ದೋಹಾ: ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚಾಗುತ್ತಿದ್ದಂತೆ, ಕತಾರ್‌ನಲ್ಲಿ ನಿರ್ಬಂಧಗಳನ್ನು ಪುನಃ ಸ್ಥಾಪಿಸಲಾಗುತ್ತಿದೆ. ಮಾರ್ಚ್ 26 ರ ಶುಕ್ರವಾರದಿಂದ ಹೆಚ್ಚಿನ ನಿರ್ಬಂಧಗಳು ಜಾರಿಗೆ ಬರಲಿವೆ. ಅದಕ್ಕೆ ತಕ್ಕಂತೆ ಹೊಸ ಆದೇಶಗಳನ್ನು ಕೆಳಗೆ ನಮೂದಿಸಲಾಗಿದೆ.
- ಕೇವಲ ಶೇಕಡಾ 80 ಉದ್ಯೋಗಿಗಳಿಗೆ ಮಾತ್ರ ಸರ್ಕಾರಿ ಮತ್ತು ಖಾಸಗಿ ವಲಯದ ಕಚೇರಿಗಳಲ್ಲಿ ಹಾಜರಾಗಬೇಕು.ಮತ್ತು ಉಳಿದ 20% ಜನರು ಮನೆಯಿಂದಲೇ ಕೆಲಸ ಮಾಡಬೇಕು.
- ಐದಕ್ಕಿಂತ ಹೆಚ್ಚು ಜನರು ಕಚೇರಿಯ ಸಭೆಗಳಿಗೆ ಹಾಜರಾಗಬಾರದು.
- ವಿವಾಹ ಸಮಾರಂಭಗಳನ್ನು ಅನುಮತಿಸಲಾಗುವುದಿಲ್ಲ.
- ಸಾರ್ವಜನಿಕ ಉದ್ಯಾನವನಗಳು, ಕಡಲತೀರಗಳು ಮತ್ತು ಕಾರ್ನೀಶ್ ಗಳಲ್ಲಿನ ಆಟದ ಮೈದಾನಗಳನ್ನು ಮುಚ್ಚಲಾಗುವುದು.
- ಚಾಲನಾ ಶಾಲೆಗಳನ್ನು ಮುಚ್ಚಲಾಗುವುದು.
- ಚಿತ್ರಮಂದಿರಗಳಲ್ಲಿ ಶೇ.20 ಮಂದಿಗೆ ಮಾತ್ರ ಪ್ರವೇಶವಿದೆ, ಮತ್ತು 18 ವರ್ಷಕ್ಕಿಂತ ಕೆಳಗಿನವರಿಗೆ ಪ್ರವೇಶವಿಲ್ಲ.
- ಖಾಸಗಿ ಶಿಕ್ಷಣ ಕೇಂದ್ರಗಳು ಮತ್ತು ತರಬೇತಿ ಕೇಂದ್ರಗಳಲ್ಲಿ ಆನ್‌ಲೈನ್ ಕಲಿಕೆ ಮಾತ್ರ.
- ಸಾರ್ವಜನಿಕ ವಸ್ತು ಸಂಗ್ರಹಾಲಯಗಳು ಮತ್ತು ಗ್ರಂಥಾಲಯಗಳ ಸಾಮರ್ಥ್ಯವು ಶೇಕಡಾ 30 ಮೀರಬಾರದು.
- ಸಚಿವಾಲಯದ ಅನುಮತಿಯಿಲ್ಲದೆ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬಾರದು.
- 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಶಾಪಿಂಗ್ ಸಂಕೀರ್ಣಗಳಿಗೆ ಪ್ರವೇಶವಿಲ್ಲ.
- ಶಾಪಿಂಗ್ ಸಂಕೀರ್ಣಗಳ ಕಾರ್ಯಾಚರಣೆಯು ಕೇವಲ ಮೂವತ್ತು ಶೇಕಡಾ ಸಾಮರ್ಥ್ಯವನ್ನು ಹೊಂದಿದೆ.
- ಶಾಪಿಂಗ್ ಸಂಕೀರ್ಣಗಳಲ್ಲಿನ ಪ್ರಾರ್ಥನಾ ಕೊಠಡಿಗಳನ್ನು ಮುಚ್ಚಬೇಕು.
- ಫುಡ್ ಕೋರ್ಟ್ ಗಳಲ್ಲಿ ಹೋಂ ಡೆಲಿವರಿ ಮಾತ್ರ.
- ಒಳಾಂಗಣದ ರೆಸ್ಟೋರೆಂಟ್‌ಗಳು ಮತ್ತು ಕೆಫೆಟೇರಿಯಾಗಳ ಕಾರ್ಯಾಚರಣಾ ಸಾಮರ್ಥ್ಯವು 15% ಮೀರಬಾರದು.
- ಕ್ಲೀನ್ ಕತಾರ್ ಯೋಜನೆಯಡಿಯ ಹೋಟೆಲ್‌ಗಳು ಮತ್ತು ಕೆಫೆಟೇರಿಯಾಗಳು ಶೇಕಡಾ 50 ರಷ್ಟು ಸಾಮರ್ಥ್ಯದಲ್ಲಿ ಮತ್ತು ಉಳಿದವು ಶೇಕಡಾ 30 ರಷ್ಟು ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಬಲ್ಲವು.
- ಕೇವಲ 30% ಜನರಿಗೆ ಮಾತ್ರ ಸಾರ್ವಜನಿಕ ಮಾರುಕಟ್ಟೆಗಳಿಗೆ ಪ್ರವೇಶವಿದೆ ಮತ್ತು 12 ವರ್ಷದೊಳಗಿನ ಮಕ್ಕಳಿಗೆ ಪ್ರವೇಶವಿಲ್ಲ.
- ಮನೋರಂಜನಾ ಉದ್ಯಾನವನಗಳನ್ನು ಮುಚ್ಚಲಾಗುವುದು.
- ಜಿಮ್ನಾಷಿಯಂಗಳು ಮತ್ತು ಮಸಾಜ್ ಪಾರ್ಲರ್‌ಗಳನ್ನು ಮುಚ್ಚಬೇಕು.
- ಈಜುಕೊಳಗಳು ಮತ್ತು ವಾಟರ್ ಪಾರ್ಕ್‌ಗಳನ್ನು ಸಹ ಅನುಮತಿಸಲಾಗುವುದಿಲ್ಲ.
- ಖಾಸಗಿ ಆಸ್ಪತ್ರೆಗಳು ಕೇವಲ 70 ಪ್ರತಿಶತದಷ್ಟು ಮಾತ್ರ ಕಾರ್ಯನಿರ್ವಹಿಸಲಿದೆ.
















ಇನ್ನಷ್ಟು ಸುದ್ದಿಗಳು
ಡಿಕೆಯಸ್ಸಿ ಯು.ಎ.ಇ ರಾಷ್ಟ್ರೀಯ ಸಮಿತಿ- ಹಜ್ ಯಾತ್ರಿಗಳಿಗೆ ಆತ್ಮೀಯ ಬಿಳ್ಕೊಡುಗೆ
ಜಿಸಿಸಿ: ಮಾದಕ ಜಾಲದ ವಿರುದ್ಧ ಮತ್ತಷ್ಟು ಕಠಿಣ ನಿಯಮ- ಮರಣದಂಡನೆ ಶಿಕ್ಷೆ
ಮಕ್ಕಾದಲ್ಲಿ ಹಜ್ ನಿಯಮ ಉಲ್ಲಂಘನೆ: ನೂರಾರು ವಿದೇಶಿಯರ ಬಂಧನ
ಮಾದರಿ ಮದುವೆ ಅಭಿಯಾನದ ಸಮಾರೋಪ ಪ್ರಚಾರ; ಎ.28, 29 ರಂದು ವಾಹನ ಸಂದೇಶ ಜಾಥಾ
ಯುಎಇ: ವೈಯಕ್ತಿಕ ವಾಟ್ಸಾಪ್ ಚಾಟ್ ಮತ್ತು ಫಾರ್ವರ್ಡ್ಗಳಿಗೂ ಸೈಬರ್ ಕಾನೂನು ಅನ್ವಯ
ಮುಂಬೈಯನ್ನು ನಡುಗಿಸಿದ ಘಟನೆ: ಬಿರಿಯಾನಿ ಮತ್ತು ಕಲ್ಲಂಗಡಿ ತಿಂದ ಕುಟುಂಬ ಬೆಳಗಾಗುವಷ್ಟರಲ್ಲಿ ಅಂತ್ಯ
‘ಮಾದರಿ ಮದುವೆ ಅಭಿಯಾನ’ ಸಮಾರೋಪ ಸಮಾರಂಭ – ಎಸ್ವೈಎಸ್ ಬಂಟ್ವಾಳ ಝೋನ್ ಯಶಸ್ವಿಗೆ ಕರೆ
ಮಂಗಳೂರು ಪೊಲೀಸ್ ಕಮಿಷನರ್: ವರ್ಗಾವಣೆ ವಿಚಾರ ಕೈಬಿಡುವಂತೆ ಮನವಿ- ಡಿಜಿಪಿಗೆ ಇಕ್ಬಾಲ್ ಬಾಳಿಲ ಪತ್ರ
ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ‘ಜನಿವಾರ’ ತೆಗೆಸಿದ ಘಟನೆ: ಸಚಿವ ದಿನೇಶ್ ಗುಂಡೂರಾವ್ ತೀವ್ರ ಖಂಡನೆ
ಸೌದಿ: ಪಾರ್ಕ್ನಲ್ಲಿ ಆಟವಾಡುತ್ತಿದ್ದಾಗ ವಿದ್ಯುತ್ ಶಾಕ್- ಆರು ವರ್ಷದ ಬಾಲಕ ಮೃತ್ಯು