ಕುವೈತ್ ಸಿಟಿ: ಕುವೈಟ್ ನಲ್ಲಿ ಪರವಾನಗಿ ಇಲ್ಲದೆ ಚಾಲನೆ ಮಾಡುವ ವಿದೇಶಿಯರನ್ನು ಗಡೀಪಾರು ಮಾಡಲಾಗುವುದು. ಅದೇರೀತಿ, ವಾಹನವನ್ನು ನಕಲಿ ಟ್ಯಾಕ್ಸಿಯನ್ನಾಗಿ ಮಾಡಿ ಯಾತ್ರಿಕರನ್ನು ಹತ್ತಿಸಿದರೂ ಚಾಲಕನನ್ನು ಗಡೀಪಾರು ಮಾಡಲಾಗುವುದು ಎಂದು ಸಾರಿಗೆ ವಿಭಾಗದ ಅಂಡರ್ ಸೆಕ್ರೆಟರಿ ಮೇಜರ್ ಜನರಲ್ ಫಹದ್ ಅಲ್ ಶುವಹ್ಹ ಬಹಿರಂಗಪಡಿಸಿದ್ದಾರೆ.
ವಿದೇಶೀಯರನ್ನು ಅನ್ಯಾಯವಾಗಿ ಗಡೀಪಾರು ಮಾಡಲಾಗುತ್ತಿದೆ ಎನ್ನುವ ತಪ್ಪು ಸುದ್ದಿ ಹರಡಿರುವ ಕಾರಣ ಸಾರಿಗೆ ಇಲಾಖೆಯು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.
ಚಾಲನಾ ಪರವಾನಗಿ ಪಡೆದ ಅನೇಕರು ಸಂಚಾರೀ ನಿಯಮ ಅಥವಾ ಸಾರಿಗೆ ಸಂಸ್ಕೃತಿಯ ಬಗ್ಗೆ ಸ್ಪಷ್ಟವಾದ ತಿಳುವಳಿಕೆಯನ್ನು ಹೊಂದಿಲ್ಲ ಎಂದು ಅವರು ತಿಳಿಸಿದರು.
ಅದೇ ವೇಳೆ, ಟ್ರಾಫಿಕ್ ಇಲಾಖೆಯು ಚಾಲಕರಿಗೆ ಮಾಹಿತಿ ನೀಡುವ ಸಲುವಾಗಿ ಹಲವಾರು ಕಾರ್ಯಾಗಾರಗಳನ್ನು ಆಯೋಜಿಸುತ್ತಿದೆ, ಎಂದು ಅಂಡರ್ ಸೆಕ್ರೆಟರಿ ಹೇಳಿದರು. ದೇಶದಾದ್ಯಂತ ಕಂಡು ಬರುತ್ತಿರುವ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಸಲುವಾಗಿ ಹಲವಾರು ನಿಯಂತ್ರಣಗಳನ್ನು ಏರ್ಪಡಿಸಲಾಗಿದೆ.
ಚಾಲನಾ ಪರವಾನಗಿಗಳನ್ನು ಪಡೆಯಲು ವಿದೇಶಿಗಳಿಗೆ ಕಟ್ಟುನಿಟ್ಟಾದ ನಿಬಂಧನೆಗಳನ್ನು ಏರ್ಪಡಿಸಲಾಗಿದೆ.
ಸಂಬಳದ ಮಿತಿ, ವಿಶ್ವವಿದ್ಯಾಲಯದ ಪದವಿಗಳು, ವಾಸ ಕಾಲಾವಧಿ ಮುಂತಾದ ನಿಬಂಧನೆಗಳು ಪ್ರಸ್ತುತ ಜಾರಿಯಲ್ಲಿದೆ.