ಕುವೈತ್‌ನಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಕೆಲಸದ ಪರವಾನಗಿಯನ್ನು ನವೀಕರಿಸದಿರುವ ನಿರ್ಧಾರವು ಹೊಸಬರಿಗೆ ಮಾತ್ರ ಅನ್ವಯಿಸುವಂತೆ ಬೇಡಿಕೆ. ಕುವೈಟ್ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರಿ ಸರ್ಕಾರಕ್ಕೆ ಇಂತಹ ವಿನಂತಿಯನ್ನು ಮಾಡಿದೆ.
ಪ್ರಧಾನಿಗೆ ಬರೆದ ಪತ್ರದಲ್ಲಿ, ಚೇಂಬರ್ ಆಫ್ ಕಾಮರ್ಸ್ ಈ ನಿಬಂಧನೆಯು ದೇಶದಲ್ಲಿ ವರ್ಷಗಳ ಕಾಲ ಕೆಲಸ ಮಾಡುತ್ತಿರುವ ವಿದೇಶಿಯರಿಗೆ ಅನ್ವಯಿಸಬಾರದು ಎಂದು ವಿನಂತಿಸಿದೆ. ವಿವಿಧ ಕ್ಷೇತ್ರಗಳಲ್ಲಿ ವರ್ಷಗಳ ಅನುಭವ ಹೊಂದಿರುವ ವಲಸಿಗರ ಸೇವೆಗಳನ್ನು ಕೊನೆಗೊಳಿಸಬೇಕಾಗಿರುವುದು ಕಾರ್ಮಿಕ ಮಾರುಕಟ್ಟೆಗೆ ಭಾರೀ ನಷ್ಟವಾಗಲಿದೆ ಮತ್ತು ಕಾರ್ಮಿಕರ ಸೇವೆಯನ್ನು ಕಡೆಗಣಿಸಲಾಗದು ಎಂದು ಚೇಂಬರ್ ಗಮನಸೆಳೆದಿದೆ.
60 ವರ್ಷಕ್ಕಿಂತ ಮೇಲ್ಪಟ್ಟ ಪದವೀಧರರಲ್ಲದ ವಿದೇಶಿಯರ ರೆಸಿಡೆನ್ಸಿಯನ್ನು ನವೀಕರಿಸಲು ಭಾರೀ ಶುಲ್ಕ ಈಡು ಮಾಡುವ ಕ್ರಮದ ವಿರುದ್ಧ ಸಂಸತ್ತಿನ ಸದಸ್ಯರು ಕೂಡಾ ಮುಂದೆ ಬಂದಿದ್ದಾರೆ. ಸಂಸದರಾದ ಅದ್ನಾನ್ ಅಬ್ದುಲ್ ಸಮದ್ ಮತ್ತು ಡಾ.ಮತ್ತಾರ್ ಈ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಕಳೆದ ಜನವರಿಯಲ್ಲಿ, ಕೌಶಲ್ಯರಹಿತ ಕಾರ್ಮಿಕರನ್ನು ಕಡಿಮೆ ಮಾಡುವ ಮೂಲಕ ದೇಶದಲ್ಲಿ ಜನಸಂಖ್ಯಾ ಸಮತೋಲನ ಸಾಧಿಸುವ ಉದ್ದೇಶದಿಂದ ಮಾನವಶಕ್ತಿ ಪ್ರಾಧಿಕಾರವು ವಯಸ್ಸಿನ ಮಿತಿಯನ್ನು ಮುಂದಿಟ್ಟಿದೆ.