ರಿಯಾದ್: ಸೌದಿ ಅರೇಬಿಯಾದ ಖಾಸಗಿ ಕಂಪನಿಗಳಿಗೆ ವಿದೇಶಿ ಉದ್ಯೋಗಿಗಳಿಗಾಗಿ ವಿಶೇಷ ಕ್ವಾರಂಟೈನ್ ಸೌಲಭ್ಯವನ್ನು ಸ್ಥಾಪಿಸಲು ಪರವಾನಗಿ ನೀಡಲು ಪ್ರಾರಂಭಿಸಿದೆ.
ಪೌರಾಡಳಿತ ಮತ್ತು ಗ್ರಾಮೀಣ ವಸತಿ ಸಚಿವಾಲಯವು ವಿದೇಶದಿಂದ ಲಸಿಕೆ ಪಡೆಯದ ಕಾರ್ಮಿಕರನ್ನು ಇರಿಸಲು ವಿಶೇಷ ಕ್ವಾರಂಟೈನ್ ಕೇಂದ್ರಗಳನ್ನು ಸ್ಥಾಪಿಸಲು ಉದ್ಯಮಿಗಳಿಗೆ ಪರವಾನಗಿ ನೀಡಲು ಕ್ರಮ ಕೈಗೊಂಡಿದೆ.
ರಸ್ತೆ, ಸಮುದ್ರ ಮತ್ತು ವಾಯು ಮಾರ್ಗ ಮೂಲಕ ದೇಶವನ್ನು ಪ್ರವೇಶಿಸುವ ಲಸಿಕೆ ಹಾಕದ ವ್ಯಕ್ತಿಗಳನ್ನು ಸುರಕ್ಷಿತವಾಗಿ ಸ್ವಾಗತಿಸಿ,ವಿಶೇಷ ಕಾಳಜಿಯಿಂದ ನೋಡಿಕೊಳ್ಳುವಂತೆ ಕ್ವಾರಂಟೈನ್ ಕೇಂದ್ರಗಳಿಗೆ ಪರವಾನಗಿಗಳನ್ನು ನೀಡಲಾಗುತ್ತದೆ. ಅರ್ಜಿಯನ್ನು ಆಹ್ವಾನಿಸಿದಾಗ, ಹಲವಾರು ಸಂಸ್ಥೆಗಳು ಮುಂದೆ ಬಂದವು ಮತ್ತು ಅಂತಹ ಕೇಂದ್ರಗಳನ್ನು ದೇಶದಾದ್ಯಂತ ಸ್ಥಾಪಿಸಲಾಗುವುದು ಎಂದು ಸಚಿವಾಲಯ ಹೇಳಿದೆ.
ರಿಯಾದ್, ಜಿದ್ದಾ, ದಮ್ಮಾಮ್ ಮತ್ತು ಧಹ್ರಾನ್ನಲ್ಲಿ ಇದುವರೆಗೆ 3,276 ಜನರ ಸಾಮರ್ಥ್ಯದ 25 ಕೇಂದ್ರಗಳು ಮತ್ತು 1,669 ಜನರ ಸಾಮರ್ಥ್ಯದ 10 ಕಟ್ಟಡಗಳನ್ನು ಸಚಿವಾಲಯವು ಅನುಮೋದಿಸಿದೆ.
ಪ್ರಸ್ತುತ ವಿದೇಶಿ ಕಾರ್ಮಿಕರು ತಮ್ಮ ಸ್ವಂತ ಖರ್ಚಿನಲ್ಲಿ ಸ್ಟಾರ್ ಹೋಟೆಲ್ಗಳಿಗೆ ಹೆಚ್ಚಿನ ಹಣವನ್ನು ಖರ್ಚು ಮಾಡಿ ಕ್ವಾರಂಟೈನ್ ಪೂರ್ತೀಕರಿಸುತ್ತಿದ್ದು, ಹೊಸ ತೀರ್ಮಾನವು ಪ್ರಯೋಜನಕಾರಿಯಾಗಲಿದೆ.
















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ದುಬೈ: ರೂಮ್ ಶೇರಿಂಗ್ ಮತ್ತು ಸಬ್ಲೆಟಿಂಗ್ಗೆ ಹೊಸ ನಿಯಮ- ಅನಿವಾಸಿಗಳು ತಿಳಿದುಕೊಳ್ಳಬೇಕಾದ ಪ್ರಮುಖ ಮಾಹಿತಿ
ಎಸ್ವೈಎಸ್ ದ.ಕ ಜಿಲ್ಲೆ (ವೆಸ್ಟ್): ‘ಹುಬ್ಬುರ್ರಸೂಲ್ ಕಾನ್ಫರೆನ್ಸ್- 26’ – ಪ್ರಿ ಸಿಟ್ಟಿಂಗ್
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಎಸ್ಸೆಸ್ಸೆಫ್ ಉಡುಪಿ ಜಿಲ್ಲಾ ಮಟ್ಟದ ಸಾಹಿತ್ಯೋತ್ಸವ: ಇಂದು ಮತ್ತು ನಾಳೆ – ತ್ವಯಿಬಾ ಗಾರ್ಡನ್ ನಲ್ಲಿ
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಸಮಸ್ತ ಜನರಲ್ ಸೆಕ್ರೆಟರಿ ಪ್ರೊಫೆಸರ್ ಕೆ. ಆಲಿಕ್ಕುಟ್ಟಿ ಮುಸ್ಲಿಯಾರ್ ವಫಾತ್
ವಿದ್ಯಾರ್ಥಿಗಳ ಧ್ವನಿಗೆ ಕಿವಿಗೊಡಿ, ಶಿಕ್ಷಣ ಹಾಗೂ ಸಂವಿಧಾನ ಗೌರವಿಸಿ: ಕೇಂದ್ರಕ್ಕೆ ರಜ್ವಿ ಆಗ್ರಹ