ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆ KCF ಗೆ ”ಫೌಂಡೇಶನ್ ದಿನದ” ಸಂಭ್ರಮ
✍🏻 ಪಿ.ಕೆ.ಎಂ.ಹನೀಫ್ ಉರುವಾಲು ಪದವು
(ಕೆ.ಸಿ.ಎಫ್.ರಿಯಾದ್)
ಕರ್ನಾಟಕ ಕಲ್ಚರಲ್ ಫೌಂಡೇಶನ್ (ಕೆ.ಸಿ.ಎಫ್) ಹೌದು! ಅನಿವಾಸಿ ಕನ್ನಡಿಗರ ತುಡಿತ, ಮಿಡಿತ, ಆಶಾಕೇಂದ್ರ. 8 ವರ್ಷ ತುಂಬಿ ಅಂಬೆಗಾಲಿಡುತ್ತಿರುವ ಪ್ರಸ್ತುಥ ಸಂಘಟನೆ ಅನಿವಾಸಿ ಸುನ್ನೀ ಕನ್ನಡಿಗರ ಆವೇಷ ಧ್ವನಿ.
2013ರ ಫೆಬ್ರವರಿ-15ಕ್ಕೆ UAEಯಲ್ಲಿ ಮರ್ಹೂಂ ಶೈಖುನಾ ಬೇಕಲ್ ಇಬ್ರಾಹೀಂ ಮುಸ್ಲಿಯಾರ್ ಇವರ ಪುಣ್ಯ ಪುನೀತಗೊಂಡ ನಾಲಗೆಯಿಂದ ಘೋಷಣೆಗೊಂಡ ಕೆ.ಸಿ.ಎಫ್.ಸಂಘಟನೆ 10ಸಾವಿರಕ್ಕೂ ಮಿಕ್ಕ ಕಾರ್ಯಕರ್ತರನ್ನೊಳಗೊಂಡು ಇಂದು GCCಯಾದ್ಯಂತ ಹರಡಿ ಲಂಡನ್ ಮಲೇಷ್ಯ ಮಣ್ಣಲ್ಲೂ ಹೆಮ್ಮರವಾಗಿ ಬೆಳೆದು ನಿಂತಿದೆ.
ಅಸ್ಸುಫ್ಫ : ಬಿಸಿಲ ಬೇಗೆಯಿಂದ ಬೆಂದು ಕೊರೆಯುವ ಚಳಿಯಲ್ಲೂ ನಲುಗಿ ಕೆಲಸ ಮುಗಿಸಿ ಬರುವಾಗ ಆತ್ಮೀಯ ಚೈತನ್ಯಕ್ಕಾಗಿ ಆಧ್ಯಾತ್ಮಿಕ ಮತ್ತು ಧಾರ್ಮಿಕ ಭೋದನೆಯೊಂದಿಗೆ ಕೆ.ಸಿ.ಎಫ್.ತನ್ನ ಕಾರ್ಯಕರ್ತರಿಗೆ ಮಜ್ಲಿಸ್ ಏರ್ಪಡಿಸುತ್ತಿದ್ದು, ಇಸ್ಲಾಮಿನ ಕುರಿತು ಒಬ್ಬ ಮುಸ್ಲಿಂ ದೈನಂದಿನ ಬದುಕಿನಲ್ಲಿ ಅರಿತಿರಲೇ ಬೇಕಾದ ತಿಳಿದಿರಬೇಕೆಂಬ ಉದ್ದೇಶದಿಂದ ಪ್ರತ್ಯೇಕ ಪಠ್ಯಾಧರಿತವಾಗಿ ನಡೆಸುತ್ತಾ ಬರುತ್ತಿರುವ ”ಅಸ್ಸುಫ್ಫಾ ತರಗತಿ’ಗಳು ಯುವಕರಿಂದ ಹಿಡಿದು ಇಳಿವಯಸ್ಸಿನ ವನಿಗೂ ಅಪಾರ ಜ್ಞಾನ ಸಂಪಾದಿಸಲು ಉತ್ತಮ ಅವಕಾಶ ವಾಗುತ್ತಿದೆ.
HVC:-ಅಲ್ಲಾಹನ ಅತಿಥಿಗಳಾಗಿ ಆಗಮಿಸುವ ಹಾಜಿಗಳನ್ನು ಸ್ವೀಕರಿಸಿ ಅವರ ಸೇವೆಗೈಯ್ಯುವುದೆಂದರೆ ಪವಿತ್ರ ಹಜ್ ಕರ್ಮ ನಿರ್ವಹಿಸಿದಷ್ಟೇ ಪುಣ್ಯ ಕಾರ್ಯ. ಈ ಒಂದು ಸೌಭಾಗ್ಯ ಲಭಿಸುವ ಕೆ.ಸಿ.ಎಫ್.ಕಾರ್ಯಕರ್ತರು ವರ್ಷಂಪ್ರತಿ ನಡೆಸುತ್ತಿರುವ ನಿಸ್ವಾರ್ಥ ಸೇವೆ ಸ್ತುತಿಯಾರ್ಹ, ಕಳೆದ ನಾಲ್ಕೈದು ವರ್ಷಗಳಿಂದ ಕೆ.ಸಿ.ಎಫ್.ಕಾರ್ಯಕರ್ತರ ಸೇವೆಯನ್ನು ಮೆಚ್ಚಿ ಸೌದಿ ಸರಕಾರ ನೀಡುತ್ತಿರುವ ಅಭಿನಂದನಾ ಪತ್ರವೇ ಇದಕ್ಕೆ ಶಾಕ್ಷಿ.
ಇಫ್ತಾರ್:- ಉಪವಾಸಿಗನನ್ನು ಅನ್ನ ಪಾನೀಯ ನೀಡಿ ಉಪವಾಸ ತೆರೆಸುವುದೆಂದರೆ ಅತ್ಯಂತ ಶ್ರೇಷ್ಟ ಕಾರ್ಯ. ಹೌದು! ಕಳೆದ ಹಲವಾರು ವರ್ಷಗಳಿಂದ ಸಾವಿರಾರು ಮಂದಿಯನ್ನು ಒಟ್ಟು ಸೇರಿಸಿ ಕೆ.ಸಿ.ಎಫ್. ವತಿಯಿಂದ ನಡೆಸಿಕೊಂಡು ಬರುತ್ತಿರುವ ‘ಬೃಹತ್ ಇಫ್ತಾರ್ ‘ಸಂಗಮವೂ ಎಲ್ಲರ ಮನೆ ಮಾತಾಗಿದೆ.
ಸಾಂತ್ವನ ಕಾರ್ಯಕ್ರಮಗಳು:-ಒಂದು ಕಾಲವಿತ್ತು ಪ್ರವಾಸಿಯಾದ ಒಬ್ಬನಿಗೆ ವಿದೇಶದಲ್ಲಿ ಏನಾದರು ಸಂಭವಿಸಿದರೆ ಅಥವಾ ಮರಣ ಸಂಭವಿಸಿದರೆ ಆತನ ವಾರಿಸು ದಾರರನ್ನು ಹುಡುಕುವುದು,ತಿಂಗಳು ಗಟ್ಟಲೆ ಮಯ್ಯಿತನ್ನು ‘ಪ್ರೀಝರ್’ನಲ್ಲಿ ಇಟ್ಟು ದಫನ ಕಾರ್ಯಕ್ಕೂ ಹರಸಾಹಸ ಪಡುತ್ತಿದ್ದ ಕಾಲ.ಅಲ್-ಹಮ್ದುಲಿಲ್ಲಾಹ್..”ಕೆ.ಸಿ.ಎಫ್.ಎಂಬ ಮಹೋನ್ನತ ಸಂಘಟನೆಯ ಉಗಮ ವಾಗುವುದರೊಂದಿಗೆ ಈ ಎಲ್ಲಾ ವಿಷಯಗಳು ಪರಿಹಾರವಾಗಿದ್ದು ತಕ್ಷಣವೇ ಎಲ್ಲದಕ್ಕೂ ಸ್ಪಂದಿಸಿ ಒಂದೆರೆಡು ದಿನಗಳಲ್ಲಿ ಮಯ್ಯಿತ್ ದಫನ ಕಾರ್ಯವನ್ನು ಖುದ್ದು ಕೆ.ಸಿ.ಎಫ್.ಕಾರ್ಯಕರ್ತರ ನಾಯಕರ ಸಮ್ಮಖದಲ್ಲಿ ನಡೆಯುತ್ತಿರುವುದು ಕೆ.ಸಿ.ಎಫ್.ನಿಂದ ಏನು ಉಪಕಾರ ಎಂದು ಕೇಳುವವರಿಗೆ ದಿಟ್ಟ ಉತ್ತರವಾಗಿದೆ.
ಅಲ್ಲದೇ ಇತ್ತೀಚೆಗೆ ನಡೆಯುತ್ತಿರುವ ಜಳಪ್ರಳಯ,ಕೊರೋನ ಲಾಕ್ಡೌನ್ ಸಮಯದಲ್ಲಿ ಕೆ.ಸಿ.ಎಫ್.ನಡೆಸಿದ ಚಾರಿಟಿ ಕೆಲಸಗಳು ಸ್ತುತ್ಯರ್ಥ. ವಿದೇಶ ಮತ್ತು ಸ್ವದೇಶಗಳಲ್ಲಿ ಬಡವರ ಮದುವೆ,ಮನೆ ನಿರ್ಮಾಣ,ಹೀಗೆ ಹತ್ತು ಹಲವು ಕಾರ್ಯಕ್ರಮಗಳು ಲಕ್ಷಾಂತರ ಖರ್ಚುಗಳ ಚಾರಿಟಿ ಕೆಲಸ ನಿರಂತರ ನಡೆಯುತ್ತಿರುವುದು ಕೆ.ಸಿ.ಎಫ್.ಆಶಾದಾಯಕ ಸಂಘಟನೆ ಎಂಬುದಕ್ಕೆ ಮತ್ತೊಂದು ನಿದರ್ಶನ.
ಇಹ್ಸಾನ್:-ಕಳೆದ ಒಂದು ದಶಕಗಳಿಂದ ದೀನ್ ಏನೆಂದು ಅರಿಯದ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ದಕ್ಷಿಣ ಭಾಗದಿಂದ ಇಸ್ಲಾಮಿ ಪ್ರಭೋಧನೆಗಾಗಿ ‘ದಾಇ’ಗಳನ್ನು ಕಳುಹಿಸಿ ಕೊಡಲಾಗುತ್ತಿದ್ದು..”’ಪವಿತ್ರ ರಮಳಾನ್ ತಿಂಗಳಲ್ಲಿ ನೂರಾರು ‘ದಾಇ’ಗಳು ಅಲ್ಲದೇ ವರ್ಷವಿಡೀ ಸ್ಥಿರ ದಾಇಗಳಾಗಿ ಇಸ್ಲಾಮಿನ ಸುಂದರ ಅಶಯವನ್ನು ಪಸರಿಸಿ ನೂರಾರು ಮುಗ್ದ ಮುಸ್ಲಿಂ ಜನತೆಯ ಬದಲಾವಣೆಗೆ ಕಾರಣಿ ಕರ್ತರಾದ ದಾಇಗಳ ಸಂಭಳ ಸಹಿತ ಅಲ್ಲಿ ನಡೆಯುತ್ತಿರುವ ಮಸೀದಿ,ಮದ್ರಸ ಕಟ್ಟಡ ಕಾರ್ಯ ನಿರ್ಮಾಣದಲ್ಲಿ ದೊಡ್ಡ ಮಟ್ಟದಲ್ಲಿ ಕೆ.ಸಿ.ಎಫ್.ಬೆನ್ನುಲುಬಾಗಿ ನಿಂತಿದೆ.
ಈಗಾಗಲೇ ಉತ್ತರ ಕರ್ನಾಟಕದ ಹಲವೆಡೆ ಕೆ.ಸಿ.ಎಫ್.ನೇತೃತ್ವದಲ್ಲಿ ಹಲವು ಮಸೀದಿ,ಮದ್ರಸಗಳು ತಲೆಯೆತ್ತಿ ನಿಂತಿದ್ದು,ವಿವಿಧೆಡೆ ಹಲವು ಮಸೀದಿ ಮದ್ರಸ ಸ್ಥಾಪನೆ ಕಟ್ಟಡಗಳ ಕಾಮಗಾರಿ ಚಾಲನೆಯಲ್ಲಿದೆ.
ಅದೂ ಅಲ್ಲದೆ ಮಳೆ ಕಡಿಮೆ ಇರುವ ಉತ್ತರ ಕರ್ನಾಟಕದಲ್ಲಿ ನೀರಿಗಾಗಿ ಜನಪರಿತಪ್ಪಿಸುತ್ತಿರುವಾಗ ನೀರಿನ ಬೋರುವೆಲು ಕೊರೆದು ಕೊಟ್ಟು ಕುಡಿಯುವ ನೀರಿನ ವ್ಯವಸ್ಥೆ ಮಾಡಿ ಹಲವು ಕುಟುಂಬಗಳ ಮಂದಹಾಸಕ್ಕೆ ಕಾರಣವಾಗಿದೆ ಈ ಕೆ.ಸಿ.ಎಫ್.
ಇಶಾರ:-ಅರಿವಿನ ಜ್ಞಾನ ಹೊತ್ತು ವೈವಿಧ್ಯಮಯ ಬರಹಗಳೊಂದಿಗೆ ಪ್ರತಿ ತಿಂಗಳು ಪ್ರತಿ ಕಾರ್ಯಕರ್ತರ ಮನೆ-ಮನ ಬಾಗಿಲಿಗೆ ತಲುಪುವ ಗಲ್ಫ್ ಇಶಾರ.ಏಕೈಕ ಗಲ್ಫ್ ಕನ್ನಡ ಮಾಸಿಕವಾಗಿದೆ.
ಕೆ.ಸಿ.ಎಫ್ ಅಂಬ್ಯುಲೆನ್ಸ್ ಸೇವೆ ರೋಗ-ರುಜಿನಗಳಿಗೆ ಒಳಗೊಂಡವರಿಗೆ ಸದಾ ಮಿಡಿಯುವ ಕೆ.ಸಿ.ಎಫ್.ವಿದೇಶಗಳಲ್ಲಿ ಮಾತ್ರ ತಮ್ಮ ಸೇವೆಯನ್ನು ಸೀಮಿತ ಗೊಳಿಸದೇ ಊರಿನಲ್ಲಿಯು ಅಗತ್ಯವಿರುವೆಡೆ ರೋಗಿಗಳಿಗೆ ,ಅಪಘಾತಗಳಿಗೆ ಒಳಗೊಂಡವರಿಗೆ ಜೀವ ಉಳಿಸಲು ತಮ್ಮದು ಒಂದು ಪಾಲು ಇರಲಿ ಎಂದು ಈಗಾಗಲೇ ಅಗತ್ಯವಿರುವ ಕೆಲವೆಡೆ ಅಂಬ್ಯುಲೆನ್ಸ್ ಸೇವೆಯನ್ನು ಆರಂಭಿಸಿದ್ದು ಇದು ಹಲವರ ಪಾಲಿಗೆ ಆಶಾದಾಯಕವಾಗಿದೆ.
ರಕ್ತದಾನ ಶಿಬಿರ
”ರಕ್ತದಾನ ಜೀವದಾನ” ಒಂದು ಬಾಟಲಿ ರಕ್ತ ದಾನ ಮಾಡುವುದು ಒಂದು ಜೀವಕ್ಕೆ ಮರುಜೀವ ಕೊಟ್ಟಂತೆ.ಕೆ.ಸಿ.ಎಫ್.ಕಾರ್ಯಕರ್ತರು ಯಾರಿಗಾದರು ರಕ್ತ ಬೇಕೆಂಬ ಒಂದು ಸಣ್ಣ ಮೆಸೇಜ್ ಹಾಕಿದರೆ ಕ್ಷಣಮಾತ್ರದಲ್ಲಿ ರಕ್ತದ ಅವಶ್ಯಕತೆಇರುವ ಏರಿಯಾಯದವರು ತಮ್ಮ ಕೆಲಸ ಕಾರ್ಯವನ್ನು ಬದಿಗಿಟ್ಟು ತಕ್ಷಣವೇ ಸ್ಪಂದಿಸಿ ಬೇಕಾದ ರಕ್ತದ ಅವಶ್ಯವನ್ನು ಪೊರೈಸಿ ಕೊಡುವಲ್ಲಿ ಯಶಸ್ವಿಯಾಗುತ್ತಿದ್ದು,ಇದಕ್ಕಾಗಿ ರಕ್ತ ನೀಡುವ ಪ್ರತ್ಯೇಕ ಟೀಮ್ ಗಳು ಕಾರ್ಯಚರಿಸುತ್ತಿರುವುದು ಅಭಿನಂದನಾ ಮತ್ತು ಶ್ಲಾಘನೀಯ ಸಂಗತಿ.
ಹೀಗೆ ಧಾರ್ಮಿಕ,ಸಾಮಾಜಿಕ, ಸಾಮೂದಾಹಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸದಾ ಸುದ್ದಿಯಲ್ಲಿರುವ ಕರ್ನಾಟಕ ಏಕೈಕ ಸುನ್ನೀ ಸಂಘಟನೆ ಕೆ.ಸಿ..ಎಫ್.ಇದರ ಪ್ರತಿಯೊಂದು ಕಾರ್ಯಚಟುವಿಟಿಕೆಗಳಲ್ಲೂ ಪ್ರತಿಯೊಬ್ಬ ಸದಸ್ಯರ ಅಹರ್ನಿಶಿ ದುಡಿಮೆಯ ಫಲವಾಗಿದೆ.
ಅಲ್ಲಾಹು ನಮ್ಮಿಂದ ಎಲ್ಲವೂ ಖಬೂಲ್ ಮಾಡಲಿ,ಸಮುದಾಯಕ್ಕಾಗಿ ಸಮಾಜಕ್ಕಾಗಿ ದುಡಿಯಲು ಬಡವರ ಕಣ್ಣೀರ ಒಪ್ಪಲು ಅಲ್ಲಾಹು ಕೆ.ಸಿ.ಎಫ್.ಸಂಘಟನೆಗೆ ತೌಫೀಖ್ ನೀಡಲಿ-ಆಮೀನ್.