ದುಬೈ: ಶೈಖ್ ಮಕ್ತೂಮ್ ಬಿನ್ ಮಕ್ತೂಮ್ ಬಿನ್ ಮೊಹಮ್ಮದ್ ಬಿನ್ ರಾಶಿದ್ ಆಲ್ ಮಕ್ತೂಮ್ ಅವರನ್ನು ಯುಎಇಯ ಉಪ ಪ್ರಧಾನ ಮಂತ್ರಿಯಾಗಿ ಮತ್ತು ಹಣಕಾಸು ಸಚಿವರಾಗಿ ನೇಮಿಸಲಾಗಿದೆ. ಯುಎಇಯ ಉಪಾಧ್ಯಕ್ಷ, ಪ್ರಧಾನ ಮಂತ್ರಿ ಮತ್ತು ದುಬೈ ಆಡಳಿತಗಾರ ಶೈಖ್ ಮೊಹಮ್ಮದ್ ಬಿನ್ ರಾಶಿದ್ ಆಲ್ ಮಕ್ತೂಮ್ ಅವರು ಟ್ವಿಟ್ಟರ್ ನಲ್ಲಿ ಇದನ್ನು ಘೋಷಿಸಿದರು.
ಶೈಖ್ ಮೊಹಮ್ಮದ್ ಅವರು ಶನಿವಾರ ಹೊಸ ಯುಎಇ ಕ್ಯಾಬಿನೆಟ್ ರಚನೆಯನ್ನೂ ಘೋಷಿಸಿದರು. ಅವರು ಮುಂದಿನ 50 ವರ್ಷಗಳ ಫೆಡರಲ್ ಸರ್ಕಾರದ ಕಾರ್ಯನಿರ್ವಹಣೆಗೆ ಹೊಸ ವಿಧಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು. ಮುಹಮ್ಮದ್ ಬಿನ್ ಹಾದಿ ಅಲ್-ಹುಸೇನಿ ಅವರನ್ನು ಉಪ ಹಣಕಾಸು ಸಚಿವರನ್ನಾಗಿ ನೇಮಿಸಲಾಗಿದೆ. ಈ ಸ್ಥಾನವನ್ನು ಪ್ರಸ್ತುತ ಒಬೈದ್ ಅಲ್ ತಾಯರ್ ಹೊಂದಿದ್ದಾರೆ. ಅಬ್ದುಲ್ಲಾ ಬಿನ್ ಸುಲ್ತಾನ್ ಬಿನ್ ಆವದ್ ಅಲ್ ನುಐಮಿ ನ್ಯಾಯಾಂಗ ಸಚಿವರಾಗಿ ನೇಮಕಗೊಂಡಿದ್ದಾರೆ. ಡಾ. ಅಬ್ದುಲ್ ರೆಹಮಾನ್ ಅಲ್ ಅವಾರ್ ಹೊಸ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಮರಿಯಮ್ ಅಲ್-ಮಾಹಿರಿಯನ್ನು ಹವಾಮಾನ ವೈಪರೀತ್ಯ ಮತ್ತು ಪರಿಸರ ಸಚಿವರಾಗಿ ಮತ್ತು ಅಬ್ದುಲ್ಲಾ ಬಿನ್ ಮುಹೈರ್ ಅಲ್-ಕತ್ಬಿಯನ್ನು ಫೆಡರಲ್ ಸುಪ್ರೀಂ ಕೌನ್ಸಿಲ್ ವ್ಯವಹಾರಗಳ ಸಚಿವರನ್ನಾಗಿ ನೇಮಿಸಲಾಗಿದೆ.ಉಪ ಪ್ರಧಾನಿಯಾಗಿ ನೇಮಕಗೊಂಡ ಶೈಖ್ ಮಕ್ತೂಮ್ ಅವರನ್ನು ಸಹೋದರರಾದ ದುಬೈ ಕ್ರೌನ್ ಪ್ರಿನ್ಸ್ ಶೈಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಾಶಿದ್ ಆಲ್ ಮಕ್ತೂಮ್ ಟ್ವಿಟರ್‌ನಲ್ಲಿ ಅಭಿನಂದಿಸಿದರು.