ರಿಯಾದ್: ದೇಶದ ವಾಟ್ಸಾಪ್ ಬಳಕೆದಾರರಿಗೆ ಸೌದಿ ಹಣಕಾಸು ಸಚಿವಾಲಯ ಎಚ್ಚರಿಕೆ ನೀಡಿದೆ. ವಾಟ್ಸಾಪ್ನಲ್ಲಿ ಗೌಪ್ಯತೆ ನೀತಿಯಲ್ಲಿ ಇತ್ತೀಚಿನ ಬದಲಾವಣೆಯನ್ನು ಆಧರಿಸಿ ಈ ಎಚ್ಚರಿಕೆ ನೀಡಲಾಗಿದೆ. ಗೌಪ್ಯತೆಗೆ ಒತ್ತು ನೀಡುವ ಅಪ್ಲಿಕೇಶನ್‌ಗಳನ್ನು ಬಳಸುವಂತೆ ಸಚಿವಾಲಯವು ಒತ್ತಾಯಿಸಿದೆ.
ವಾಟ್ಸಾಪ್ ಇತ್ತೀಚೆಗೆ ತನ್ನ ಬಳಕೆದಾರರ ಗೌಪ್ಯತೆ ನೀತಿಯನ್ನು ಬದಲಾಯಿಸಿದೆ. ಈ ನಿಟ್ಟಿನಲ್ಲಿ , ವಾಟ್ಸಾಪ್ ಮೂಲಕ ಮಾಹಿತಿಯನ್ನು ಹಂಚಿಕೊಳ್ಳದಂತೆ ಸೌದಿ ಹಣಕಾಸು ಸಚಿವಾಲಯ ಎಚ್ಚರಿಕೆ ನೀಡಿದೆ. ವಾಟ್ಸಾಪ್ ಮೂಲಕ ಸಚಿವಾಲಯಕ್ಕೆ ನೇರವಾಗಿ ಅಥವಾ ಪರೋಕ್ಷವಾಗಿ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಎಂದು ಹಣಕಾಸು ಸಚಿವಾಲಯ ಬಳಕೆದಾರರನ್ನು ಕೇಳಿದೆ. ವೈಯಕ್ತಿಕ ಬಳಕೆಗಾಗಿ ಹೆಚ್ಚಿನ ಗೌಪ್ಯತೆಯನ್ನು ಕಾಪಾಡುವ ಇನ್ನೂ ಅನೇಕ ಅಪ್ಲಿಕೇಶನ್‌ಗಳಿವೆ ಎಂದು ಸಚಿವಾಲಯ ಸೂಚಿಸಿದೆ.
ವಾಟ್ಸ್‌ಆ್ಯಪ್‌ನ ಮೂಲ ಕಂಪನಿಯಾದ ಫೇಸ್‌ಬುಕ್‌ನೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ಮತ್ತು ಷರತ್ತುಗಳನ್ನು ಅಂಗೀಕರಿಸದ ಬಳಕೆದಾರರಿಗೆ ವಾಟ್ಸಾಪ್ ಸೇವೆಯನ್ನು ರದ್ದು ಪಡಿಸುವುದಾಗಿ ವಾಟ್ಸಾಪ್ ಇತ್ತೀಚೆಗೆ ಘೋಷಿಸಿತು. ಅದರಂತೆ, ವಾಟ್ಸಾಪ್ ಬಳಸುವ ಮೊಬೈಲ್‌ನ ಐಪಿ ವಿಳಾಸ ಮತ್ತು ಸ್ಥಳವನ್ನು ನಿರ್ದಿಷ್ಟಪಡಿಸಲಾಗುತ್ತದೆ. ಇದಲ್ಲದೆ, ವಾಟ್ಸಾಪ್ ಫೋನ್ ಸಂಖ್ಯೆಗಳು, ಖಾತೆ ಚಿತ್ರಗಳು ಮತ್ತು ವಾಟ್ಸಾಪ್ ಮೂಲಕ ಮಾಡುವ ಪ್ರತಿಯೊಂದು ಚಟುವಟಿಕೆಯನ್ನು ಫೇಸ್‌ಬುಕ್‌ಗೆ ವರ್ಗಾಯಿಸಲು ಸಾಧ್ಯವಾಗುತ್ತದೆ. ಪರಿಣಾಮವಾಗಿ, ಅನೇಕ ಬಳಕೆದಾರರು ವಾಟ್ಸಾಪ್‌ನಿಂದ ಸಿಗ್ನಲ್‌ನಂತಹ ಇತರ ಅಪ್ಲಿಕೇಶನ್‌ಗಳನ್ನು ಅವಲಂಬಿಸಿದ್ದಾರೆ.