janadhvani

Kannada Online News Paper

ದೇಶಾದ್ಯಂತ ಮುಸ್ಲಿಂ ಬಾಂಧವರಿಂದ ಈದ್ ಮಿಲಾದ್ ಆಚರಣೆ- ಗಣ್ಯರ ಶುಭಾಶಯ

ನಾವು ಪ್ರವಾದಿಯ ಜೀವನ ಮತ್ತು ಆದರ್ಶಗಳಿಂದ ಸ್ಫೂರ್ತಿ ಪಡೆಯೋಣ- ರಾಷ್ಟ್ರಪತಿ

ನವದೆಹಲಿ,ಅ.19: ಪ್ರವಾದಿ ಮುಹಮ್ಮದ್ ಪೈಗಂಬರ್ ಸ್ವಲ್ಲಲ್ಲಾಹು ಅಲೈಹಿ ವ ಸಲ್ಲಮ್ ಅವರ ಜನ್ಮದಿನವಾದ ಈದ್ -ಮಿಲಾದ್‌ನ್ನು ದೇಶಾದ್ಯಂತ ಮುಸ್ಲಿಮರು ಸಂಭ್ರಮದಿಂದ ಮಂಗಳವಾರ ಆಚರಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮ್‌ ನಾಥ್ ಕೋವಿಂದ್ ಸೇರಿದಂತೆ ಗಣ್ಯರು ಶುಭಾಶಯ ಕೋರಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು, ದೇಶದ ಜನತೆಗೆ ಈದ್ ಮಿಲಾದ್ ಶುಭಾಶಯಗಳು. ಪ್ರಮುಖವಾಗಿ ಮುಸ್ಲಿಂ ಸಹೋದರ ಹಾಗೂ ಸಹೋದರಿಯರಿಗೆ ಈಗ್ ಮಿಲಾದ್ ಶುಭಾಶಯಗಳು. ಪ್ರವಾದಿ ಮುಹಮ್ಮದ್ ಅವರ ಜನ್ಮದಿನವನ್ನು ಈದ್-ಇ-ಮಿಲಾದ್ ಎಂದು ಆಚರಿಸಲಾಗುತ್ತದೆ. ನಾವು ಪ್ರವಾದಿಯ ಜೀವನ ಮತ್ತು ಆದರ್ಶಗಳಿಂದ ಸ್ಫೂರ್ತಿ ಪಡೆಯೋಣ ಮತ್ತು ಸಮಾಜದ ಏಳಿಗೆ ಮತ್ತು ದೇಶದಲ್ಲಿ ಶಾಂತಿ ಮತ್ತು ಸೌಹಾರ್ದತೆಗಾಗಿ ದುಡಿಯೋಣ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಯವರು ಟ್ವೀಟ್ ಮಾಡಿ, ದೇಶದ ಜನತೆಗೆ ಈದ್ ಮಿಲಾದ್ ಶುಭಾಶಯಗಳು, ಈ ಹಬ್ಬ ನಮ್ಮ ಸುತ್ತಲೂ ಶಾಂತಿ ಮತ್ತು ಸಮೃದ್ಧಿ ತರಲಿ. ದಯೆ ಮತ್ತು ಸಹೋದರತ್ವದ ಗುಣಗಳು ಯಾವಾಗಲೂ ಮೇಲುಗೈ ಸಾಧಿಸಲಿ. ಈದ್ ಮುಬಾರಕ್! ಎಂದು ತಿಳಿಸಿದ್ದಾರೆ.

error: Content is protected !! Not allowed copy content from janadhvani.com