janadhvani

Kannada Online News Paper

ಮುಸ್ಲಿಮರ ಮೇಲಿನ ದಾಳಿಯನ್ನು ಖಂಡಿಸಿ ಪಿಎಫ್ಐ ಉಪ್ಪಿನಂಗಡಿ ವತಿಯಿಂದ ಪ್ರತಿಭಟನೆ

ಉಪ್ಪಿನಂಗಡಿ: ಕಳೆದ ಒಂದು ವಾರದಿಂದ ತ್ರಿಪುರಾದಲ್ಲಿ ನಿರಂತರವಾಗಿ ಮುಸ್ಲಿಮರ ವಿರುದ್ಧ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿತ್ತು. ಅದರಂತೆ ಉಪ್ಪಿನಂಗಡಿಯ ಹೊಸ ಬಸ್ ನಿಲ್ದಾಣ ಬಳಿಯಲ್ಲಿ ಪ್ರತಿಭಟನೆ ನಡೆಸಲಾಯಿತು.

ಬಾಂಗ್ಲಾದೇಶದ ಗಲಭೆಯನ್ನು ನೆಪವಾಗಿಸಿ ಕೊಂಡು ವಿಶ್ವಹಿಂದೂ ಪರಿಷತ್ ಹಲವಾರು ಮಸೀದಿಗಳನ್ನು ಈಗಾಗಲೇ ದ್ವಂಸ ಮಾಡಿದ್ದು ಮುಸ್ಲಿಂ ಹೆಣ್ಮಕ್ಕಳನ್ನು ಅತ್ಯಾಚಾರ ಮಾಡಿ ಮುಸ್ಲಿಮರ ಮಾರಣಹೋಮ ಮಾಡುತ್ತಿದೆ. ಇದನ್ನು ಸರ್ಕಾರ ಮತ್ತು ಪೋಲಿಸ್ ಇಲಾಖೆ ಮೂಕರಾಗಿದ್ದುಕೊಂಡು ಪ್ರಯೋಜಿಸುತ್ತಿದೆ.

ಮಾಧ್ಯಮಗಳು ಕೂಡ ಕಂಡು ಕಾಣದಂತೆ ವರ್ತಿಸುತ್ತಿದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ನಾಯಕರಾದ ಸಾದಿಕ್ ಅತ್ತಾಜೆಯವರು ಅಸಮಾಧಾನ ವ್ಯಕ್ತ ಪಡಿಸಿದರು. ಈ ನಿಟ್ಟಿನಲ್ಲಿ ಪಾಪ್ಯುಲರ್ ಫ್ರಂಟ್ ದೇಶಾದ್ಯಂತ ಜನರನ್ನು ಎಚ್ಚರಿಸುವ ಮತ್ತು ಫ್ಯಾಸಿಸಂ ನ ಹಿಡನ್ ಅಜೆಂಡಾವನ್ನು ಜನರ ಮುಂದೆ ತರುವ ಪ್ರಯತ್ನವನ್ನು ಈ ಫ್ರತಿಭಟನೆ ಮೂಲಕ ಮಾಡುತ್ತಿದೆ ಎಂದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ಜಿಲ್ಲಾ ಸಮಿತಿಯ ಅಧ್ಯಕ್ಷರಾದ ಅಬ್ದುಲ್ ಹಮೀದ್ ಮೆಜೆಸ್ಟಿಕ್ ಮಾತನಾಡಿ ಪೋಲಿಸರು ಸಂಘಪರಿವಾರದ ಕೈಗೊಂಬೆ ಗಳಾಗಬಾರದು. ಹಿಂದುತ್ವವಾದಿಗಳು ಪೋಲಿಸರನ್ನು ಬಿಡುವುದಿಲ್ಲ ಎಂಬುವುದಕ್ಕೆ ಇತ್ತೀಚೆಗೆ ಉಪ್ಪಿನಂಗಡಿಯಲ್ಲಿ ನಡೆದ ಪ್ರಕರಣ ಸಾಕ್ಷಿ ಎಂದರು.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಉಪ್ಪಿನಂಗಡಿ ಜಿಲ್ಲಾ ಸಮಿತಿ ಸದಸ್ಯರಾದ ಮುಸ್ತಫಾ ಪೆರ್ನೆ ಸಂದರ್ಭೋಚಿತವಾಗಿ ಮಾತನಾಡಿದರು.

ಸಿದ್ದೀಕ್ ಮಣ್ಣಗುಂಡಿ ಸ್ವಾಗತಿಸಿ ನಿರೂಪಿಸಿದರು.

error: Content is protected !! Not allowed copy content from janadhvani.com