ಕರ್ನಾಟಕ ಮುಸ್ಲಿಂ ಜಮಾಅತ್ ಮಂಗಳೂರು ತಾಲೂಕು ಸಮಿತಿ ವತಿಯಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹಾಜಬ್ಬ ಹರೇಕಲ ರವರನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಲ್ಲಿ ಅಧ್ಯಕ್ಷ ಬಿ ಎ ಅಬ್ದುಲ್ ನಾಸಿರ್ ಲಕ್ಕಿಸ್ಟಾರ್ ನೇತೃತ್ವದಲ್ಲಿ ಸ್ವೀಕಾರ ನೀಡಲಾಯಿತು.
ಈ ಸಂದರ್ಭದಲ್ಲಿ ಜನಾಬ್ ಅಸ್ಗರ್ ಮಂಗಳೂರು,ಅಬ್ದುಲ್ ಲತೀಫ್ ಕಾರ್ಪೊರೇಟ್ ಕಂದಕ್,ಜನಾಬ್ ರಫೀಕ್ ಮಾಸ್ಟರ್ , ಇಕ್ಬಾಲ್ ಬೈಕಂಪಾಡಿ,ಮುಖ್ತಾರ್ ಅಹ್ಮದ್ ವಕೀಲರು ಬೈಕಂಪಾಡಿ, ಶಹೀದುದ್ದೀನ್ ಬೈಕಂಪಾಡಿ,ಸಹಾಯ್ ರಾಜ್ಯ ಕೋ ಆರ್ಡಿನೇಟರ್ ಅಶ್ರಫ್ ಮಾಜಿ ಮಂಗಳೂರು, ಇಸ್ಹಾಕ್ ವಕೀಲರು ಕಡಬ,ಎಂ ಮುಹಮ್ಮದ್ ಮರವೂರು.ಹಾರಿಸ್ ಬೈಕಂಪಾಡಿ,ಆಸಿಫ್ ಹೋಂ ಪ್ಲಸ್.ಇಲ್ಯಾಸ್ ಬೈಕಂಪಾಡಿ, ಆಸಿಪ್ ಡೀಲ್ಸ್.ಮುಸ್ತಫ ಮಲಾರ್.ಬದ್ರುದ್ದೀನ್ ಹಾಜಿ ಬಜ್ಪೆ, ಮುಹಮ್ಮದ್ ಸ್ವಾಲಿಹ್ ಬಜ್ಪೆ ಉಪಸ್ಥಿತರಿದ್ದರು.
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ಸ್ವಾಗತಿಸಲು ವಿಮಾನ ನಿಲ್ಧಾಣದಲ್ಲಿ ಭಾರೀ ಜನ ಸೇರಿದ್ದರು.
ಹರೇಕಳ ಹಾಜಬ್ಬ ಅವರಿಗೆ ಭಾರತ ಸರಕಾರ ನಿನ್ನೆ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿತ್ತು. ಪ್ರಶಸ್ತಿ ಪಡೆಯುವ ವೇಳೆ ಹಾಜಬ್ಬ ಚಪ್ಪಲಿ ಹಾಕದೆ, ಶರ್ಟ್ , ಪಂಚೆಯಲ್ಲಿ ತೆರಳಿ ಸರಳತೆ ಮೆರೆದಿದ್ದರು.
ಕಿತ್ತಳೆ ವ್ಯಾಪಾರಿ ಹಾಜಬ್ಬ ಕಿತ್ತು ತಿನ್ನುವ ಬಡತನದ ಮಧ್ಯೆ ಶಿಕ್ಷಣಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟು, ಹಲವು ಮಕ್ಕಳ ಬಾಳಿನಲ್ಲಿ ಶಿಕ್ಷಣದ ಬೆಳಕು ಚೆಲ್ಲಿದ್ದಕ್ಕೆ ಅವರಿಗೆ ಪದ್ಮಶ್ರಿ ನೀಡಲಾಗಿದೆ.
ಅಕ್ಷರ ಸಂತ ಹರೇಕಳ ಹಾಜಬ್ಬ ಅವರಿಗೆ ರಾಷ್ಟ್ರಪತಿ ರಾಮನಾಥ್ ಗೋವಿಂದ್ ಅವರು ದೇಶದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ನಿನ್ನೆ ಪ್ರದಾನ ಮಾಡಿದ್ದರು.