ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾ ಸಮಿತಿಯ ಅಧೀನದ ಸಹಾಯ್ ತಂಡದಿಂದ ಎಸ್ ವೈ ಎಸ್, ಎಸ್ಸೆಸ್ಸೆಫ್ ನ ಸಹಕಾರದೊಂದಿಗೆ
ಕೋವಿಡ್-19 ಹಾಗೂ ಇನ್ನಿತರ ಸೇವೆಗಳಿಗಲ್ಲಿ ಸಕ್ರಿಯವಾಗಿ ಕಾರ್ಯಾಚರಣೆ ಮಾಡಿದ ಆರ್ಥಿಕವಾಗಿ ತೀರಾ ಹಿಂದುಳಿದ 125 ರಷ್ಟು ನಮ್ಮ ಕಾರ್ಯಕರ್ತರಿಗೆ ಮೂರು ಲಕ್ಷದಷ್ಟು ಆರ್ಥಿಕ ಸಹಾಯವನ್ನು ದಾನಿಗಳ ಸಹಕಾರದಿಂದ ನೀಡಲಾಯಿತು.
ಕರ್ನಾಟಕ ಮುಸ್ಲಿಂ ಜಮಾಅತ್ ಉಡುಪಿ ಜಿಲ್ಲಾಧ್ಯಕ್ಷ ಜನಾಬ್ ಬಿ ಎಸ್ ಎಫ್ ರಫೀಕ್ ಗಂಗೊಳ್ಳಿ ಹಾಗೂ ಪ್ರಧಾನ ಕಾರ್ಯದರ್ಶಿ ವೈ ಬಿ ಸಿ ಬಶೀರ್ ಅಲಿ ಮೂಳೂರು ರವರ ನೇತೃತ್ವದಲ್ಲಿ ಜಿಲ್ಲೆಗೊಳಪಟ್ಟ ಕಾಪು, ಕಾರ್ಕಳ, ಉಡುಪಿ, ಬ್ರಹ್ಮಾವರ, ಕುಂದಾಪುರ, ಬೈಂದೂರು ಹಾಗೂ ಹೆಬ್ರಿ ಈ ಏಳು ತಾಲೂಕುಗಳಲ್ಲಿ ಅರ್ಹ ಕಾರ್ಯಕರ್ತರಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಈ ಒಂದು ಪ್ರೋತ್ಸಾಹ ನಿಧಿಗೆ ಸುನ್ನೀ ಸಂಘ ಕುಟುಂಬಗಳ ಸ್ವದೇಶ ಮತ್ತು ವಿದೇಶದಲ್ಲಿರುವ ಹಾಲಿ ಹಾಗೂ ಮಾಜಿ ನಾಯಕರುಗಳ, ಕಾರ್ಯಕರ್ತರ ಹಾಗೂ ಇನ್ನಿತರ ದಾನಿಗಳ ಸಹಕಾರವು ಅಭಿನಂದನಾರ್ಹ
ತಾಲೂಕುಗಳ ಸಂದರ್ಶನದಲ್ಲಿ ಮುಸ್ಲಿಂ ಜಮಾಅತ್ ಜಿಲ್ಲಾ ಕಾರ್ಯಾಧ್ಯಕ್ಷ ಸುಬ್ಹಾನ್ ಅಹ್ಮದ್ ಹೊನ್ನಾಳ, ಉಪಾಧ್ಯಕ್ಷರಾದ ಶೇಖ್ ಮುಹಮ್ಮದ್ ನಯೀಮ್ ಕಟಪಾಡಿ, ಮುಹಮ್ಮದ್ ಗೌಸ್ ಕಾರ್ಕಳ, ಸಂಘಟನಾ ಕಾರ್ಯದರ್ಶಿ ಅಡ್ವಕೆಟ್ ಇಲ್ಯಾಸ್ ನಾವುಂದ, ಕಾರ್ಯದರ್ಶಿಗಳಾದ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ, ಇಂಜಿನಿಯರ್ ನಾಸಿರ್ ಶೇಖ್ ಬೈಲೂರು, ಕೆ ಎಸ್ ಎಮ್ ಮನ್ಸೂರ್ ಉಡುಪಿ,ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಶಬೀರ್ ಸಖಾಫಿ ಉಚ್ಚಿಲ, ರಾಜ್ಯ ಕಾರ್ಯದರ್ಶಿ ಎನ್ ಸಿ ರಹೀಂ ಕಾರ್ಕಳ, ನಾಯಕರಾದ, ಅಬ್ದುಲ್ಲತೀಫ್ ಫಾಳಿಲಿ ನಾವುಂದ,ಕೊಂಬಾಳಿ ಝುಹ್ರಿ , ಜೆ ಮುಸ್ತಾಖ್ ಹೊನ್ನಾಳ, ಮನ್ಸೂರ್ ಮರವಂತೆ, ಸುಲೈಮಾನ್ ಬಜಗೋಳಿ,ಮುಹಿಯುದ್ದೀನ್ ನಿಟ್ಟೆ, ಇಕ್ಬಾಲ್ ಪಕೀರ್ಣಕಟ್ಟೆ, ಬಶೀರ್ ಮುಸ್ಲಿಯಾರ್ ಮಜೂರು, ಅಲ್ತಾಫ್ ಮಟಪಾಡಿ, ಅಕ್ಬರ್ ಅಲಿ ಬ್ರಹ್ಮಾವರ, ಇಮಾಂ ಸಾಹೇಬ್ ತೆಂಕಸಾಲಿ ಹೊನ್ನಾಳ, ಮುಸ್ತಫಾ ಬಂಗ್ಲಗುಡ್ಡೆ ಹಾಗೂ ಮತ್ತಿತರ ನಾಯಕರು ಜೊತೆಗಿದ್ದರು.