ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನಲ್ಲಿ ಕಳೆದ ಇಪ್ಪತ್ತು ವರ್ಷಗಳಿಂದ ಕಲಿತ ಸುಮಾರು ಎರಡುವರೆ ಸಾವಿರ ಹಳೆವಿದ್ಯಾರ್ಥಿನಿಯರ ಬೃಹತ್ ಸಮಾವೇಶವು (ಅಲುಂನಿ ಅಸೆಂಬ್ಲಿ) ಇತ್ತೀಚೆಗೆ ಕುಂಬ್ರ ಮರ್ಕಝ್‌ನಲ್ಲಿ ನಡೆಯಿತು. ಮುಂದಿನ ಎರಡು ವರ್ಷಗಳ ಸಾಲಿನ ಅಲುಂನಿ ಅಸೋಸಿಯೇಷನ್ ಪದಾಧಿಕಾರಿಗಳನ್ನು ಘೋಷಣೆ ಮಾಡಲಾಯಿತು. ಆಯ್ಕೆ ಪ್ರಕ್ರಿಯೆಗೆ ಪಿ.ಯು ಕಾಲೇಜ್ ಪ್ರಿನ್ಸಿಪಾಲ್ ಸಂಧ್ಯಾ ಪಿ.ಶೆಟ್ಟಿ ನೇತೃತ್ವ ಕೊಟ್ಟರು.
ಅಧ್ಯಕ್ಷೆಯಾಗಿ ಖದೀಜಾ ತಝ್‌ಕಿಯಾ ಕಲ್ಲಾಪು, ಮಂಗಳೂರು.
ಪ್ರಧಾನ ಕಾರ್ಯದರ್ಶಿಯಾಗಿ ಸ್ವಫಿಯಾ ಅಲ್ ಮಾಹಿರಾ ಪುಣಚ
ಕೋಶಾಧಿಕಾರಿಯಾಗಿ ಶಾಹಿಸ್ತಾ ನಾಸಿರುದ್ದೀನ್ ಕಬಕ
ಉಪಾಧ್ಯಕ್ಷರಾಗಿ ಶಾಲಿಸಾ ಅಲ್ ಮಾಹಿರಾ ಚೆನ್ನಾವರ & ಸೌಬಾ ಖಾನ್ಸಾ ತುಂಬೆ
ಕಾರ್ಯದರ್ಶಿಗಳಾಗಿ ಸೌದಾ ಹಸೀನಾ ಈಶ್ವರಮಂಗಳ & ಕೆಕೆ ಮಿಸ್ರಿಯಾ ಕಳಂಜಿಬೈಲು
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅದವಿಯ್ಯ ಅಲ್ ಮಾಹಿರಾ ಕೆಸಿ ರೋಡ್, ಫಾತಿಮಾ ಸಫೀದಾ, ಶಮೀಮ ಕೆ, ಸುಮಯ್ಯ ಅಲ್ ಮಾಹಿರಾ ಕಂಬಳಬೆಟ್ಟು, ಹನ್ನತ್ ಮುಕ್ವೆ, ಆಯಿಶಾ ಅರ್ಶಿದಾ, ಹಫ್ಸತ್ ಮುಂತಾಝ್, ಬುಶ್ರಾ ಅಲ್ ಮಾಹಿರಾ ಅರಿಯಡ್ಕ, ತಾಹಿರಾ ಎಂ.ಎಸ್.ಮಾಣಿ, ಫರ್ಝೀನಾ ಅಲ್ ಮಾಹಿರಾ ಕೊಡಗು & ಮಿಸ್ರಿಯಾ ಪರ್ಪುಂಜ ಇವರನ್ನು ಆಯ್ಕೆ ಮಾಡಲಾಯಿತು.