janadhvani

Kannada Online News Paper

ಪ್ರವಾದಿ ನಿಂದನೆ ಪದಬಳಕೆ, ಕೋಮು ಪ್ರಚೋದಿತ ಸಂದೇಶ ರವಾನೆ- ಕಠಿಣ ಕ್ರಮಕ್ಕೆ ಕೆ.ಅಶ್ರಫ್ ಆಗ್ರಹ

ಇತ್ತೀಚೆಗೆ ಜಿಲ್ಲೆಯ ಸುಳ್ಯ ಮೂಲದ ಜಗದೀಶ ಕೈವಲ್ತಾಡ್ಕ ಐವರ್ನಾಡು ಎಂಬ ಯುವಕ ತನ್ನ ಸಾಮಾಜಿಕ ಜಾಲ ತಾಣ ಖಾತೆಯಲ್ಲಿ ಪ್ರವಾದಿ ಯವರನ್ನು ನಿಂದನಾತ್ಮಕ ಪದ ಬಳಕೆ ಮಾಡಿ ಕೋಮು ಪ್ರಚೋದಿತ ಸಂದೇಶ ರವಾನೆ ಮಾಡಿ,ಸ್ಥಳೀಯವಾಗಿ ಅಶಾಂತಿ ಸೃಷ್ಟಿಸುವ ಕೃತ್ಯವನ್ನು ಎಸಗಿದ್ದು,ಪೊಲೀಸು ಇಲಾಖೆ ಈ ವ್ಯಕ್ತಿಯ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳ ಬೇಕು ಮತ್ತು ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುತುವರ್ಜಿ ವಹಿಸಬೇಕು ಎಂದು ಮುಸ್ಲಿಮ್ ಒಕ್ಕೂಟ ಆಗ್ರಹಿಸುತ್ತದೆ.
ಕೆ.ಅಶ್ರಫ್(ಮಾಜಿ ಮೇಯರ್)
ಅಧ್ಯಕ್ಷರು.
ದ.ಕ.ಜಿಲ್ಲಾ ಮುಸ್ಲಿಮ್ ಒಕ್ಕೂಟ.