ಅಲ್ ಮದದ್ ಸುನ್ನಿ ಝುಮಲಾ ಗ್ರೂಪ್ ವತಿಯಿಂದ ಮೂರನೇ ವಾರ್ಷಿಕ ಬೃಹತ್ ಜಲಾಲಿಯ್ಯ ರಾತೀಬ್ ಹಾಗೂ ಅಜ್ಮೀರ್ ಅಂಡ್ ನೇರ್ಚೆಯು ಇದೇ ಬರುವ 26 ನೇ ತಾರೀಖು ಶುಕ್ರವಾರ ಅಸ್ತಮಿಸುವ ಶನಿವಾರ ರಾತ್ರಿಯು ಕಟ್ಟದಪಡ್ಪು ಮರ್ಹೂಂ ಜಿ.ಎಂ ಇಸ್ಮಾಯಿಲ್ ವೇದಿಕೆಯಲ್ಲಿ ನಡೆಯಲಿದೆ.
ಪ್ರಸ್ತುತ ಕಾರ್ಯಕ್ರಮದಲ್ಲಿ ಸಯ್ಯಿದ್ ಹಂಝ ತಂಙಳ್ ಕರ್ಪಾಡಿ ಯವರು ಧನ್ಯ ನೇತೃತ್ವ ನೀಡಲಿದ್ದಾರೆ. ಅಲ್ ಮದದ್ ಸುನ್ನಿ ಝುಮಲಾ ಸಾರಥಿ ಜಿ.ಎಂ ಹಬೀಬುರ್ರಹ್ಮಾನ್ ಅಹ್ಸನಿ ಕಟ್ಟದಪಡ್ಪು ರವರು ತಮ್ಮ ಅತ್ಯುತ್ತಮವಾದ ಶೈಲಿಯ ಮೂಲಕ ಕಾರ್ಯಕ್ರಮದಲ್ಲಿ ಉದ್ಭೋದನೆ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿ ಸ್ಥಳೀಯ ಖತೀಬ್ ಶರೀಫ್ ಅಝ್ಹರಿ, ಕುಲಾಲ್ ಖತೀಬ್ ಮಸ್ಊದ್ ಸ ಅದಿ, ಮಾವಿನಕಟ್ಟೆ ಖತೀಬ್ ಜಬ್ಬಾರದ ಸ ಅದಿ, ಕಕ್ಯಪದವು ಖತೀಬ್ ಅಬೂಬಕ್ಕರ್ ಸ ಅದಿ, ಮಜೀದ್ ಮಿಸ್ಬಾಹಿ , ಮುಸ್ತಫ ಅಝ್ಹರಿ, ಗಫ್ಫಾರ್ ಸ ಅದಿ, ಹಿದಾಯತ್ ಲತೀಫಿ, ಹನೀಫ್ ಝುಹ್ರಿ, ಮಣಿನಾಲ್ಕೂರು ಗ್ರಾಮ ಪಂಚಾಯತ್ ಸದಸ್ಯ ಜಿ.ಎಂ.ಫಾರೂಕ್ ಕಟ್ಟದಪಡ್ಪು ಹಾಗೂ ಇನ್ನಿತರ ಉಲಮಾ ನೇತಾರರು, ಉಮಾರಾ ನಾಯಕರು, ಸಮಾಜಿಕ ಕಾರ್ಯಕರ್ತರು ಭಾಗವಹಿಸಲಿದ್ದಾರೆ.







