ಕುವೈಟ್ ಸಿಟಿ: ಕುವೈಟ್‌ನಲ್ಲಿ ವಿದೇಶೀಯರು ನಡೆಸುವ ಹಣಕಾಸು ವ್ಯವಹಾರಕ್ಕೆ ತೆರಿಗೆ ವಸೂಲು ಮಾಡಲು ಅಲ್ಲಿನ ಹಣಕಾಸು, ಆರ್ಥಿಕ ಖಾತೆಯ ಸಮಿತಿಯು ಅನುಮೋದನೆ ನೀಡಿದೆ.
ಸಮಿತಿಯ ಅಧ್ಯಕ್ಷೆ ಸಲಾ ಖೋರ್ಷದ್ ಈ ವಿಷಯವನ್ನು ತಿಳಿಸಿದರು.
ಕಡಿಮೆ-ಆದಾಯದ ವಲಸಿಗರಿಗೂ ಇದು ಅನ್ವಯಿಸುತ್ತದೆ.ತೆರಿಗೆ ವಿಧಿಸುದು ಕಾನೂನುಬಾಹಿರವೇನೂ ಅಲ್ಲ ಎಂದು ಸಮಿತಿಯು ಹೆಳಿಕೊಂಡಿದೆ.
99 ದಿನಾರ್‌ಗಳ ವ್ಯವಹಾರದ ಮೇಲೆ ಒಂದು ಶೇಕಡಾ ತೆರಿಗೆ. 100 ರಿಂದ 299 ದಿನಾರ್‌ಗಳ ವರೆಗೆ ಎರಡು ಶೇಕಡಾ ಮತ್ತು 300 ರಿಂದ 499, ರ ವರೆಗೆ 3 ಶೇ, 500 ಮತ್ತು ಮೇಲ್ಪಟ್ಟ ಐದು ಶೇಕಡಾ ತೆರಿಗೆ ವಸೂಲಿಗೆ ಸಮಿತಿ ಶಿಫಾರಸು ಮಾಡಿದೆ.
ಈ ತೆರಿಗೆಯನ್ನು ಕೇಂದ್ರ ಬ್ಯಾಂಕ್ ಸಂಗ್ರಹಿಸಿ ಹಣಕಾಸು ಸಚಿವಾಲಯಕ್ಕೆ ವರ್ಗಾಯಿಸುವುದು. ಕಾನೂನು ಉಲ್ಲಘಿಸುವ ಹಣಕಾಸು ವ್ಯವಹಾರ ಕೇಂದ್ರಗಳು ಮತ್ತು ಬ್ಯಾಂಕುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಕಾನೂನು ಉಲ್ಲಂಘಿಸಿರುವವರಿಗೆ ಐದು ವರ್ಷಗಳ ಜೈಲು ಶಿಕ್ಷೆ ಮತ್ತು ವ್ಯವಹಾರ ನಡೆಸಲಾದ ನಗದಿನ ದ್ವಿಪಟ್ಟು ದಂಡವನ್ನು ನೀಡಬೇಕು ಎಂದು ಸೂಚಿಸಲಾಗಿದೆ.