janadhvani

Kannada Online News Paper

ಖಾಝಿ ಬೇಕಲ್ ಉಸ್ತಾದರ ವಾರ್ಷಿಕ ಅನುಸ್ಮರಣಾ ಮಜ್ಲಿಸ್ ಸೆ:14ರಂದು ಬಾರ್ಕೂರು ನಲ್ಲಿ

ಹಿರಿಯ ವಿದ್ವಾಂಸರೂ, ಕರ್ನಾಟಕ ಉಲಮಾ ಒಕ್ಕೂಟದ ರಾಜ್ಯಾಧ್ಯಕ್ಷರೂ ಉಡುಪಿ, ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲೆಗಳ ಸಂಯುಕ್ತ ಖಾಝಿಗಳೂ ಆಗಿದ್ದ, ತಾಜುಲ್ ಫುಖಹಾಅ ಖಾಝಿ ಪಿ.ಎಂ. ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಉಸ್ತಾದ್ ರವರ ಪ್ರಥಮ ವಾರ್ಷಿಕ ಅನುಸ್ಮರಣಾ ಮಜ್ಲಿಸ್ ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ಅಧೀನದಲ್ಲಿ ಸೆಪ್ಟೆಂಬರ್ 14 ಮಂಗಳವಾರ ಬೆಳಿಗ್ಗೆ ಗಂಟೆ 10 ರಿಂದ ಮಧ್ಯಾಹ್ನ 1.30ರ ತನಕ ಚರಿತ್ರೆ ಪ್ರಸಿದ್ದವಾದ ಮಾಲಿಕಿಬ್ನು ದೀನಾರ್ ಮಸ್ಜಿದ್ ಬಾರ್ಕೂರು ನಲ್ಲಿ ನಡೆಯಲಿದೆ.


ಖತಮುಲ್ ಕುರ್ ಆನ್, ತಹ್ಲೀಲ್ ಸಮರ್ಪಣೆ,ಅನುಸ್ಮರಣಾ ಭಾಷಣ, ಸಾಮೂಹಿಕ ದುಆ ಮಜ್ಲಿಸ್ ಮುಂತಾದ ಕಾರ್ಯಕ್ರಮಗಳು ನಡೆಯಲಿದೆ.


ಜಿಲ್ಲಾ ಸಂಯುಕ್ತ ಜಮಾಅತ್ ಖಾಝಿ ಝೈನುಲ್ ಉಲಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ರಾಜ್ಯ ಎಸ್ ವೈ ಎಸ್ ಕಾರ್ಯದರ್ಶಿ ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ತಂಙಳ್ ಕೋಟೇಶ್ವರ, ಅಸ್ಸಯ್ಯಿದ್ ಜುನೈದ್ ಅರ್ರಿಫಾಯೀ ತಂಙಳ್ ರಂಗಿನಕೆರೆ , ಡಿ ಕೆ ಎಸ್ ಸಿ ಕೇಂದ್ರ ಸಮಿತಿಯ ಕಾರ್ಯಾಧ್ಯಕ್ಷರಾದ ಅಸ್ಸಯ್ಯಿದ್ ಮುಹಮ್ಮದ್ ತಂಙಳ್ ಜಿದ್ದಾ ಮುಂತಾದ ಉಲಮಾ,ಉಮರಾ ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿರುವರು.


ಸಂಯುಕ್ತ ಜಮಾಅತ್ ಅಧ್ಯಕ್ಷರಾದ ಹಾಜಿ ಪಿ ಅಬೂಬಕ್ಕರ್ ನೇಜಾರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಂಯುಕ್ತ ಜಮಾಅತ್ ಸಂಘಟನಾ ಕಾರ್ಯದರ್ಶಿ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com