janadhvani

Kannada Online News Paper

ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ಪ್ರತಿಭೋತ್ಸವ- ಯಶಸ್ವಿ ಸಮಾಪ್ತಿ

ಬ್ರಹ್ಮಾವರ : ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯು ಎರಡು ವರ್ಷಕೊಮ್ಮೆ ನಡೆಸುಕೊಂಡು ಬರುತ್ತಿರುವ ಪ್ರತಿಭೋತ್ಸವವು, ಎಸ್ಸೆಸ್ಸೆಫ್ ಸಾಸ್ತಾನ ಶಾಖಾ ಅದೀನದಲ್ಲಿ ಡಿವಿಷನ್ ಮಟ್ಟದಲ್ಲಿ ಸಾಸ್ತಾನ ಕುವ್ವತುಲ್ ಇಸ್ಲಾಂ ಜುಮ್ಮಾ ಮಸೀದಿ ವಠಾರದಲ್ಲಿ ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ವತಿಯಿಂದ ನಡೆಸಲಾಯಿತು.

ಇಂದು ಜಿಲ್ಲಾ, ರಾಜ್ಯ , ರಾಷ್ಟ್ರ ಮಟ್ಟದಲ್ಲಿ ಗುರುತಿಸಿಕೊಂಡಿರುವ ಹಾಲಿ ಮಾಜಿ ಹಲವಾರು ನಾಯಕರು ಪ್ರತಿಭೋತ್ಸವದಲ್ಲಿ ಉದಯಿಸಿ ಬಂದ ಪ್ರತಿಭೆಗಳಾಗಿದ್ದಾರೆ, ಹಾಗೇಯೆ ಮುಂದೊಂದು ದಿನ ಇಲ್ಲಿರುವ ಪ್ರತಿಭೆಗಳಾಗಿರಬಹುದು ರಾಜ್ಯ ನಾಯಕರಾಗಿ ಬರುವವರು ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ ರಾಜ್ಯ ಕ್ಯಾಬಿನೆಟ್ ಸಮಿತಿಯ ಕಾರ್ಯದರ್ಶಿ ಮಹಮ್ಮದ್ ಸಪ್ವಾನ್ ಚಿಕ್ಕಮಗಳೂರು ಇವರು ಮುಖ್ಯ ಪ್ರಸ್ತಾವಿಕ ಮಾತನ್ನಾಡುತ್ತ ತಿಳಿಸಿದರು. ಎಸ್ಸೆಸ್ಸೆಪ್ ಉಡುಪಿ ಡಿವಿಷನ್ ಅಧ್ಯಕ್ಷರಾದ ಸೈಯ್ಯೆದ್ ಯೂಸುಫ್ ನವಾಝ್ ತಂಙಲ್ ಹೂಡೆ ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವು ಕುವ್ವತುಲ್ ಇಸ್ಲಾಂ ಜುಮ್ಮಾ ಮಸೀದಿ ಸಾಸ್ತಾನ ಇದರ ಖತೀಬರಾದ ಬಿ.ಎ ಮಹಮ್ಮದ್ ಆಲಿ ಸಹದಿ ಬರುವ ಧ್ವಜಾರೋಹಣಗೈದು ಉದ್ಘಾಟನೆ ಬಾಷಣ ಮಾಡಿದರು. ಸೈಯ್ಯೆದ್ ಜುನೈದ್ ಅರ್ರಿಫಾಯಿ ತಂಙಲ್ ರಂಗನಕೆರೆ ದುವಾಗೈದರು. ಉಡುಪಿ ಜಿಲ್ಲಾಧ್ಯಕ್ಷರಾದ ಶಬ್ಬೀರ್ ಸಖಾಫಿ ಉಚ್ವಿಲ ಹಿತನುಡಿದರು.

ವಿವಿಧ ವಿಭಾಗದಲ್ಲಿನ ನಾಲ್ಕು ವೇದಿಕೆಗಳಲ್ಲಿ ನಡೆದ 80 ಕ್ಕು ಅಧಿಕ ಸ್ಪರ್ಧಾ ಕಾರ್ಯಕ್ರಮದಲ್ಲಿ 150 ಕ್ಕು ಮಿಕ್ಕ ಸ್ಪರ್ಧಾರ್ಥಿಗಳು ಭಾಗವಹಿಸಿದರು. ಪ್ರಥಮ ಚಾಂಪಿಯನ್ ಆಗಿ ಮಣಿಪುರ ಶಾಖೆ, ದ್ವಿತೀಯ ಚಾಂಪಿಯನ್ ಆಗಿ ಭದ್ರಗಿರಿ ಹಾಗೂ ರಂಗನಕೆರೆ ಶಾಖೆ ಹಾಗೂ ತೃತೀಯ ಚಾಂಪಿಯನ್ ಆಗಿ ಸಾಸ್ತಾನ ಶಾಖೆ ಮೂಡಿಬಂತು. ಈ ಸಂದರ್ಭದಲ್ಲಿ ಎಸ್ ಟಿಂ ಎಸ್ಸೆಸ್ಸೆಫ್ ಉಡುಪಿ ಡಿವಿಷನ್ ವತಿಯಿಂದ 2021 ರ ಸಾಲಿನ ಮರ್ಹೂಂ ಸಪ್ವಾನ್ ರಂಗನಕೆರೆ ಪ್ರಶಸ್ತಿಯನ್ನು ಸಮದ್ ಮದನಿ ಉಸ್ತಾದ್ ಗೆ ನೀಡಿ ಗೌರವಿಸಲಾಯಿತು. ಸಮಾಜಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಡಿವಿಷನ್ ನಾಯಕ ಸಿದ್ದೀಕ್ ಸಂತೋಷ್ ನಗರ ಇವರಿಗೆ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ರಾಜ್ಯ ಸಮಿತಿ ಸದಸ್ಯ ರವೂಪ್ ಖಾನ್ ಮೂಡುಗೋಪಾಡಿ, ಜಿಲ್ಲಾ ಕಾರ್ಯದರ್ಶಿ ಇಬ್ರಾಹಿಂ ಮಜೂರು, ಜಿಲ್ಲಾ ನಾಯಕರಾದ ಸಿದ್ದೀಕ್ ಸಖಾಫಿ ಹಂಗಳೂರು, ಡಿವಿಷನ್ ಪ್ರತಿಭೊತ್ಸವ ಇ.ಜಿ ನಿಝಾಂ ಕೋಟ ಪಡುಕೆರೆ, ಎಸ್ಸೆಸ್ಸೆಫ್ ಸಾಸ್ತಾನ ಶಾಖೆಯ ಅಧ್ಯಕ್ಷ ರಮೀಝ್, ಕಾರ್ಯದರ್ಶಿ ಪೊರೋಝ್ ಖಾನ್, ಮಾಜಿ ಅಧ್ಯಕ್ಷ ರಝಾಕ್, ಮಾಜಿ ನಾಯಕರಾದ ರಝಾಕ್ ಮಾಸ್ಟರ್, ರಝಾಕ್ ಉಸ್ತಾದ್ ಅಂಬಾಗಿಲು, ಸಮದ್ ಮದನಿ, ಸದರುಸ್ತಾದ್ ಹನೀಪ್ ಮುಸ್ಲಿಯಾರ್, ಪ್ರತಿಭೋತ್ಸವ ಚೇರ್ಮೆನ್ ಮಜೀದ್ ಕಟಪಾಡಿ , ತೀರ್ಪುಗಾರರಾಗಿ ಮೌಲಾನ ಅದಿಲ್ ರಝಾ ಕಾರ್ಕಳ, ಹನೀಪ್ ನಯಿಮಿ ಗುಲ್ವಾಡಿ, ಉಬೈದುಲ್ಲಾ ಸಖಾಫಿ, ಝಿಯಾದ್ ಮಾಸ್ಟರ್, ಆಶಿಕ್ ಮಾಸ್ಟರ್ ಸುರತ್ಕಲ್, ನೌರಾನಿ ಸಖಾಪಿ ಕೃಷ್ಣಾಪುರ, ಡಿವಿಷನ್ ಕೋಶಾಧಿಕಾರಿ ನಝೀರ್ ಸಾಸ್ತಾನ, ನಾಯಕರಾದ ಇಬ್ರಾಹಿಂ ಫಾಲಿಲಿ ಮಣಿಪುರ, ಅಬ್ದುಲ್ ಕಯ್ಯೂಮ್ ಮಲ್ಪೆ, ಅಪ್ನಾನ್, ಅಲ್ತಾಫ್ ಮಲ್ಪೆ, ಇಬ್ರಾಹಿಂ ರಂಗನಕೆರೆ, ಮುತ್ತಲಿಬ್ , ಶಿಹಾಬ್ ರಂಗನಕೆರೆ, ಅಸೀಪ್ ಸರಕಾರಿಗುಡ್ಡೆ, ಸಲ್ಮಾನ್, ಇರ್ಶಾದ್ ಮಣಿಪುರ, ನವಾಝ್ ಉಡುಪಿ, ಸೈಪ್ ಅಲಿ ಹೊನ್ನಾಳ, ರಶೀದ್ ಗಾಂಧಿನಗರ, ಅನ್ಸಾರ್ ಸಂತೋಷ್ ನಗರ ಹಾಗೂ ಇನ್ನಿತರ ಸೆಕ್ಟರ್ ಶಾಖಾ ನಾಯಕರು ಉಪಸ್ಥಿತಿ ಇದ್ದರು.

ಕೊನೆಯಲ್ಲಿ ಡಿವಿಷನ್ ನಾಯಕ ಅನ್ಸಾರ್ ಸಂತೋಷ್ ನಗರ ಇವರು ಬೈತ್ ನ್ನು ಆಡಿದರು. ಡಿವಿಷನ್ ಪ್ರ‌. ಕಾರ್ಯದರ್ಶಿ ಇಮ್ತಿಯಾಝ್ ಹೊನ್ನಾಳ ಸ್ವಾಗತಿಸಿದರು. ಪ್ರತಿಭೋತ್ಸವ ಸಮಿತಿ ಸದಸ್ಯ ಸಿದ್ದೀಕ್ ಸಂತೋಷ್ ನಗರ ಧನ್ಯವಾದ ಸಲ್ಲಿಸಿದರು. ಪ್ರತಿಭೋತ್ಸವ ಕನ್ವೀನರ್ ನಾಸೀರ್ ಭದ್ರಗಿರಿ ಕಾರ್ಯಕ್ರಮ ನಿರೂಪಣೆ ಮಾಡಿದರು.

error: Content is protected !! Not allowed copy content from janadhvani.com