janadhvani

Kannada Online News Paper

ಅಕ್ಟೋಬರ್ 8ಕ್ಕೆ ಕೆಸಿಎಫ್ ಬಹರೈನ್ ವತಿಯಿಂದ ಗ್ರ್ಯಾಂಡ್ ಮೀಲಾದ್ ಕಾನ್ಫರೆನ್ಸ್

ಕೆಸಿಎಫ್ ಬಹರೈನ್ ರಾಷ್ಟ್ರೀಯ ಸಮಿತಿಯು ಆಯೋಜಿಸುವ ಇಶ್ಕ್ ಎ ರಸೂಲ್ (ﷺ ) ಗ್ರಾಂಡ್ ಮೀಲಾದ್ ಕಾನ್ಫರೆನ್ಸ್ 2021 ಅಕ್ಟೋಬರ್ 8 ಶುಕ್ರವಾರ ರಾತ್ರಿ ಬಹರೈನ್ ಸಮಯ 8 ಗಂಟೆಗೆ ಸರಿಯಾಗಿ ಝೂಮ್ ಮುಖಾಂತರ ನಡೆಯಲಿದೆ.

ರಾಷ್ಟೀಯ ಸಮಿತಿ ಅಧ್ಯಕ್ಷರಾದ ವಿಟ್ಟಲ್ ಜಮಾಲುದ್ದೀನ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಉಪಾಧ್ಯಕ್ಷರಾದ ಅಸ್ಸಯ್ಯಿದ್ ಅಲೀ ಬಾಫಕಿ ತಂಙಳ್ ರವರು ದುವಾಶೀರ್ವಚನ ನಡೆಸಲಿದ್ದಾರೆ.

ಕೆಸಿಎಫ್ ಅಂತರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಾ| ಶೇಖ್ ಬಾವ ಮಂಗಳೂರು ರವರು ಉದ್ಘಾಟನೆ ಮಾಡಲಿರುವ ಸಮಾರಂಭದಲ್ಲಿ ಮದನೀಯಂ ಕಾರ್ಯಕ್ರಮದ ಮೂಲಕ ಜನ ಸಾಗರದ ಮನ ಗೆದ್ದ
ಅಬ್ದುಲ್ಲತೀಫ್ ಸಖಾಫಿ ಕಾಂತಪುರಂ ರವರು ಮುಖ್ಯ ಪ್ರಭಾಷಣವನ್ನು ಮಾಡಲಿದ್ದಾರೆ.

ಆನ್ಲೈನ್ ಮೂಲಕ ನಡೆಯಲಿರುವ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಯಶಸ್ವಿಗೊಳಿಸಬೇಕಾಗಿ ಮೀಲಾದ್ ಸಮಿತಿ ಚೇರ್ಮ್ಯಾನ್ ಜನಾಬ್ ಅಲೀ ಮುಸ್ಲಿಯಾರ್, ವೈಸ್ ಚೇರ್ಮ್ಯಾನ್ ಬಶೀರ್ ಕಾರ್ಲೆ, ಜನರಲ್ ಕನ್ವೀನರ್ ಇಬ್ರಾಹಿಂ ಸಅದಿ ಹಾಗೂ ಫೈನಾನ್ಸ್ ಸೆಕ್ರೆಟರಿ ರಿಯಾಜ್ ಸುಳ್ಯ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.error: Content is protected !! Not allowed copy content from janadhvani.com