janadhvani

Kannada Online News Paper

ಮಕ್ಕಾ ಮತ್ತು ಮದೀನಾ ಮಸೀದಿಗಳು ಸಹಜ ಸ್ಥಿತಿಯತ್ತ – ವಿಶ್ವಾಸಿಗಳ ಹರಿವು

ದೈಹಿಕ ಅಂತರ ಕಾಯ್ದುಕೊಳ್ಳುವ ಸ್ಟಿಕ್ಕರ್ ಮತ್ತು ಕಅಬಾ ಸುತ್ತಲಿನ ಬ್ಯಾರಿಕೇಡ್‌ ತೆರವು

ರಿಯಾದ್ :ಮಕ್ಕಾ ಮತ್ತು ಮದೀನಾದ ಹರಂ ಮಸೀದಿಗಳು ಕೋವಿಡ್ ಪ್ರೋಟೋಕಾಲ್ ಬದಲಾವಣೆಯೊಂದಿಗೆ ವಿಶ್ವಾಸಿಗಳ ಹರಿವಿಗೆ ಸಾಕ್ಷಿಯಾದವು.

ದೈಹಿಕ ಅಂತರ ಕಾಯ್ದುಕೊಳ್ಳುವ ನಿರ್ಧಾರವನ್ನು ಹಿಂಪಡೆದ ನಂತರ ಮಕ್ಕಾ ಮತ್ತು ಮದೀನಾ ಸಹಜ ಸ್ಥಿತಿಗೆ ಮರಳಿದಂತೆ ಭಾಸವಾಯಿತು. ಕಅ್ ಬಾದ ಸುತ್ತಲೂ ಇರಿಸಲಾಗಿದ್ದ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಲಾಗಿದೆ.

ಎಲ್ಲಾ ವಿಶ್ವಾಸಿಗಳಿಗೆ ಎರಡೂ ಹರಂ ಪ್ರವೇಶಿಸಲು ಅನುಮತಿ ಇಂದಿನಿಂದ ಜಾರಿಗೆ ಬಂದಿದೆ. ಸುಬ್ಹ್ ಪ್ರಾರ್ಥನೆಗೆ ಭಾರೀ ಸಂಖ್ಯೆಯಲ್ಲಿ ವಿಶ್ವಾಸಿಗಳು ಆಗಮಿಸಿದರು. ಕೋವಿಡ್ ಪೂರ್ವ ನೆನಪಿನಲ್ಲಿ ಕಅಬಾ ಬಳಿ ಸುಬಹಿ ಪ್ರಾರ್ಥನೆ ನಡೆಯಿತು.ದೈಹಿಕ ಅಂತರವನ್ನು ಕಾಯ್ದುಕೊಳ್ಳುವ ನಿರ್ಧಾರವನ್ನು ಹಿಂತೆಗೆದುಕೊಳ್ಳುವುದರೊಂದಿಗೆ, ಮೊದಲು ಹರಂನಲ್ಲಿ ಅಂಟಿಸಲಾಗಿದ್ದ ಸ್ಟಿಕ್ಕರ್‌ಗಳನ್ನು ತೆಗೆದುಹಾಕಲಾಯಿತು.

ಮಾಸ್ಕ್ ಧರಿಸಿ, ಎರಡು ಡೋಸ್ ಲಸಿಕೆ ಪಡೆದು, ಪರವಾನಗಿ ಪಡೆದು ನಂತರ ನೀವು ಎಂದಿನಂತೆ ಹರಂಗೆ ಹೋಗಬಹುದು. ಮೊದಲಿಗಿಂತ ಭಿನ್ನವಾಗಿ, ಪ್ರತಿಯೊಬ್ಬರಿಗೂ ಪರವಾನಗಿ ಲಭಿಸುತ್ತಿದೆ. ಇದರೊಂದಿಗೆ, ಹರಮ್ ತನ್ನ ಹಿಂದಿನ ವೈಭವಕ್ಕೆ ಮರಳುತ್ತಿದೆ.

ಕಅಬಾದ ಉದ್ದಕ್ಕೂ ಹಿಂದೆ ಕಟ್ಟಿದ್ದ ಬ್ಯಾರಿಕೇಡ್‌ಗಳನ್ನು ಸಹ ತೆರವುಗೊಳಿಸಲಾಗಿದೆ. ಪ್ರಸ್ತುತ, ಕಅಬಾವನ್ನು ಮುಟ್ಟುವುದನ್ನು ತಡೆಯಲಾಗಿದೆ.ಕೋವಿಡ್ ನಿರ್ಬಂಧಗಳನ್ನು ಸಂಪೂರ್ಣವಾಗಿ ತೆಗೆದಲ್ಲಿ, ವಿಶ್ವಾಸಿಗಳಿಗೆ ಮತ್ತೊಮ್ಮೆ ಹಜರುಲ್ ಅಸ್ವದ್ ಕಪ್ಪು ಮುತ್ತನ್ನು ಚುಂಬಿಸಲು ಸಾಧ್ಯವಾಗಲಿದೆ. ಮದೀನಾದ ಪ್ರವಾದಿಯ ಮಸೀದಿ ಕೂಡ ಇಂದು ಕಿಕ್ಕಿರಿದು ತುಂಬಿತ್ತು. ಮುಂಬರುವ ವಾರಗಳಲ್ಲಿ ಹೆಚ್ಚಿನ ವಿದೇಶಿಯರು ಬರುವ ಸಾಧ್ಯತೆಯಿದೆ.