janadhvani

Kannada Online News Paper

SYS ಉಳ್ಳಾಲ ಸೆಂಟರ್ ಟೀಂ ಇಸಾಬಃ: ವೈದ್ಯರ ದಿನದ ಪ್ರಯುಕ್ತ ಅಭಿನಂದನಾ ಕಾರ್ಯಕ್ರಮ

ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮತ್ತು ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಎಸ್ ವೈ ಎಸ್ ಟೀಂ ಇಸಾಬಃ ಉಳ್ಳಾಲ ಇದರ ವತಿಯಿಂದ ಜುಲೈ 01 ರಾಷ್ಟ್ರೀಯ ವೈದ್ಯರ ದಿನದ ಪ್ರಯುಕ್ತ ಉಳ್ಳಾಲ ವ್ಯಾಪ್ತಿಯಲ್ಲಿ ಬರುವ ಹತ್ತು ವೈದ್ಯರುಗಳ ಸೇವೆಯನ್ನು ಗುರುತಿಸಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ತಮ್ಮ ರೋಗಿಗಳ ಆರೋಗ್ಯವನ್ನು ಪುನಃ ಸ್ಥಾಪಿಸಲು ಮತ್ತು ಕಳೆದು ಹೋದ ನಗು ಮುಖವನ್ನು ಮರಳಿ ತರಲು ಅಪಾರವಾಗಿ ಶ್ರಮ ವಹಿಸಿದ, ಪ್ರತ್ಯೇಕವಾಗಿ ಕೋವಿಡ್ 19 ಸಾಂಕ್ರಾಮಿಕ ರೋಗದ ದ್ವಿತೀಯ ಅಲೆಯ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ರೋಗಿಗಳಿಗೆ ಚಿಕಿತ್ಸೆ ನೀಡಿದ ಹಲವು ವೈದ್ಯರುಗಳು ಉಳ್ಳಾಲ ವ್ಯಾಪ್ತಿಯಲ್ಲಿ ಇದ್ದಾರೆ. ಇವರುಗಳಲ್ಲಿ ಪ್ರತ್ಯೇಕವಾಗಿ ಹತ್ತು ವೈದ್ಯರುಗಳನ್ನು ವಿಶೇಷವಾಗಿ ಪರಿಗಣಿಸಿ ಸ್ಮರಣಿಕೆಯನ್ನು ನೀಡಿ ಅಭಿನಂದಿಸಲಾಯಿತು.

ಜನತೆಯ ಆರೋಗ್ಯ ರಕ್ಷಣೆಗೆ ಸ್ವಯಂ ಮರೆತು ಹಗಲಿರುಳು ದುಡಿದ ಉಳ್ಳಾಲ ಸರಕಾರಿ ಆಸ್ಪತ್ರೆಯ ವೈದ್ಯರುಗಳಾದ ಡಾ ಪ್ರಶಾಂತ್ ಅಮೀನ್, ಡಾ ಎಂ. ವಿದ್ಯಾಸಾಗರ್, ಡಾ ಸಾರಾ ನೌಶಾದ್, ಖಾಸಗಿ ಕ್ಲಿನಿಕ್ ವೈದ್ಯರುಗಳಾದ ಡಾ ಸುಜಯಾ ಪ್ರಭಾಕರ್ ನೇತಾಜಿ ಎಲ್ಲಪ್ಪ ಮೆಮೋರಿಯಲ್ ಆಸ್ಪತ್ರೆ ತೊಕ್ಕೋಟು, ಡಾ. ಸದಾಶಿವ ಪೊಲ್ನಾಯ ಎಸ್.ಕೆ ಕ್ಲಿನಿಕ್ ಉಳ್ಳಾಲ, ಡಾ ಸುರೇಶ್ ನಾಯ್ಕ್ ಉಳ್ಳಾಲ ಕ್ಲಿನಿಕ್ ಪೇಟೆ, ಡಾ ರವಿವರ್ಮ ಆಳ್ವಾ ಕ್ಲಿನಿಕ್ ಪೇಟೆ ಉಳ್ಳಾಲ, ಡಾ ಸತೀಶ್ ಕೆ ಎಲ್ ಸ್ವಾತಿ ಕ್ಲಿನಿಕ್ ಮುಕ್ಕಚ್ಚೇರಿ. ಡಾ ಆರ್.ಕೆ ಶೆಟ್ಟಿ ರಕ್ಷಾ ಕ್ಲಿನಿಕ್ ತೊಕ್ಕೋಟು, ಡಾ ಎಂ.ಆರ್ ಭಟ್ ಉದಯ ಕ್ಲಿನಿಕ್ ತೊಕ್ಕೋಟು ಇವರುಗಳನ್ನು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮತ್ತು ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಟೀಂ ಇಸಾಬಃ ಉಳ್ಳಾಲ ವತಿಯಿಂದ ಶುಭಾಶಯ ತಿಳಿಸಿ ಸ್ಮರಣಿಕೆ ನೀಡಿ ಅಭಿನಂದಿಸಿ ಗೌರವಿಸಲಾಯಿತು

ಪ್ರಸ್ತುತ ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ, ಪ್ರಧಾನ ಕಾರ್ಯದರ್ಶಿ ಇಸಾಕ್ ಪೇಟೆ, ಎಸ್ಸೆಸ್ಸೆಫ್ ದ.ಕ ಜಿಲ್ಲಾ ನಾಯಕರಾದ ಸಯ್ಯಿದ್ ಖುಬೈಬ್ ತಂಗಲ್, ಟೀಂ ಇಸಾಬಃ ಅಮೀರ್ ಮುಹಮ್ಮದ್ ಕೈಕೋ, ಸೆಂಟರ್ ಸಂಘಟನಾ ಕಾರ್ಯದರ್ಶಿ ಮನ್ಸೂರ್ ಹಳೆಕೋಟೆ, ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ, ಸೆಂಟರ್ ಕಾರ್ಯಕಾರಿ ಸಮಿತಿ ಸದಸ್ಯರಾದ ಅಬ್ದುರ್ರಹ್ಮಾನ್ ಅಕ್ಕರೆಕೆರೆ ಉಪಸ್ಥಿತರಿದ್ದರು

error: Content is protected !! Not allowed copy content from janadhvani.com