ದುಬೈ: ಏರ್ ಇಂಡಿಯಾ ಎಕ್ಸ್ಪ್ರೆಸ್ ಮಕ್ಕಳಿಗೆ ಬ್ಯಾಗೇಜ್ ಅಲವನ್ಸ್‌ನ್ನು ಕಡಿಮೆಗಿಳಿಸಿ, 30 ಕೆ.ಜಿ.ಯಿಂದ 20ಕ್ಕೆ ಇಳಿಸಿದೆ.ಈ ತಿಂಗಳ 2 ರಿಂದ ಆಗಸ್ಟ್ 31 ರವರೆಗೆ ಈ ನಿಯಂತ್ರಣ ಇರಲಿದೆ. ಜಿಸಿಸಿ ದೇಶಗಳಿಂದ ಭಾರತಕ್ಕೆ ಅದೇ ರೀತಿ ಮರಳುವ ಮಕ್ಕಳ ಸರಕು ಭತ್ಯೆಯಲ್ಲಿ ಕಡಿಮೆ ಮಾಡಲಾಗಿದೆ. ಎರಡರಿಂದ 12 ವರ್ಷ ವಯಸ್ಸಿನ ಮಕ್ಕಳಿಗೆ ಇದು ಅನ್ವಯವಾಗಲಿದೆ.
ಬೇಸಿಗೆಯ ರಜೆ ಮುಗಿಯುವ ತನಕ 20 ಕೆ.ಜಿ. ಮಾತ್ರ ಅನುಮತಿಸಲಾಗುವುದು. ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಬ್ಯಾಗೇಜ್ ಭತ್ಯೆ ಹತ್ತು ಕಿಲೋಗ್ರಾಂಗಳಷ್ಟು ಮುಂದುವರಿಯುತ್ತದೆ.ಈ ಮಕ್ಕಳಿಗೆ ಟಿಕೆಟ್ ದರವನ್ನು 120ದಿರ್ಹಂ ಗೆ ನಿಗದಿಪಡಿಸಲಾಗಿದೆ.
ಈ ಹಿಂದೆ ವಯಸ್ಕರ ಟಿಕೆಟ್‌ನ ಶೇಕಡಾವಾರು ಮಾತ್ರ ಪಡೆಯಲಾಗುತ್ತಿತ್ತು. ವಯಸ್ಕರ ಬ್ಯಾಗೇಜ್‌ನ ತೂಕದ ಅನುಸಾರವಾಗಿ ಹೆಚ್ಚು ಮತ್ತು ಕಡಿಮೆಯಾಗುತ್ತದೆ.
20 ಕೆಜಿ ಬ್ಯಾಗೇಜ್ ಮಾತ್ರ ಹೊಂದಿರುವವರಿಗೆ ಟಿಕೆಟ್ ದರದಲ್ಲಿ ರಿಯಾಯಿತಿ ಪಡೆಯಬಹುದಾಗಿದೆ.