janadhvani

Kannada Online News Paper

ಎಸ್ಸೆಸ್ಸೆಫ್ ಚಿತ್ರದುರ್ಗ ಜಿಲ್ಲೆಗೆ ನವ ಸಾರಥ್ಯ

ಚಿತ್ರದುರ್ಗ: ಜ:24: ಚಿತ್ರದುರ್ಗ ಜಿಲ್ಲಾ SSF ವಾರ್ಷಿಕ ಮಹಾಸಭೆಯು ಇಂದು ಚಿತ್ರದುರ್ಗ ನಗರದ ಇಹ್ಸಾನ್ ಮದ್ರಸ ಹಾಲ್ ನಲ್ಲಿ ನಡೆಯಿತು.

ಮಹಮ್ಮದ್ ಫೈಝಾನ್ ಖಾದರ್ ನಾಥ್ ಪಠಿಸಿದರು. ಅಬ್ಫುಲ್ ಕಾದಿರ್ ಸಖಾಫಿ ಕಿರಾಅತ್ ಪಠಿಸುವ ಮೂಲಕ ಕಾರ್ಯಕ್ರಮಕ್ಕೆ ಅಧಿಕೃತ ಚಾಲನೆ ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆಸಿಫ್ ರಝ್ವಿ ಸಭೆಗೆ ಸ್ವಾಗತ ಕೋರಿದರು. ಕಾರ್ದರ್ಶಿಗೆ ಬೇಕಾಗಿ ಅಧ್ಯಕ್ಷರು ಎಮ್ಮೆಸ್ಸೆಂ ಜುನೈದ್ ಸಖಾಫಿ ಹಿಮಮಿ ವಾರ್ಷಿಕ ವರದಿ ವಾಚನ ಮತ್ತು ಲೆಕ್ಕ ಪತ್ರವನ್ನು ಮಂಡಿಸಿದರು.

ಹಾಫಿಝ್ ಆದಂ ಹಝ್ರತ್ ಕೌನ್ಸಿಲರ್ ಗಳಿಗೆ ತರಗತಿ ನೀಡಿದರು. ಕರ್ನಾಟಕ ರಾಜ್ಯ ಎಸ್ಸೆಸ್ಸೆಫ್ ಪ್ರಭಾರ ಅಧ್ಯಕ್ಷರು ಹಾಫಿಝ್ ಸುಫಿಯಾನ್ ಸಖಾಫಿ ರಾಜ್ಯ ಸಮಿತಿ ಸದಸ್ಯರು ಸಫ್ವಾನ್ ಚಿಕ್ಕಮಗಳೂರು ಚುನಾವಣಾ ವೀಕ್ಷಕರಾಗಿ ಆಗಮಿಸಿದರು.

ಹಾಫಿಝ್ ಸುಫಿಯಾನ್ ಸಖಾಫಿ ಉಸ್ತಾದರು ವಿಷಯ ಮಂಡನೆ ನಡೆಸಿದರೆ ಸಫ್ವಾನ್ ಚಿಕ್ಕಮಗಳೂರು ಜಿಲ್ಲೆಗೆ ನೂತನ ಸಮಿತಿಯನ್ನು ಘೋಷಿಸಿದರು.

ಮುಹಮ್ಮದ್ ಫೈಝುಲ್ಲಾ ಪಿ ಅಧ್ಯಕ್ಷರು, ಸದ್ದಾಮ್ ಹುಸೈನ್ ಕೆ ಪ್ರಧಾನ ಕಾರ್ಯದರ್ಶಿ ಮತ್ತು ಸಯ್ಯದ್ ಸಾದಿಕುಲ್ಲಾ ಖಜಾಂಜಿಯಾಗಿ ಜಿಲ್ಲೆಗೆ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.

ನೂತನ ಕಾರ್ಯದರ್ಶಿ ಸದ್ದಾಮ್ ಹುಸೈನ್ ಕೆ ಕೊನೆಯದಾಗಿ ವಂದನೆಗಳನ್ನು ಅರ್ಪಿಸಿದರು.