janadhvani

Kannada Online News Paper

ಒಮಾನ್: ಟೋಪಿ, ಗಡ್ಡ ಹೊಂದಿರುವ ವ್ಯಕ್ತಿ ಭಯೋತ್ಪಾದಕ- ಇಂಡಿಯನ್ ಸ್ಕೂಲ್ ಪ್ರಶ್ನೆ ಪತ್ರಿಕೆ ವಿವಾದ

ಟೋಪಿ ಮತ್ತು ಗಡ್ಡ ಹೊಂದಿರುವ ವ್ಯಕ್ತಿಯನ್ನು ಭಯೋತ್ಪಾದಕನಂತೆ ಚಿತ್ರಿಸಿದ ಒಮಾನ್ ನ ಜೀಬ್ ಇಂಡಿಯನ್ ಸ್ಕೂಲ್ ನ ಪ್ರಶ್ನೆಪತ್ರಿಕೆ ವಿವಾದ. ಎರಡನೇ ತರಗತಿ ವಿದ್ಯಾರ್ಥಿಗಳ ಪರೀಕ್ಷೆಗಾಗಿ ಇವಿಎಸ್ ತರಗತಿ ಪರೀಕ್ಷೆಗಾಗಿ ನೀಡಲಾದ ಪ್ರಶ್ನೆ ಪತ್ರಿಕೆಯಲ್ಲಿನ 17 ನೇ ಪ್ರಶ್ನೆ ವಿವಾದಾಸ್ಪದವಾಗಿದೆ.

ಪ್ರಶ್ನೆ: ಈ ಕೆಳಗಿನವುಗಳಲ್ಲಿ ಯಾವುದು ಸಮುದಾಯ ಸಹಾಯಕರ ವರ್ಗಕ್ಕೆ ಸೇರುವುದಿಲ್ಲ? ನಾಲ್ಕು ಆಯ್ಕೆಗಳಲ್ಲಿ ಮೊದಲನೆಯದು ಭಯೋತ್ಪಾದಕನಾಗಿ ಕೈಯಲ್ಲಿ ಗನ್ ಹೊಂದಿರುವ ವ್ಯಕ್ತಿಯ ಚಿತ್ರ. ಚಿತ್ರವು ಟೋಪಿ, ಗಡ್ಡ ಮತ್ತು ಹಣೆಯಲ್ಲಿ ಶಾಷ್ಟಾಂಗದ ಗುರುತನ್ನೂ ತೋರಿಸುತ್ತದೆ.

ಪ್ರಶ್ನೆಪತ್ರಿಕೆಯಲ್ಲಿ ಇನ್ನೂ ಹಲವು ತಪ್ಪುಗಳನ್ನು ಮಾಡಲಾಗಿದೆ ಎಂಬ ದೂರುಗಳಿವೆ. ಡಾಕ್ಟರೇಟ್ ಪಡೆದ ಅಂಬೇಡ್ಕರ್ ಅವರನ್ನು ಕೇವಲ ಅಂಬೇಡ್ಕರ್ ಎಂದು ನೀಡಲಾಗಿದೆ. ಪ್ರಶ್ನೆ ಪತ್ರಿಕೆಯು ದ್ವೇಷದ ಚಿಂತನೆ ಮತ್ತು ತಪ್ಪು ಕಲ್ಪನೆಗಳನ್ನು ಮಕ್ಕಳಿಗೆ ನೀಡುತ್ತಿದೆ ಎಂದು ಪೋಷಕರು ದೂರಿದ್ದಾರೆ.ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟನೆಗಳು ವ್ಯಾಪಕವಾಗಿವೆ.

ಭಾರತೀಯರಲ್ಲದೆ, ಸ್ಥಳೀಯರು ಮತ್ತು ವಿದೇಶಿಯರು ಕೂಡ ಸಾಮಾಜಿಕ ಮಾಧ್ಯಮದಲ್ಲಿ ಪ್ರಶ್ನೆಗೆ ವಿರುದ್ಧವಾಗಿ ಪ್ರತಿಕ್ರಿಯಿಸಿದ್ದಾರೆ. ಶಾಲಾ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.error: Content is protected !! Not allowed copy content from janadhvani.com