janadhvani

Kannada Online News Paper

ದಾರುಲ್ ಮುಸ್ತಫಾ ಸಮ್ಮೇಳನ- ಮದನೀಸ್ ಬೆಳ್ತಂಗಡಿ ತಾಲೂಕು ಯಶಸ್ವಿಗೆ ಕರೆ

ಬೆಳ್ತಂಗಡಿ: ಕರ್ನಾಟಕ ಜಂಇಯತುಲ್ ಉಲಮಾ ರಾಜ್ಯ ಕಾರ್ಯದರ್ಶಿ, ಸುನ್ನೀ ಕರ್ನಾಟಕದ ಆವೇಶ ಧ್ವನಿ, ಕರ್ಮಶಾಸ್ತ್ರ ವಿದ್ವಾಂಸ, ಬಿದ‌ಈಗಳ ಸಿಂಹ ಸ್ವಪ್ನ ಗೌರವಾನ್ವಿತ ತೋಕೆ ಉಸ್ತಾದ್ ನಡೆಸುತ್ತಿರುವ ದಾರುಲ್ ಮುಸ್ತಫಾ ಮೋರಲ್ ಅಕಾಡೆಮಿ ನೆಚ್ಚಬೆಟ್ಟು ಇದರ ಪ್ರಥಮ ಸನದುದಾನ ಮಹಾ ಸಮ್ಮೇಳನವು ಫೆ.23/24/25 ದಿನಾಂಕಗಳಲ್ಲಿ ನಡೆಯಲಿದೆ.

ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದ್ ಭಾಗವಹಿಸುವ ಈ ಸಮಾರಂಭವನ್ನು ಯಶಸ್ವಿ ಗೊಳಿಸಲು ಮದನೀಸ್ ಬೆಳ್ತಂಗಡಿ ತಾಲೂಕು ಕರೆ ನೀಡಿದೆ. ಮದನಿ ವಿದ್ವಾಂಸರು ತಮ್ಮ ಮೊಹಲ್ಲಾ ವ್ಯಾಪ್ತಿಯಲ್ಲಿ ತಮಗೆ ಸಾಧ್ಯವಾಗುವ ರೀತಿಯಲ್ಲಿ ಸಮ್ಮೇಳನದ ಪ್ರಚಾರವನ್ನು ನಡೆಸಿ ಸುನ್ನತ್ ಜಮಾಅತ್ ನ ಬೆಳವಣಿಗೆಗೆ ತಮ್ಮಿಂದಾಗುವ ಸೇವೆ ನಡೆಸಬೇಕೆಂದು ಮದನೀಸ್ ಬೆಳ್ತಂಗಡಿ ತಾಲೂಕು ಅಧ್ಯಕ್ಷರಾದ ಶರೀಪ್ ಮದನಿ ಕರ್ಪಾಡಿ, ಪ್ರ.ಕಾರ್ಯದರ್ಶಿ ಇಸ್ಮಾಯಿಲ್ ಮದನಿ ಕೊಯ್ಯೂರು, ಕೋಶಾಧಿಕಾರಿ P S ಇಬ್ರಾಹಿಂ ಮದನಿ ತುರ್ಕಲಿಕೆ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

error: Content is protected !! Not allowed copy content from janadhvani.com