ಹಸಿರು ಪ್ರಕೃತಿಯು ಮಾನವನ ಕಣ್ಮನ ತಣಿಸುವುದರ ಜೊತೆಗೆ ಜೀವವಾಯು ಒದಗಿಸುತ್ತದೆ. ಆಧುನಿಕ ನಗರೀಕೃತ ಜೀವನಶೈಲಿಯ ನಡುವೆ ನಾವು ಪರಿಸರದ ಮಹತ್ವವನ್ನು ಮರೆಯಬಾರದು. ಕೃತಕ ಹಸಿರು-ಪ್ರಕೃತಿಗಳ ಕಡೆಗೆ ಆಕರ್ಷಿತಗೊಂಡಿದ್ದ ತಲೆಮಾರೊಂದು ಕಳೆದು ಹೋಯಿತು. ಮಾನವ ಪರಿಸರದ ಪ್ರಾಮುಖ್ಯತೆಯನ್ನು ಮತ್ತೆ ನಿಧಾನಕ್ಕೆ ಅರ್ಥಮಾಡಲಾರಂಭಿಸಿದ್ದಾನೆ.
ಪ್ರಕೃತಿ-ಪರಿಸರ-ಮರಗಿಡಗಳು ಉಳಿಯಬೇಕಾದ ಅನಿವಾರ್ಯತೆ ಕುರಿತು ಅರಿವು ಮೂಡಿಸಲು ವಿಶ್ವಪರಿಸರ ದಿನವು ಪ್ರೇರಕವಾಗಿದೆ. ಆ ನಿಟ್ಟಿನಲ್ಲಿ ವಿಶ್ವಪರಿಸರ ದಿನದಂದು ಕನಿಷ್ಠ ಒಂದು ಗಿಡವನ್ನಾದರೂ ನೆಡುವ ಮೂಲಕ ಉಸಿರಿಗಾಗಿ ಹಸಿರು ಎಂಬ ನಮ್ಮ ಈ ವರ್ಷದ ಘೋಷವಾಕ್ಯವನ್ನು ಸಾಕ್ಷಾತ್ಕಾರಗೊಳಿಸೋಣ.
ಜೂನ್ 5 ವಿಶ್ವ ಪರಿಸರ ದಿನದ ಪ್ರಯುಕ್ತ SSF ನ ಸಾವಿರಾರು ಯುನಿಟ್ ಗಳ ಲಕ್ಷಾಂತರ ಕಾರ್ಯಕರ್ತರು,ಮನೆಯಂಗಳದಲ್ಲಿ ಒಂದೊಂದು ಗಿಡವನ್ನು ನೆಡಲಿರುವರು.ರೈಂಬೋ ವಿದ್ಯಾರ್ಥಿಗಳು ಮನೆಯಂಗಳದಲ್ಲಿ ಕೈ ತೋಟವನ್ನು ಮಾಡಲಿರುವರು.
ಅಬ್ದುಲ್ಲತೀಫ್ ಸಅದಿ ಶಿವಮೊಗ್ಗ
( ರಾಜ್ಯಾಧ್ಯಕ್ಷರು,SSF Karnataka)
ಇಸ್ಮಾಯಿಲ್ ಮಾಸ್ಟರ್ ಮರಿಕ್ಕಳ
(ಪ್ರಧಾನ ಕಾರ್ಯದರ್ಶಿ,SSF Karnataka)
ಹಾಫಿಳ್ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ
(ಕೋಶಾಧಿಕಾರಿ,SSF karnataka)







