janadhvani

Kannada Online News Paper

ಎಸ್ಸೆಸ್ಸೆಫ್ ಕ್ಯಾಂಪಸ್ ವಿಭಾಗದ ವತಿಯಿಂದ ಮಾದಕ ವಿರುದ್ಧ ಅಭಿಯಾನ

ಬೆಂಗಳೂರು,ಜೂ.25: ಮಾದಕ ವಿರುದ್ಧ ದಿನದ ಅಂಗವಾಗಿ ವಿದ್ಯಾರ್ಥಿ-ಯುವ ಸಮೂಹದ ಭವಿಷ್ಯಕ್ಕೆ ಮಾರಕವಾಗಿರುವ, ಕೌಟುಂಬಿಕ ಕಲಹಗಳಿಗೂ ವಿಘಟನೆಗೂ ಕಾರಣವಾಗಿರುವ ಮದ್ಯ-ಮಾದಕದ ವಿರುದ್ಧ ಎಸ್ಸೆಸ್ಸೆಫ್ ರಾಜ್ಯದಾದ್ಯಂತ ಜಾಗೃತಿ ಅಭಿಯಾನವನ್ನು ಕೈಗೊಂಡಿದೆ.

ಕೊರೋನಾ ಕಾಲದಲ್ಲಿ ನೇರವಾಗಿ ಕಾರ್ಯಕ್ರಮಗಳನ್ನು ನಡೆಸಲು ಸಾಧ್ಯವಾಗದಿದ್ದರೂ ಯುವ ಪೀಳಿಗೆ ನೆಚ್ಚಿನ ಸಾಮಾಜಿಕ ಜಾಲ ತಾಣಗಳಲ್ಲಿ ಉಪನ್ಯಾಸ, ಲೇಖನ, ವಿವಿಧ ಸ್ಪರ್ಧೆಗಳ ಮುಖಾಂತರ ಜಾಗೃತಿ ಮೂಡಿಸುವುದುರೊಂದಿಗೆ ಮದ್ಯ ಮಾದಕ ವಸ್ತುಗಳ ವಿರುದ್ಧ ನಿಲುವನ್ನು ಕೈಗೊಳ್ಳಲು ಸರ್ಕಾರವನ್ನು ಆಗ್ರಹಿಸುತ್ತಿದೆ.

ಅದಕ್ಕೆ ಪೂರಕವಾದ ಯೋಜನೆಗಳನ್ನು ರಾಜ್ಯ ಕ್ಯಾಂಪಸ್ ವಿಭಾಗವು ಈಗಾಗಲೇ ಸುತ್ತೋಲೆ ಕಳುಹಿಸಲಾಗಿ ರಾಜ್ಯದಾದ್ಯಂತ ಎಲ್ಲ ಘಟಕಗಳೂ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಸಕ್ರಿಯವಾಗಿ ಅಭಿಯಾನದಲ್ಲಿ ನಿರತವಾಗಿದೆ. ಈ ಅಭಿಯಾನವನ್ನು ಸರ್ವರೂ ಬೆಂಬಲಿಸಿ ಸ್ವಸ್ಥ ಸಮಾಜದ ನಿರ್ಮಾಣಕ್ಕೆ ಕೈ ಜೋಡಿಸಬೇಕೆಂದು ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಕ್ಯಾಂಪಸ್ ಕಾರ್ಯದರ್ಶಿ ಶರೀಫ್ ಹೊಸತೋಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

error: Content is protected !! Not allowed copy content from janadhvani.com