ರಿಯಾದ್: ರೆಸ್ಟೋರೆಂಟ್‌ಗಳು, ಕೋಫಿ ಶಾಪ್, ಸೂಪರ್‌ಮಾರ್ಕೆಟ್‌ಗಳು ಮತ್ತು ಹೈಪರ್‌ಮಾರ್ಕೆಟ್‌ಗಳಲ್ಲಿ ದೇಶೀಕರಣವನ್ನು ಜಾರಿಗೆ ತರಲು ಸೌದಿ ಅರೇಬಿಯಾದ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ.ಕೆಲವೇ ದಿನಗಳಲ್ಲಿ ನಿರ್ಧಾರ ಪ್ರಕಟಿಸಲಾಗುವುದೆಂದು ವರದಿಯಾಗಿದೆ.
ಸಂಸ್ಥೆಯ ವಿಸ್ತೀರ್ಣವನ್ನು ಗಣಿಸಿ ದೇಶೀಕರಣವನ್ನು ಜಾರಿ ಮಾಡಲಾಗುತ್ತದೆ.ವರದಿಯ ಪ್ರಕಾರ, 30 ಚದರ ಮೀಟರ್‌ಗಿಂತ ಹೆಚ್ಚು ವಿಸ್ತೀರ್ಣ ಹೊಂದಿರುವ ಸಂಸ್ಥೆಗಳಿಗೆ ದೇಶೀಕರಣ ಅನ್ವಯವಾಗುತ್ತದೆ.
ರೆಸ್ಟೋರೆಂಟ್‌ಗಳು, ಕೋಫಿ ಶಾಪ್ ಗಳು, ಸೂಪರ್‌ಮಾರ್ಕೆಟ್‌ಗಳು ಮತ್ತು ಹೈಪರ್‌ಮಾರ್ಕೆಟ್‌ಗಳಲ್ಲಿ ಕ್ಯಾಷಿಯರ್, ಸುಪರ್ವೈಸರ್, ಮೇನೇಜರ್ ಹುದ್ದೆಗಳಲ್ಲಿ ದೇಶೀಕರಣ ನಡೆಯಲಿದೆ. ಶುಚೀಕರಿಸುವಂತಹ ಕೆಳಗಿನ ಮಟ್ಟದ ಉದ್ಯೋಗಗಳಿಗೆ ಇದು ಅನ್ವಯಿಸುವುದಿಲ್ಲ.