janadhvani

Kannada Online News Paper

ಸ್ವಂತ ಪ್ರಾಯೋಜಕರಡಿಯಲ್ಲೇ ಕೆಲಸ ಮಾಡಿ, ಇಲ್ಲಾಂದ್ರೆ 10 ಲಕ್ಷ ರೂ.ದಂಡ- ಜವಾಝಾತ್

ರಿಯಾದ್: ಸೌದಿ ಅರೇಬಿಯಾದಲ್ಲಿ ತಮ್ಮ ಸ್ವಂತ ಪ್ರಾಯೋಜಕರ ಅಡಿಯಲ್ಲಿ ಕೆಲಸ ಮಾಡದ ವಿದೇಶಿಯರಿಗೆ ಅರ್ಧ ಮಿಲಿಯನ್ ರಿಯಾಲ್ (ಸುಮಾರು 10 ಲಕ್ಷ ರೂ.) ದಂಡ ಮತ್ತು ಆರು ತಿಂಗಳ ಜೈಲುವಾಸದ ನಂತರ ಗಡೀಪಾರು ಮಾಡಲಾಗುವುದು. ನಿವಾಸ ಪರವಾನಗಿಯಲ್ಲಿ (ಇಖಾಮ) ಪಟ್ಟಿ ಮಾಡಲಾದ ಪ್ರಾಯೋಜಕರ ಅಡಿಯಲ್ಲಿ ಕೆಲಸ ಮಾಡಬೇಕು. ತಪ್ಪಿತಸ್ಥರೆಂದು ಕಂಡುಬಂದಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಸೌದಿ ಪಾಸ್‌ಪೋರ್ಟ್ ನಿರ್ದೇಶನಾಲಯ (Jawazat) ಹೇಳಿದೆ.

ಹೀಗೆ ಕಾನೂನುಬದ್ಧ ಪ್ರಾಯೋಜಕರ ಅಡಿಯಲ್ಲಲ್ಲದೆ ಬೇರೆಯವರ ಅಧೀನದಲ್ಲಿ ಉದ್ಯೋಗ ಅಥವಾ ಸ್ವಯಂ ಉದ್ಯೋಗವನ್ನು ಕಂಡು ಹಿಡಿದು ಕೆಲಸ ಮಾಡುವ ವಿದೇಶಿಯರಿಗಾಗಿದೆ ಶಿಕ್ಷೆ. ಇಂತಹಾ ಕಾನೂನು ಬಾಹಿರ ಚಟುವಟಿಕೆ ಕುರಿತು ರಿಯಾದ್ ಮತ್ತು ಮಕ್ಕಾ ಪ್ರಾಂತ್ಯಗಳಲ್ಲಿರುವವರು 911 ಮತ್ತು ಇತರ ಪ್ರಾಂತ್ಯಗಳಲ್ಲಿ 999 ಕ್ಕೆ ಸಂಪರ್ಕಿಸಬೇಕೆಂದು ಜವಾಝಾತ್ ಒತ್ತಾಯಿಸಿದೆ.error: Content is protected !! Not allowed copy content from janadhvani.com