ಮಂಗಳೂರು:- 2021ಜನವರಿ 31 ಆದಿತ್ಯವಾರದಂದು ಬೆಳಿಗ್ಗೆ 10 ಘಂಟೆಗೆ ಮರಿಕ್ಕಳ ಜುಮಾ ಮಸ್ಜಿದ್ ಸಭಾಂಗಣದ ವೇದಿಕೆಯಲ್ಲಿ ನಡೆದ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದರ ಅನುಸ್ಮರಣಾ ಕಾರ್ಯಕ್ರಮ ಹಾಗೂ ಬಾಹಸನಿ ಸಂಗಮವು ಬಹಳ ವಿಜೃಂಭಣೆಯಿಂದ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಮರಿಕ್ಕಳ ಜುಮಾ ಮಸ್ಜಿದ್ ಇದರ ಅಧ್ಯಕ್ಷರಾದ ಅಬ್ಬಾಸ್ ಕೊಡಂಚಿಲ್ ಇವರು ವಹಿಸಿ, ಕೆ.ಎಂ. ಹಸನ್ ತ್ವಯ್ಯಿಬ್ ಬಾಹಸನಿ ಕರ್ವೇಲು ಅತಿಥಿಗಳನ್ನು ಸ್ವಾಗತಿಸಿದರು. ಬೇಕಲ್ ಜುಮಾ ಮಸ್ಜಿದ್ ಮುದರ್ರಿಸರಾದ ಆಸಿಫ್ ಹಿಮಮಿಯವರು ಸಭೆಯನ್ನು ಉದ್ಘಾಟಣೆಗೈದರು. ಅನಸ್ ಸಿದ್ದೀಖಿ ಕಾಮಿಲ್ ಸಖಾಫಿ ಶಿರಿಯಾ, ಮಜ್ಲಿಸ್ ಇಶಾಅತುಸುನ್ನ ಬೇಕಲ್ ಇದರ ಅಧ್ಯಕ್ಷರಾದ ಅಬ್ದುಲ್ ಜಲೀಲ್ ಸಖಾಫಿ ಜಾಲ್ಸೂರ್ ಮತ್ತು ಉಸ್ತಾದರ ಸುಧೀರ್ಘ ಕಾಲ ಖಾದಿಮ್ ಆಗಿ ಸೇವೆ ಭಾಗ್ಯ ಲಭಿಸಿದ ಎಪಿ ಇಸ್ಹಾಕ್ ಬಾಹಸನಿ ಆತೂರ್ ರವರು ಶೈಖುನಾ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದರ ಅನುಸ್ಮರಣಾ ಪ್ರಭಾಷಣ ನಡೆಸಿದರು.
ಮುಸ್ಲಿಂ ಜಮಾಅತ್ ಉಳ್ಳಾಲ ತಾಲೂಕು ಪ್ರಧಾನ ಕಾರ್ಯದರ್ಶಿಯಾದ ಶೈಖುನಾರ ಸುಪುತ್ರ ಅಬ್ದುಲ್ ಜಲೀಲ್ ಮಾಸ್ಟರ್ ಮರಿಕ್ಕಳ ಆಶಂಸಾ ಭಾಷಣಗೈದರು. ದುಆ ಮಜ್ಲಿಸಿಗೆ ಸೈಯ್ಯದ್ ಸಾದಾತ್ ತಂಙಳ್ ಕರ್ವೇಲು ನೇತೃತ್ವ ವಹಿಸಿ, ನಂತರ ಮರಿಕ್ಕಳ ಸುನ್ನೀ ಸೆಂಟರಿನಲ್ಲಿ ಶೈಖುನಾ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದರ ಶಿಷ್ಯಂದಿರುಗಳ ಜಂಇಯ್ಯತುಲ್ ಬಾಹಸನಿಯ್ಯೀನ್ ಇದರ ಸಂಗಮವು ನಡೆಯಿತು.
2021-22 ರ ಸಾಲಿನ ನೂತನ ಪದಾಧಿಕಾರಿಗಳನ್ನು ಇದೇ ವೇಳೆ ಆಯ್ಕೆ ಮಾಡಿ ನೂತನ ಅಧ್ಯಕ್ಷರಾಗಿ ಎ.ಪಿ. ಇಸ್ಹಾಕ್ ಬಾಹಸನಿ ಆತೂರ್, ಪ್ರಧಾನ ಕಾರ್ಯದರ್ಶಿಯಾಗಿ ತ್ವಯ್ಯಿಬ್ ಬಾಹಸನಿ ಕರ್ವೇಲು, ಕೋಶಾಧಿಕಾರಿಯಾಗಿ ಅಮೀರ್ ಬಾಹಸನಿ ಸಿದ್ದಕಟ್ಟೆ ಇವರನ್ನು ಸರ್ವಾನುಮತ ಅಂಗೀಕಾರದೊಂದಿಗೆ ಆಯ್ಕೆಮಾಡಲಾಯಿತು.
ಉಪಾಧ್ಯಕ್ಷರಾಗಿ ಮಸ್ಹೂದ್ ಬಾಹಸನಿ ತೌಡುಗೋಳಿ ಮತ್ತು ಫಾರೂಖ್ ಬಾಹಸನಿ ಮೊಂಟೆಪದವು, ಕಾರ್ಯದರ್ಶಿಗಳಾಗಿ ಝೈದ್ ಬಾಹಸನಿ ಕಕ್ಕಿಂಜೆ ಮತ್ತು ಶಕೀರ್ ಬಾಹಸನಿ ಚೆರ್ವತ್ತೂರ್ ಗಲ್ಫ್ ಎಕ್ಸಿಕ್ಯೂಟಿವ್ ಚೆಯರ್ಮೇನ್ ಆಗಿ ಅಬ್ದುಲ್ ಮಜೀದ್ ಬಾಹಸನಿ ಜಾರಿಗೆಬೈಲು ಹಾಗೂ ಕನ್ವೀನರಾಗಿ ಜಲಾಲುದ್ದೀನ್ ಬಾಹಸನಿ ಉಳ್ತೂರ್ ಇವರನ್ನು ಆಯ್ಕೆ ಮಾಡಿ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ನೌಶಾದ್ ಬಾಹಸನಿ ಪಂಜಿಕಲ್, ಅಬ್ದುಲ್ ಮತೀನ್ ಬಾಹಸನಿ ಸಿದ್ದಕಟ್ಟೆ, ಮಹಮ್ಮದ್ ಶಫೀಕ್ ಬಾಹಸನಿ ತೋಕೆ ಮತ್ತು ನಾಸಿರ್ ಬಾಹಸನಿ ಕನಕಮಜಲು ಇವರನ್ನು ಆಯ್ಕೆಮಾಡಲಾಯಿತು.
ಮಸ್ಹೂದ್ ಬಾಹಸನಿ ತೌಡುಗೋಳಿಯವರ ಧನ್ಯವಾದಗಳೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.