ದುಬೈ: ದುಬೈನಲ್ಲಿ ಪ್ಲಾಸ್ಟಿಕ್ ಮೊಟ್ಟೆಗಳು ಇಲ್ಲ ಎಂಬುದನ್ನು ದುಬೈ ಮುನಿಸಿಪಾಲಿಟಿ ವ್ಯಕ್ತಪಡಿಸಿದೆ.ಇಂತಹ ಅಪಪ್ರಚಾರಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾಮಾಜಿಕ ತಾಣಗಳಲ್ಲಿ ಪ್ಲಾಸ್ಟಿಕ್ ನಿಂದ ತಯಾರಿಸಲಾದ ಮೊಟ್ಟೆಯ ಬಗ್ಗೆ ವೀಡಿಯೋ ತುಣುಕೊಂದು ಹರಿದಾಡುತ್ತಿದೆ.ಮೊಟ್ಟೆಯನ್ನು ಬಿಸಿ ಮಾಡಿದಾಗ ಪ್ಲಾಸ್ಟಿಕ್ ನ ಅಂಶ ಮೇಲೆ ಬಂತು ಎಂಬುದಾಗಿ ವೀಡಿಯೋದಲ್ಲಿ ಹೇಳಲಾಗಿದೆ.
ಸಾಧಾರಣ ಕೊಠಡಿಗಳಲ್ಲಿ ಪ್ಲಾಸ್ಟಿಕನ್ನು ತಂದಿಟ್ಟರೆ ಏನೂ ಆಗುವುದಿಲ್ಲ. ಅಧಿಕ ಉಷ್ಣಾಂಶ ಇರುವ ಕಡೆ ಅದು ಕರಗಿ ಹೋಗುತ್ತದೆ ಎಂದು ದುಬೈ ಮುನಿಸಿಪಾಲಿಟಿಯ ಫುಡ್ ಸೇಫ್ಟಿ ವಿಭಾಗವು ತಿಳಿಸಿದೆ.
ದ್ರವ ರೂಪದ ದಲ್ಲಿರುವ ಮೊಟ್ಟೆಯನ್ನು ಬಿಸಿ ಮಾಡಿದಾಗ ಇನ್ನಷ್ಟು ಗಟ್ಟಿಯಾಗುವುದಾಗಿ ವೀಡಿಯೋದಲ್ಲಿ ವಿವರಿಸಲಾಗಿದೆ. ಅಧಿಕ ಉಷ್ಣಾಂಶದಲ್ಲಿ ಅಂತಹ ಮೊಟ್ಟೆ ಗರಗಬೇಕಾಗಿತ್ತು. ಹಾಗಾಗದ ಕಾರಣ ಮೊಟ್ಟೆ ಪ್ಲಾಸ್ಟಿಕ್ ಅಲ್ಲ ಎಂಬುದು ದೃಢ ಪಟ್ಟಿದೆ ಎಂದು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.
ಮೊಟ್ಟೆಗಳನ್ನು ವಿವಿಧ ಉಷ್ಣಾಂಶ ಇರುವ ಕಡೆಗಳಲ್ಲಿ ತಂದಿಡುವಾಗ ಅದರ ಪೋಷಕಾಂಶಗಳಲ್ಲಿ ಏರುಪೇರು ಉಂಟಾಗಬಹುದಾದರೂ ಇನ್ನ್ಯಾವುದೇ ಕೇಡು ಉಂಟಾಗುವುದಿಲ್ಲ. ಮೊಟ್ಟೆಯಲ್ಲಿನ ಬಿಳಿದ್ರವ ಕೇಡಾಗುವುದರಿಂದ ಮೊಟ್ಟೆಗಳು ವಿವಿಧ ರೂಪಗಳಲ್ಲಿ ಕಂಡು ಬರುತ್ತಿದೆ.ಇಂತಗ ಅಪಪ್ರಚಾರಗಳಿಗೆ ಬಲಿಯಾಗದಂತೆ ಅಧಿಕಾರಿಗಳು ತಿಳಿಸಿದ್ದಾರೆ.
ಯುಎಇ ಗೆ ಹೊರದೇಶದಿಂದ ಮೊಟ್ಟೆಗಳನ್ನು ಅಮದು ಮಾಡಲಾಗುವುದಿಲ್ಲ. ಯುಎಇ ಯ ಮೊಟ್ಟೆಗಳನ್ನು ಮಾತ್ರ ಎಮಿರೇಟ್ಸ್‌ನಾದ್ಯಂತ ಮಾರಾಟ ಮಾಡಲಾಗುತ್ತಿದೆ. ಈ ಹಿಂದೆ ಸೌದಿಯಿಂದ ಅಮದು ಮಾಡಲಾಗುತ್ತಿತ್ತಾದರೂ ನಂತರ ಅದನ್ನು ನಿಲ್ಲಿಸಲಾಗಿದೆ.
ಇತ್ತೀಚೆಗೆ ಭಾರತದಲ್ಲೂ ಪ್ಲಾಸ್ಟಿಕ್ ಮೊಟ್ಟೆ ಇರುವ ಬಗ್ಗೆ ಸುಳ್ಳು ಪ್ರಚಾರ ಕೇಳಿಬಂದಿತ್ತು.