janadhvani

Kannada Online News Paper

ಕುಕ್ಕುಂದೂರು: ಏ.7,8 ರ ಕಾರ್ಯಕ್ರಮ ಯಶಸ್ವಿಗೆ ಎಸ್ಸೆಸ್ಸೆಫ್ ಕಾರ್ಕಳ ಡಿವಿಷನ್ ಕರೆ

ಕಾರ್ಕಳ ಡಿವಿಷನ್, ನಾರ್ತ್ ಸೆಕ್ಟರ್ ವ್ಯಾಪ್ತಿಯ ಕುಕ್ಕುಂದೂರು ಶಾಖೆ SYS, SSF,SBS ಮಹ್ಳರತುಲ್ ಬದ್ರಿಯಾ ಹಾಗೂ ಗ್ರಾಂಡ್ ಬುರ್ದಾ ಮಜ್ಲಿಸ್ ಮತ್ತು ಮತ ಪ್ರಭಾಷಣ ಬುಧವಾರ, ಗುರುವಾರ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಅಸ್ಸಯ್ಯಿದ್ ಮುಹ್ಸಿನ್ ಅಲವಿ ಅಲ್ ಬುಖಾರಿ ತಂಙಳ್, ಅಸ್ಸಯ್ಯಿದ್ ತ್ವಾಹ ತಂಙಳ್, ನೌಫಲ್ ಸಖಾಫಿ ಕಳಸ, ಶಾಹಿನ್ ಬಾಬು,ಶಮ್ಮಾಸ್ ಕಾಂತಪುರಂ ಇನ್ನಿತರ ಉಲಮಾ ಉಮಾರಾ, ಶೈಕ್ಷಣಿಕ, ಸಾಮಾಜಿಕ, ಸಂಘ ಸಂಸ್ಥೆ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಈ ಮಹತ್ತರವಾದ ಪುಣ್ಯ ಮಜ್ಲಿಸ್ ಪ್ರಚಾರಪಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಹಕರಿಸಿ ಯಶಸ್ವಿಗೊಳಿಸಲು ಎಸ್ಸೆಸ್ಸೆಫ್ ಕಾರ್ಕಳ ಡಿವಿಷನ್ ಅಧ್ಯಕ್ಷ ಇಬ್ರಾಹಿಂ ಮದನಿ ಅಲ್-ಹುಮೈದಿ ಕುಕ್ಕುಂದೂರು, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾರಿಸ್ ಮಾಸ್ಟರ್ ಹೊಸ್ಮಾರ್, ಕೋಶಾಧಿಕಾರಿ ನವಾಝ್ ಬದ್ರಿಯಾ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತದೆ ಎಂದು ಡಿವಿಷನ್ ಮೀಡಿಯಾ ಸೆಲ್ ತಿಳಿಸಿದೆ.

error: Content is protected !! Not allowed copy content from janadhvani.com